Home ಉದ್ಯೋಗ ವಾರ್ತೆ 900 ನೌಕರರನ್ನು ಜೂಮ್ ಕಾಲ್‌ನಲ್ಲಿ ವಜಾ ಮಾಡಿದ್ದ ಸಿಇಒ ವಿಶಾಲ್ ಗಾರ್ಗ್‌ಗೆ ಶಾಕ್: ಸ್ವತಃ ಹುದ್ದೆಯಿಂದಲೇ ವಜಾ!
ಉದ್ಯೋಗ ವಾರ್ತೆದಾವಣಗೆರೆನವದೆಹಲಿಬೆಂಗಳೂರು

900 ನೌಕರರನ್ನು ಜೂಮ್ ಕಾಲ್‌ನಲ್ಲಿ ವಜಾ ಮಾಡಿದ್ದ ಸಿಇಒ ವಿಶಾಲ್ ಗಾರ್ಗ್‌ಗೆ ಶಾಕ್: ಸ್ವತಃ ಹುದ್ದೆಯಿಂದಲೇ ವಜಾ!

Share
ವಿಶಾಲ್ ಗಾರ್ಗ್‌
Share

ನ್ಯೂಯಾರ್ಕ್: 2021ರಲ್ಲಿ ಬೋರ್ಡ್ ಮೀಟಿಂಗ್‌ನ ಜೂಮ್ (Zoom) ವೀಡಿಯೊ ಕರೆಯಲ್ಲಿ ಯಾವುದೇ ಮುನ್ಸೂಚನೆ ನೀಡದೆ 900 ನೌಕರರನ್ನು ಏಕಾಏಕಿ ವಜಾಗೊಳಿಸಿ ವಿವಾದ ಸೃಷ್ಟಿಸಿದ್ದ ‘ಬೆಟರ್ ಹೋಮ್ ಅಂಡ್ ಫೈನಾನ್ಸ್’ (Better Home & Finance) ಕಂಪನಿಯ ಭಾರತೀಯ ಮೂಲದ ಸಿಇಒ ವಿಶಾಲ್ ಗಾರ್ಗ್ (Vishal Garg) ಅವರನ್ನೇೀಗ ಕಂಪನಿ ಹುದ್ದೆಯಿಂದ ವಜಾಗೊಳಿಸಲಾಗಿದೆ.

ಆಗಸ್ಟ್ 3 ರಂದು ಬೆಟರ್ ಕಂಪನಿಯ ನಿರ್ದೇಶಕರ ಮಂಡಳಿಯು ವಿಶಾಲ್ ಗಾರ್ಗ್ ಅವರನ್ನು ಸಿಇಒ ಹುದ್ದೆಯಿಂದ ತೆಗೆದುಹಾಕಿದ್ದು, ಹೆಡ್ಜ್ ಫಂಡ್ ಮ್ಯಾನೇಜರ್ ಡೆನಿಯಲ್ ಲೂಯಿಸ್ (Daniel Lewis) ಅವರನ್ನು ನೂತನ ಸಿಇಒ ಆಗಿ ನೇಮಕ ಮಾಡಿದೆ. ಮಂಡಳಿಗೆ ಸೇರ್ಪಡೆಯಾದ ಕೆಲವೇ ದಿನಗಳಲ್ಲಿ ಲೂಯಿಸ್ ಈ ಹುದ್ದೆಯನ್ನು ವಹಿಸಿಕೊಂಡಿದ್ದಾರೆ.

ಬೆನ್ನಿಗೆ ಇರಿದ ಸನ್ನಿವೇಶ:

ತಮ್ಮ ವಜಾದ ಕುರಿತು ಪ್ರತಿಕ್ರಿಯಿಸಿರುವ ವಿಶಾಲ್ ಗಾರ್ಗ್, “ಡೆನಿಯಲ್ ಲೂಯಿಸ್ ನನ್ನನ್ನು ವಂಚಿಸಿದ್ದಾರೆ. ಕಂಪನಿಯ ವೆಚ್ಚ ಕಡಿಮೆ ಮಾಡುವ ನೆಪದಲ್ಲಿ ನನ್ನ ನಂಬಿಕೆಗಳಿಸಿ ಬೋರ್ಡ್ ಸೀಟ್ ಗಿಟ್ಟಿಸಿಕೊಂಡರು. ನಂತರ ನಿರ್ದೇಶಕರನ್ನು ಒಲಿಸಿಕೊಂಡು ನನ್ನನ್ನೇ ಕಂಪನಿಯಿಂದ ಹೊರಹಾಕಿದ್ದಾರೆ” ಎಂದು ಆರೋಪಿಸಿದ್ದಾರೆ.

ಸತತ ನಷ್ಟ ಮತ್ತು ಹಿನ್ನಡೆ:

ಕೊರೊನಾ ಸಮಯದಲ್ಲಿ 8 ಬಿಲಿಯನ್ ಡಾಲರ್ ಮೌಲ್ಯ ಹೊಂದಿದ್ದ ಈ ಕಂಪನಿಯು, ಗೃಹ ಸಾಲದ ಬಡ್ಡಿದರ ಹೆಚ್ಚಾದ ನಂತರ ತೀವ್ರ ಸಂಕಷ್ಟಕ್ಕೆ ಸಿಲುಕಿತು. ಕಂಪನಿಯ ಮೌಲ್ಯ 300 ಮಿಲಿಯನ್ ಡಾಲರ್‌ಗೆ ಕುಸಿದಿದ್ದಲ್ಲದೆ, 2021 ರಲ್ಲಿ 1.5 ಬಿಲಿಯನ್ ಡಾಲರ್ ಇದ್ದ ಆದಾಯ 2023 ರಲ್ಲಿ 70 ಮಿಲಿಯನ್ ಡಾಲರ್‌ಗೆ ಇಳಿಕೆಯಾಗಿತ್ತು.

ಪ್ರಸ್ತುತ ಗಾರ್ಗ್ ಪ್ರಖ್ಯಾತ ವಕೀಲ ಅಲೆಕ್ಸ್ ಸ್ಪಿರೋ (Alex Spiro) ಅವರನ್ನು ನೇಮಿಸಿಕೊಂಡಿದ್ದು, ಕಂಪನಿ ಲಾಭದಾಯಕವಾಗುವವರೆಗೆ ವರ್ಷಕ್ಕೆ ಕೇವಲ 1 ಡಾಲರ್ ವೇತನದಲ್ಲಿ ಕೆಲಸ ಮಾಡಲು ಸಿದ್ಧವಿರುವುದಾಗಿ ತಿಳಿಸಿ ಮರಳಿ ಸಿಇಒ ಹುದ್ದೆ ಪಡೆಯಲು ಕಾನೂನು ಸಮರಕ್ಕೆ ಮುಂದಾಗಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles