ನವದೆಹಲಿ: ವಿಪಕ್ಷ ನಾಯಕ ರಾಹುಲ್ ಗಾಂಧಿ ಧರಣಿ ಕೇವಲ ಪೊಲಿಟಿಕಲ್ ಡ್ರಾಮಾ ಎಂದು ಬಿಜೆಪಿ ನಾಯಕಿ ಸ್ಮುೃತಿ ಇರಾನ್ ಬಾಂಬ್ ಸಿಡಿಸಿದ್ದಾರೆ.
ಎನ್ ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಸರಣಿ ವಾಗ್ದಾಳಿ ನಡೆಸಿದ್ದಾರೆ.
ಪರೀಕ್ಷಾ ಅಕ್ರಮ ಹಾಗೂ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರತಿಭಟನೆ ವೇಳೆ ಗಾಯಗೊಂಡ ವಿದ್ಯಾರ್ಥಿಗೆ ಬೆಂಬಲವಾಗಿ ಪೊಲೀಸ್ ಠಾಣೆ ಮುಂದೆ ರಾಹುಲ್ ಗಾಂಧಿ ನಡೆಸುತ್ತಿರುವ ಧರಣಿಯನ್ನು “ರಾಜಕೀಯ ಪ್ರದರ್ಶನ (Posturing)” ಎಂದು ಕರೆದಿರುವ ಅವರು, ಇದು ಯುವಜನರ ಅಥವಾ ವಿದ್ಯಾರ್ಥಿಗಳ ಪರವಾದ ನೈಜ ಹೋರಾಟವಲ್ಲ ಎಂದು ದೂರಿದ್ದಾರೆ.
ಕಳೆದ ತಿಂಗಳು ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪೆಲೆಟ್ ಗನ್‌ಗೆ ಗಾಯಗೊಂಡ ವಿದ್ಯಾರ್ಥಿಯೊಬ್ಬನಿಗೆ ಎಫ್‌ಐಆರ್ ದಾಖಲಿಸಲು ಆಗ್ರಹಿಸಿ ರಾಹುಲ್ ಧರಣಿ ಕುಳಿತಿದ್ದಾರೆ. ಈ ಬಗ್ಗೆ ಮಾತನಾಡಿದ ಸ್ಮೃತಿ ಇರಾನಿ, “ಸಂವೇದನಾಶೀಲ ವಿಷಯಗಳಲ್ಲೂ ರಾಹುಲ್ ಗಾಂಧಿ ಗಂಭೀರತೆ ತೋರುತ್ತಿಲ್ಲ. ಪೊಲೀಸ್ ಠಾಣೆಯಲ್ಲೇ ಚಾಕೊಲೇಟ್ ತೂರಿ, ನಗುತ್ತಾ ಕಾಲ ಕಳೆಯುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ,” ಎಂದಿದ್ದಾರೆ.
ಅಲ್ಲದೆ, ತನಿಖೆ ನಡೆಯುತ್ತಿರುವಾಗಲೇ ಭದ್ರತಾ ಪಡೆಗಳು ಮತ್ತು ಅರೆಸೇನಾ ಪಡೆಗಳ ವಿರುದ್ಧ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಹಾಗೂ ತನಿಖಾ ಸಂಸ್ಥೆಗಳ ಮೇಲೆ ನಂಬಿಕೆ ಇಡಬೇಕು ಎಂದು ಒತ್ತಾಯಿಸಿದ್ದಾರೆ.
- BJP vs Congress
- Delhi Police FIR
- Indian politics news
- Jantar Mantar Sit In
- NDTV Interview.
- NEET paper leak protest
- Pellet Gun Controversy
- Rahul Gandhi
- Smriti Irani
- ಎನ್ಡಿಟಿವಿ ಸಂದರ್ಶನ
- ಜಂತರ್ ಮಂತರ್ ಧರಣಿ
- ದೆಹಲಿ ಪೊಲೀಸ್ ಎಫ್‌ಐಆರ್
- ನೀಟ್ ಪರೀಕ್ಷೆ ಅಕ್ರಮ
- ಪೆಲೆಟ್ ಗನ್ ವಿವಾದ
- ಬಿಜೆಪಿ ಕಾಂಗ್ರೆಸ್ ರಾಜಕೀಯ
- ಯುವಜನರ ಪ್ರತಿಭಟನೆ
- ರಾಹುಲ್ ಗಾಂಧಿ
- ಸ್ಮೃತಿ ಇರಾನಿ





Leave a comment