Home ಕ್ರೈಂ ನ್ಯೂಸ್ Anthropic ‘Claude’ AI Safety Alert: ಶೂಟೌಟ್ ಬೆದರಿಕೆ ಹಾಕಿದ ಮಹಿಳೆ ಬಂಧನ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

Anthropic ‘Claude’ AI Safety Alert: ಶೂಟೌಟ್ ಬೆದರಿಕೆ ಹಾಕಿದ ಮಹಿಳೆ ಬಂಧನ!

Share
ಮಹಿಳೆ
Share

ನವದೆಹಲಿ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಜನರು ತಮ್ಮ ದೈನಂದಿನ ಕೆಲಸಗಳಿಗೆ ಮತ್ತು ವೈಯಕ್ತಿಕ ಅನುಭವಗಳನ್ನು ಹಂಚಿಕೊಳ್ಳಲು ಬಳಸುತ್ತಿದ್ದಾರೆ. ಆದರೆ, ಅಮೆರಿಕದ ಫ್ಲೋರಿಡಾದಲ್ಲಿ AI ಚಾಟ್‌ಬಾಟ್ ಅನ್ನು ವೈಯಕ್ತಿಕ ಡೈರಿಯಾಗಿ ಬಳಸುತ್ತಿದ್ದ ಮಹಿಳೆಯೊಬ್ಬರು ಜೈಲು ಸೇರಿರುವ ವಿಚಿತ್ರ ಹಾಗೂ ಎಚ್ಚರಿಕೆಯ ಘಟನೆ ವರದಿಯಾಗಿದೆ.

ಏನಿದು ಘಟನೆ?

ಫ್ಲೋರಿಡಾದ ಬೋನಿತಾ ಸ್ಪ್ರಿಂಗ್ಸ್ ನಿವಾಸಿ, 30 ವರ್ಷದ ಕಾರ್ಲಿ ಮಿಚೆಲ್ ಹೆಲ್ಲರ್ ಎಂಬಾಕೆ ಆಂಥ್ರೋಪಿಕ್ ಸಂಸ್ಥೆಯ ‘ಕ್ಲಾಡ್’ ಎಂಬ AI ಚಾಟ್‌ಬಾಟ್ ಅನ್ನು ತನ್ನ ದಿನಚರಿ ಮಾದರಿಯಲ್ಲಿ ಬಳಸುತ್ತಿದ್ದಳು. ಸೆಪ್ಟೆಂಬರ್ 26 ಮತ್ತು 27 ರಂದು ಆಕೆ ಕ್ಲಾಡ್‌ನಲ್ಲಿ ಕೆಲವು ಆತಂಕಕಾರಿ ಸಂದೇಶಗಳನ್ನು ಟೈಪ್ ಮಾಡಿದ್ದಳು. ಅದರಲ್ಲಿ “ನಾನು ಲೀ ಕೌಂಟಿ ಶೆರಿಫ್ ಕಚೇರಿಯ ಮೇಲೆ ದಾಳಿ ಮಾಡಲು (ಶೂಟೌಟ್) ಯೋಜನೆ ರೂಪಿಸುತ್ತಿದ್ದೇನೆ” ಮತ್ತು “ನನ್ನ ಬಳಿ ಹೊಸ ಗನ್ ಇದೆ” ಎಂದು ಬರೆದಿದ್ದಳು.

ಪೊಲೀಸರ ಕಾರ್ಯಾಚರಣೆ:

ಆಂಥ್ರೋಪಿಕ್ ಸಂಸ್ಥೆಯ ಕಟ್ಟುನಿಟ್ಟಿನ ‘ಸೇಫ್ಟಿ ಸಿಸ್ಟಮ್’ ಈ ಹಿಂಸಾತ್ಮಕ ಸಂದೇಶಗಳನ್ನು ತಕ್ಷಣವೇ ಗುರುತಿಸಿ ಮಾನವ ಪರಿಶೀಲನಾ ತಂಡಕ್ಕೆ ರವಾನಿಸಿತು. ಪ್ರಕರಣದ ತೀವ್ರತೆಯನ್ನು ಅರಿತ ಸಂಸ್ಥೆಯು ತಕ್ಷಣವೇ ಕಾನೂನು ಜಾರಿ ಸಂಸ್ಥೆಗೆ ಮಾಹಿತಿ ನೀಡಿತು. ಮಾಹಿತಿ ಆಧಾರದ ಮೇಲೆ ದಾಳಿ ನಡೆಸಿದ ಲೀ ಕೌಂಟಿ ಶೆರಿಫ್ ಕಚೇರಿಯ ಪೊಲೀಸರು, ಕಾರ್ಲಿ ಮಿಚೆಲ್ ಹೆಲ್ಲರ್ ಅವರನ್ನು ಬಂಧಿಸಿ, ಹಿಂಸಾಚಾರದ ಬೆದರಿಕೆ ಒಡ್ಡಿದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಖಾಸಗಿತನ ಮತ್ತು AI ನಿಯಮಗಳು:

AI ಚಾಟ್‌ಬಾಟ್‌ಗಳು ಬಳಕೆದಾರರ ಜೊತೆ ಖಾಸಗಿಯಾಗಿ ಸಂವಾದ ನಡೆಸಿದರೂ, ಭದ್ರತೆ ಹಾಗೂ ಸುರಕ್ಷತೆಯ ದೃಷ್ಟಿಯಿಂದ ಹಿಂಸಾಚಾರ, ಜೀವ ಬೆದರಿಕೆ ಅಥವಾ ಕಾನೂನುಬಾಹಿರ ಚಟುವಟಿಕೆಗಳ ಸಂದೇಶಗಳನ್ನು ಸಂಸ್ಥೆಗಳು ಸ್ವಯಂಚಾಲಿತವಾಗಿ ಪರಿಶೀಲಿಸುತ್ತವೆ. ತೀವ್ರ ಸ್ವರೂಪದ ಬೆದರಿಕೆ ಕಂಡುಬಂದಲ್ಲಿ, ಪೊಲೀಸರಿಗೆ ಮಾಹಿತಿ ನೀಡಲು ಕಂಪನಿಗಳಿಗೆ ಕಾನೂನಿನಲ್ಲಿ ಅವಕಾಶವಿದೆ.
Share

Leave a comment

Leave a Reply

Your email address will not be published. Required fields are marked *

Related Articles