SUDDIKSHANA KANNADA NEWS/ DAVANAGERE/ DATE:24-07-2024
ಶಿವಮೊಗ್ಗ: ತಾನು ಪ್ರೀತಿ ಮಾಡುತ್ತಿದ್ದ ಯುವತಿಯನ್ನು ಕತ್ತು ಹಿಸುಕಿ ಕೊಂದಿದ್ದ ಹಂತಕ ಸೆರೆ ಸಿಕ್ಕ ಘಟನೆ ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮದಲ್ಲಿ ನಡೆದಿದ್ದು, ಹಂತಕನನ್ನು ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಆರೋಪಿ ಸೃಜನ್ ಬಂಧಿತ ಆರೋಪಿ. ಇನ್ನು ಸೌಮ್ಯ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಮೂಲದ ಗ್ರಾಮದಾಕೆ.
ಸಾಗರ ಮೂಲದ ಸೃಜನ್ ಎಂಬ ಯುವಕನು ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಗ್ರಾಮದವಳಾದ ಸೌಮ್ಯಳನ್ನು ಕಳೆದ ಎರಡೂವರೆ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಸೌಮ್ಯ ಆದಷ್ಟು ಬೇಗ ಮದುವೆಯಾಗೋಣ ಎಂದು ಸೃಜನ್ ಗೆ ಕೇಳಿದ್ದಾಳೆ. ಇದಕ್ಕೆ ಕಾರಣ ಹೇಳಿಕೊಳ್ಳುತ್ತಲೇ ಸೃಜನ್ ಬಂದಿದ್ದ. ಇಬ್ಬರ ನಡುವೆ ಈ ವಿಚಾರ ಸಂಬಂಧ ಆಗಾಗ್ಗೆ ಗಲಾಟೆ ಆಗುತಿತ್ತು ಎನ್ನಲಾಗಿದೆ. ಸೃಜನ್ ಮಾತ್ರ ಕಾರಣ ಹೇಳುತ್ತಾ ದಿನನೂಕುತ್ತಿದ್ದ.
ಮದುವೆಯಾಗುವಂತೆ ಯುವತಿ ಯಾವಾಗ ಒತ್ತಾಯ ಮಾಡತೊಡಗಿದಳೋ ಆಗ ಸೃಜನ್ ಸಹನೆ ಕಳೆದುಕೊಂಡಿದ್ದ. ಸೌಮ್ಯಳನ್ನು ಕೊಲೆ ಮಾಡಿದ ಬಳಿಕ ಆರೋಪಿಯು ಮೃತದೇಹವನ್ನು ಶಿವಮೊಗ್ಗದ ಮುಂಬಾಳು ಗ್ರಾಮದ ಬಳಿ ಹೂತಿಟ್ಟಿದ್ದ.
ಸೌಮ್ಯ ಮನೆಗೆ ಬಾರದ ಹಿನ್ನೆಲೆಯಲ್ಲಿ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಮಗಳು ಕಾಣೆಯಾಗಿದ್ದು, ಹುಡುಕಿಕೊಡುವಂತೆ ಪೊಲೀಸರಿಗೆ ಮನವಿ ಮಾಡಿದ್ದರು. ಬಳಿಕ ಸೌಮ್ಯಳ ಮೊಬೈಲ್ ಪರಿಶೀಲಿಸಿದಾಗ ಸೃಜನ್ ಜೊತೆ
ಮಾತನಾಡಿರುವುದು ಗೊತ್ತಾಗಿದೆ. ಕೊಲೆ ಮಾಡಿದ್ದು ಗೊತ್ತಾಗಬಾರದು ಎಂಬ ಕಾರಣಕ್ಕೆ ಶಿವಮೊಗ್ಗದ ಮುಂಬಾಳು ಗ್ರಾಮದಲ್ಲಿ ಹೂತಿಟ್ಟಿದ್ದ. ಸೃಜನ್ ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ
ಬಂದಿದೆ.
ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸೃಜನ್ ಕೊಪ್ಪಕ್ಕೆ ಹಣ ವಸೂಲಿ ಮಾಡಲು ಹೋಗುತ್ತಿದ್ದ. ನರ್ಸಿಂಗ್ ಓದುತ್ತಿದ್ದ ಸೌಮ್ಯಳ ಪರಿಚಯವಾಗಿತ್ತು. ಬಳಿಕ ಇದು ಪ್ರೀತಿಗೆ ತಿರುಗಿತ್ತು. ಸಲುಗೆಯೂ ಬೆಳೆದಿತ್ತು ಎಂದು ತಿಳಿದು ಬಂದಿದೆ.