Home ದಾವಣಗೆರೆ ವಾಟ್ಸಾಪ್ ಮೂಲಕ ಇಪಿಎಫ್‌ಒ ಸೇವೆಗಳು ಆರಂಭ: ಪಿಎಫ್ ಬ್ಯಾಲೆನ್ಸ್, ಪಾಸ್‌ಬುಕ್ ಮಾಹಿತಿ ಇನ್ಮುಂದೆ ನಿಮ್ಮ ಫೋನ್‌ನಲ್ಲಿ!
ದಾವಣಗೆರೆಉದ್ಯೋಗ ವಾರ್ತೆನವದೆಹಲಿಬೆಂಗಳೂರು

ವಾಟ್ಸಾಪ್ ಮೂಲಕ ಇಪಿಎಫ್‌ಒ ಸೇವೆಗಳು ಆರಂಭ: ಪಿಎಫ್ ಬ್ಯಾಲೆನ್ಸ್, ಪಾಸ್‌ಬುಕ್ ಮಾಹಿತಿ ಇನ್ಮುಂದೆ ನಿಮ್ಮ ಫೋನ್‌ನಲ್ಲಿ!

Share
ಇಪಿಎಫ್‌ಒ
Share

ಹೊಸದೆಹಲಿ: ಕೇಂದ್ರೀಯ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವೀಯ ಅವರು ಭಾನುವಾರ ಭವಿಷ್ಯ ನಿಧಿ (EPF) ಚಂದಾದಾರರಿಗಾಗಿ ವಾಟ್ಸಾಪ್ ಮೂಲಕ ಇಪಿಎಫ್‌ಒ (EPFO) ಸೇವೆಗಳಿಗೆ ಅಧಿಕೃತ ಚಾಲನೆ ನೀಡಿದ್ದಾರೆ.

ಇಪಿಎಫ್‌ಒದ 74 ನೇ ಸಂಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಈ ನೂತನ ಸೇವೆಯನ್ನು ಪರಿಚಯಿಸಲಾಗಿದ್ದು, ಇನ್ನು ಮುಂದೆ ಚಂದಾದಾರರು ತಮ್ಮ ಪಿಎಫ್ ಬ್ಯಾಲೆನ್ಸ್, ಇತ್ತೀಚಿನ ಐದು ವಹಿವಾಟುಗಳು ಮತ್ತು ಪಾಸ್‌ಬುಕ್ ವಿವರಗಳನ್ನು ಅಧಿಕೃತ ವಾಟ್ಸಾಪ್ ಸೇವೆಯ ಮೂಲಕವೇ ಸುಲಭವಾಗಿ ಪಡೆಯಬಹುದು.

ಇಪಿಎಫ್‌ಒದ ಈ ಹೊಸ ಸೌಲಭ್ಯದಿಂದಾಗಿ ನೌಕರರು ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ. ಪರಿಚಿತ ಮೊಬೈಲ್ ಪ್ಲಾಟ್‌ಫಾರ್ಮ್ ಮೂಲಕವೇ ತುರ್ತು ಸೇವೆಗಳು ಲಭ್ಯವಾಗಲಿವೆ. ಇದೇ ವೇಳೆ, ನಿಷ್ಕ್ರಿಯಗೊಂಡಿರುವ ಇಪಿಎಫ್ ಖಾತೆಗಳ (Inoperative EPF Accounts) ಸ್ವಯಂಚಾಲಿತ ಇತ್ಯರ್ಥಕ್ಕೂ (Automatic Settlement) ಸಚಿವರು ಚಾಲನೆ ನೀಡಿದ್ದಾರೆ.

ಆಧಾರ್ ಪರಿಶೀಲನೆಗೊಂಡಿರುವ ಮತ್ತು 1,000 ರೂ.ವರೆಗಿನ ಬಾಕಿ ಹೊಂದಿರುವ ನಿಷ್ಕ್ರಿಯ ಖಾತೆಗಳಿಗೆ ಇನ್ನು ಮುಂದೆ ಪ್ರತ್ಯೇಕ ಕ್ಲೈಮ್ ಸಲ್ಲಿಸುವ ಅಗತ್ಯವಿಲ್ಲದೆ, ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆಯಾಗಲಿದೆ. ಸುಮಾರು 1 ಲಕ್ಷ ಖಾತೆದಾರರಿಗೆ ಇದರಿಂದ ಅನುಕೂಲವಾಗಲಿದೆ ಎಂದು ಅಂದಾಜಿಸಲಾಗಿದೆ.

ವಾಟ್ಸಾಪ್ ಮೂಲಕ ಪಿಎಫ್ ಮಾಹಿತಿ: ಅಧಿಕೃತ ಇಪಿಎಫ್‌ಒ ವಾಟ್ಸಾಪ್ ಸೇವೆ ಬಳಸಿ ಪಿಎಫ್ ಬ್ಯಾಲೆನ್ಸ್, ಪಾಸ್‌ಬುಕ್ ಹಾಗೂ ಕೊನೆಯ 5 ವಹಿವಾಟುಗಳನ್ನು ಮನೆಯಲ್ಲೇ ಕುಳಿತು ಪಡೆಯಬಹುದು.

ಸ್ವಯಂಚಾಲಿತ ಸೆಟ್ಲ್‌ಮೆಂಟ್: 1,000 ರೂ.ವರೆಗೆ ಬ್ಯಾಲೆನ್ಸ್ ಇರುವ ಹಾಗೂ ಆಧಾರ್ ಪರಿಶೀಲನೆಯಾದ ನಿಷ್ಕ್ರಿಯ ಪಿಎಫ್ ಖಾತೆಗಳಿಗೆ ಯಾವುದೇ ಪ್ರತ್ಯೇಕ ಅರ್ಜಿ ಸಲ್ಲಿಸದೆ ಹಣ ವರ್ಗಾವಣೆಯಾಗಲಿದೆ.

ಭಾರಿ ನಿಧಿ ಸಂಗ್ರಹ: ದೇಶದ 8 ಕೋಟಿಗೂ ಅಧಿಕ ಸದಸ್ಯರಿಂದ ಒಟ್ಟು 32 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಕಾರ್ಮಿಕ ನಿಧಿ ಸಂಗ್ರಹವಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ನೌಕರರ ಹಿತದೃಷ್ಟಿಯಿಂದ ತಂತ್ರಜ್ಞಾನವನ್ನು ಮತ್ತಷ್ಟು ಸರಳಗೊಳಿಸುತ್ತಿರುವ ಕೇಂದ್ರ ಸರ್ಕಾರ, ಮುಂಬರುವ 75ನೇ ವರ್ಷದ ಸಂಭ್ರಮದೊಳಗೆ ಮತ್ತಷ್ಟು ಕಾರ್ಮಿಕ ಸ್ನೇಹಿ ಸುಧಾರಣೆಗಳನ್ನು ತರುವುದಾಗಿ ತಿಳಿಸಿದೆ.

Share

Leave a comment

Leave a Reply

Your email address will not be published. Required fields are marked *

Related Articles