Home ಕ್ರೈಂ ನ್ಯೂಸ್ ಸಿದ್ದರಾಮಯ್ಯ ‘ಸ್ಟಿಂಗ್ ಆಪರೇಷನ್’ ತನಿಖೆ: ಕುಮಾರಸ್ವಾಮಿ ದೆಹಲಿ ನಿವಾಸದ ಸಿಬ್ಬಂದಿ ಹೆಸರು ಉಲ್ಲೇಖ, ಮತ್ತೊಂದು ಬಂಧನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಸಿದ್ದರಾಮಯ್ಯ ‘ಸ್ಟಿಂಗ್ ಆಪರೇಷನ್’ ತನಿಖೆ: ಕುಮಾರಸ್ವಾಮಿ ದೆಹಲಿ ನಿವಾಸದ ಸಿಬ್ಬಂದಿ ಹೆಸರು ಉಲ್ಲೇಖ, ಮತ್ತೊಂದು ಬಂಧನ!

Share
ಸಿದ್ದರಾಮಯ್ಯ
Share

ಬೆಂಗಳೂರು: ಕರ್ನಾಟಕದ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ನಕಲಿ ‘ಸ್ಟಿಂಗ್ ವೀಡಿಯೊ’ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಪೊಲೀಸರು ಮತ್ತೊಬ್ಬ ಆರೋಪಿಯನ್ನು ದೆಹಲಿಯಲ್ಲಿ ಬಂಧಿಸಿದ್ದಾರೆ.

ದೆಹಲಿಯ ಕರೋಲ್ ಬಾಗ್‌ನಲ್ಲಿ ಮೊಬೈಲ್ ಖರೀದಿಸಿರುವುದೇ ಈ ತನಿಖೆಯಲ್ಲಿ ಮಹತ್ವದ ಸುಳುವಾಗಿದ್ದು, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಸಾಮಾಜಿಕ ಜಾಲತಾಣ ತಂಡದ ಸಿಬ್ಬಂದಿಯೊಬ್ಬರ ನಿರ್ದೇಶನದ ಮೇರೆಗೆ ಈ ಕೃತ್ಯ ನಡೆದಿದೆ ಎಂದು ಆರೋಪಿ ಬಾಯಬಿಟ್ಟಿದ್ದಾನೆ.

ದೆಹಲಿಯಲ್ಲಿ ಬಂಧಿತನಾದ ರಿತೇಶ್ ಪಾಂಡೆ ಎಂಬಾತ, ವಿನೋದ್ ಶರ್ಮಾ ಜೊತೆ ಸೇರಿ ಕುಮಾರಸ್ವಾಮಿ ಅವರ ಸೋಶಿಯಲ್ ಮೀಡಿಯಾ ತಂಡದ ಪ್ರಜ್ವಲ್ ಪ್ರಸಾದ್ ಸೂಚನೆಯಂತೆ ಮೊಬೈಲ್ ಖರೀದಿಸಿರುವುದಾಗಿ ತನಿಖಾಧಿಕಾರಿಗಳ ಮುಂದೆ ಬಾಯಬಿಟ್ಟಿದ್ದಾನೆ. ಬಳಿಕ ದೆಹಲಿಯ ಕುಶಕ್ ರಸ್ತೆಯಲ್ಲಿರುವ ಕುಮಾರಸ್ವಾಮಿ ಅವರ ಅಧಿಕೃತ ನಿವಾಸಕ್ಕೆ ತೆರಳಿ ಆ ಮೊಬೈಲ್ ಅನ್ನು ಪ್ರಜ್ವಲ್‌ಗೆ ನೀಡಲಾಗಿದೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ. ಆದರೆ ಈ ಹೇಳಿಕೆಗಳು ಇನ್ನೂ ತನಿಖೆ ಮತ್ತು ಪರಿಶೀಲನಾ ಹಂತದಲ್ಲಿವೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದು, ತಲೆಮರೆಸಿಕೊಂಡಿರುವ ಪ್ರಜ್ವಲ್ ಹಾಗೂ ವಿನೋದ್‌ಗಾಗಿ ಶೋಧ ಮುಂದುವರಿದಿದೆ.

ಪ್ರಮುಖ ಸುಳುವು ಪತ್ತೆ: ದೆಹಲಿಯಲ್ಲಿ ಮೊಬೈಲ್ ಖರೀದಿ ಮತ್ತು ಹಣಕಾಸು ವಹಿವಾಟಿನ ಜಾಡು ಹಿಡಿದು ಹೊರಟಿರುವ ಪೊಲೀಸರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಸಿಬ್ಬಂದಿಯ ನಂಟು ಬೆಳಕಿಗೆ ಬಂದಿದೆ.

ಸ್ಟಿಂಗ್ ವೀಡಿಯೊ ನಕಲಿ: ವೀಡಿಯೊದಲ್ಲಿರುವ ಆರೋಪಗಳು ಸತ್ಯಕ್ಕೆ ದೂರವಾಗಿದ್ದು, ಇದು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾದ ಕಟ್ಟುಕಥೆ ಎಂದು ಪೊಲೀಸರು ಈಗಾಗಲೇ ದೃಢಪಡಿಸಿದ್ದಾರೆ.

ಜೆಡಿಎಸ್ ಆಕ್ರೋಶ: ಪೊಲೀಸರು ಮುಗ್ಧ ಪಕ್ಷದ ಕಾರ್ಯಕರ್ತರನ್ನು ಗುರಿಯಾಗಿಸುತ್ತಿದ್ದಾರೆ ಎಂದು ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

ತಾಂತ್ರಿಕ ಸಾಕ್ಷ್ಯಗಳು, ಸಿಸಿಟಿವಿ ದೃಶ್ಯಾವಳಿಗಳು ಹಾಗೂ ವಿಪಿಎನ್ (VPN) ಬಳಸಿ ವೀಡಿಯೊ ಅಪ್ಲೋಡ್ ಮಾಡಿರುವ ಮೂಲವನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತನಿಖಾ ತಂಡ ನಿರತವಾಗಿದೆ.

Share

Leave a comment

Leave a Reply

Your email address will not be published. Required fields are marked *

Related Articles