ಮುಂಬೈ: ಚಿತ್ರ ನಿರ್ದೇಶಕ ಅನುರಾಗ್ ಕಶ್ಯಪ್ (53) ಮತ್ತು ಅವರ ಪ್ರಿಯತಮೆ ಶುಭ್ರಾ ಶೆಟ್ಟಿ (30ರ ಹರೆಯ) ತಮ್ಮ ನಡುವಿನ ವಯಸ್ಸಿನ ಅಂತರ, ಸಂಬಂಧ ಹಾಗೂ ಮದುವೆಯ ಕುರಿತು ಯೂಟ್ಯೂಬರ್ ಜಾನಿಸ್ ಸೆಕ್ವೇರಾ ಅವರೊಂದಿಗಿನ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದಾರೆ.
ತಮ್ಮ ನಡುವಿನ 20 ವರ್ಷಗಳ ವಯಸ್ಸಿನ ವ್ಯತ್ಯಾಸದಿಂದಾಗಿ ಆರಂಭದಲ್ಲಿ ತಾವು ಕೀಳರಿಮೆ ಅನುಭವಿಸಿದ್ದಾಗಿ ಮತ್ತು ಶುಭ್ರಾರನ್ನು ದೂರವಿಡಲು ಪ್ರಯತ್ನಿಸಿದ್ದಾಗಿ ಅನುರಾಗ್ ತಿಳಿಸಿದ್ದಾರೆ.
ಶುಭ್ರಾಗೆ ಮದುವೆಯಲ್ಲಿ ನಂಬಿಕೆಯಿಲ್ಲ, ಆದರೆ ಅವರೊಂದಿಗೆ ಇರಲು ತಾವು ಬಯಸುವುದಾಗಿ ಅನುರಾಗ್ ಹಂಚಿಕೊಂಡಿದ್ದಾರೆ.
ಸಂದರ್ಶನದ ವೇಳೆ ಇಬ್ಬರೂ ತಮ್ಮ ಆರಂಭಿಕ ದಿನಗಳ ಪ್ರೀತಿಯ ಭಾವನಾತ್ಮಕ ಕ್ಷಣಗಳನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಸುಮಾರು 10 ವರ್ಷಗಳಿಂದ ಒಟ್ಟಿಗಿರುವ ಈ ಜೋಡಿ, ಪ್ರಸ್ತುತ ಮುಂಬೈ ತೊರೆದು ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ





Leave a comment