ಸೂರತ್: ಗುಜರಾತ್‌ನ ಸೂರತ್‌ನಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಪತ್ನಿಯನ್ನ ಕೊಲೆ ಮಾಡಿ ಶವವನ್ನು ಸಿಮೆಂಟ್ ತುಂಬಿದ ಮರದ ಪೆಟ್ಟಿಗೆಯಲ್ಲಿ ಅಡಗಿಸಿಟ್ಟಿದ್ದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಘಟನೆಯ ವಿವರ:
40 ವರ್ಷದ ವಿಶಾಲ್ ಸಾಳ್ವೆ ಎಂಬಾತ ತನ್ನ ಪತ್ನಿ ಶಿಲ್ಪಾ (39) ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದನು. ಆದರೆ, ಮನೆಯಲ್ಲಿ ವಿಶಾಲ್ ಬರೆದಿದ್ದ ಪತ್ರವೊಂದು ಆತನ ಅಪ್ರಾಪ್ತ ಮಗನಿಗೆ ಸಿಕ್ಕಿದ್ದು, ಅದನ್ನು ಪೊಲೀಸರಿಗೆ ನೀಡಿದಾಗ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಆ ಪತ್ರದಲ್ಲಿ “ನಾನು ದೊಡ್ಡ ತಪ್ಪು ಮಾಡಿದ್ದೇನೆ, ಶಿಲ್ಪಾ ಇನ್ನು ಬದುಕಿಲ್ಲ” ಎಂದು ವಿಶಾಲ್ ಬರೆದುಕೊಂಡಿದ್ದನು.
ಪೊಲೀಸರು ತನಿಖೆ ನಡೆಸಿದಾಗ ಹಳೆಯ ಪಾಳುಬಿದ್ದ ಮನೆಯೊಂದರಲ್ಲಿ ಮರದ ಪೆಟ್ಟಿಗೆಯೊಳಗೆ ಸಿಮೆಂಟ್‌ನಿಂದ ಮುಚ್ಚಲ್ಪಟ್ಟ ಸ್ಥಿತಿಯಲ್ಲಿ ಶಿಲ್ಪಾ ಅವರ ಶವ ಪತ್ತೆಯಾಗಿದೆ. ದಂಪತಿಗಳ ನಡುವಿನ ಕೌಟುಂಬಿಕ ಕಲಹ ಮತ್ತು ಪತ್ನಿಯ ನಡತೆಯ ಮೇಲಿನ ಸಂಶಯವೇ ಈ ಕೊಲೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.





Leave a comment