Home ಕ್ರೈಂ ನ್ಯೂಸ್ ಹೈದರಾಬಾದ್‌ನಲ್ಲಿ ರಾಜಕೀಯ ಕಿಡಿ: ಕಾಂಗ್ರೆಸ್‌ಗೆ ಬಿಜೆಪಿಯ ‘ಇಟಾಲಿಯನ್ ಮೈಂಡ್‌ಸೆಟ್’ ಟಾಂಗ್, ಅಸೆಂಬ್ಲಿಯಲ್ಲಿ ಚರ್ಚೆಗೆ ರೇವಂತ್ ರೆಡ್ಡಿ ಸವಾಲು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಹೈದರಾಬಾದ್‌ನಲ್ಲಿ ರಾಜಕೀಯ ಕಿಡಿ: ಕಾಂಗ್ರೆಸ್‌ಗೆ ಬಿಜೆಪಿಯ ‘ಇಟಾಲಿಯನ್ ಮೈಂಡ್‌ಸೆಟ್’ ಟಾಂಗ್, ಅಸೆಂಬ್ಲಿಯಲ್ಲಿ ಚರ್ಚೆಗೆ ರೇವಂತ್ ರೆಡ್ಡಿ ಸವಾಲು!

Share
ಹೈದರಾಬಾದ್‌
Share

ಹೈದರಾಬಾದ್: ಮುಂಬರುವ ಹೈದರಾಬಾದ್ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ಮುನ್ನ ತೆಲಂಗಾಣ ರಾಜಕಾರಣದಲ್ಲಿ ವಾಗ್ದಾಳಿ ತೀವ್ರಗೊಂಡಿದೆ.

ಭಾನುವಾರ ನಡೆದ ಬಿಜೆಪಿ ಬೂತ್ ಅಧ್ಯಕ್ಷರ ಸಭೆಯಲ್ಲಿ ಮಾತನಾಡಿದ ಬಿಜೆಪಿ ಮುಖಂಡ ನಿತಿನ್ ನಬಿನ್, ಕಾಂಗ್ರೆಸ್ ಪಕ್ಷವನ್ನು ವಂಶಪಾರಂಪರ್ಯ ರಾಜಕಾರಣ ಮತ್ತು ಭ್ರಷ್ಟಾಚಾರದ ಸಂಕೇತ ಎಂದು ಕರೆದಿದ್ದಾರೆ.

“ಇಟಾಲಿಯನ್ ಮನಸ್ಥಿತಿ” ಇರುವ ಸರ್ಕಾರಕ್ಕೆ ಭಾರತದಲ್ಲಿ ಯಾವುದೇ ಅವಕಾಶವಿಲ್ಲ ಎಂದು ಸೋನಿಯಾ ಗಾಂಧಿ ಅವರ ವಿದೇಶಿ ಹಿನ್ನೆಲೆಯನ್ನು ಪರೋಕ್ಷವಾಗಿ ಉಲ್ಲೇಖಿಸಿ ಟೀಕಿಸಿದ್ದಾರೆ.

ಇದರೊಂದಿಗೆ ಬಿಆರ್‌ಎಸ್ ಹಾಗೂ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷಗಳು ಕೇವಲ ವೋಟ್ ಬ್ಯಾಂಕ್ ಮತ್ತು ಧರ್ಮದ ರಾಜಕಾರಣ ಮಾಡುತ್ತಿವೆ ಎಂದು ಕಿಡಿಕಾರಿದ್ದಾರೆ.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಸೈದ್ಧಾಂತಿಕ ವಾಗ್ದಾಳಿಗೆ ತಲೆಕೆಡಿಸಿಕೊಳ್ಳದೆ ನೇರ ಆಡಳಿತದ ಸವಾಲು ಹಾಕಿದ್ದಾರೆ. “ಕೇಂದ್ರದ 12 ವರ್ಷಗಳ ಬಿಜೆಪಿ ಆಡಳಿತ, 10 ವರ್ಷಗಳ ಬಿಆರ್‌ಎಸ್ ಆಡಳಿತ ಮತ್ತು ನಮ್ಮ ಎರಡುವರೆ ವರ್ಷಗಳ ಕಾಂಗ್ರೆಸ್ ಆಡಳಿತದ ಪ್ರಗತಿ ಪತ್ರಗಳ ಬಗ್ಗೆ ವಿಧಾನಸಭೆಯಲ್ಲೇ ಬಹಿರಂಗ ಚರ್ಚೆ ನಡೆಸೋಣ, ತಾಕತ್ತಿದ್ದರೆ ಬನ್ನಿ” ಎಂದು ಬಿಜೆಪಿ ನಾಯಕರಿಗೆ ಸವಾಲು ಎಸೆದಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles