ನವದೆಹಲಿ: ಕರ್ನಾಟಕ ರಾಜಕಾರಣದಲ್ಲಿ ಭಾರಿ ರಾಜಕೀಯ ಮುನ್ನೆಡೆ ಚರ್ಚೆಗಳು ಶುರುವಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಕಾಂಗ್ರೆಸ್ ಹೈಕಮಾಂಡ್ ದೆಹಲಿಯಲ್ಲಿ ಮಹತ್ವದ ಆಫರ್ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಸಿದ್ದರಾಮಯ್ಯ ಅವರನ್ನು ರಾಜ್ಯಸಭೆ ಮೂಲಕ ದೆಹಲಿಗೆ ಕರೆತಂದು, 2029ರ ಲೋಕಸಭಾ ಚುನಾವಣೆಗೆ ಪಕ್ಷದ ಪ್ರಮುಖ ರಾಷ್ಟ್ರೀಯ ಒಬಿಸಿ (OBC) ಮುಖಂಡರನ್ನಾಗಿ ಬಿಂಬಿಸಲು ಹೈಕಮಾಂಡ್ ಪ್ಲಾನ್ ಮಾಡಿದೆ.
ದೆಹಲಿಯಲ್ಲಿ ನಡೆದ 7 ಗಂಟೆಗಳ ಸುದೀರ್ಘ ಸಭೆಯಲ್ಲಿ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಈ ಪ್ರಸ್ತಾಪವನ್ನು ಇಟ್ಟಿದ್ದಾರೆ. ಆದರೆ ಸಿದ್ದರಾಮಯ್ಯ ಇದಕ್ಕೆ ತಕ್ಷಣ ಒಪ್ಪಿಗೆ ನೀಡದೆ ಕಾಲಾವಕಾಶ ಕೇಳಿದ್ದಾರೆ.
ಒಂದು ವೇಳೆ ಸಿದ್ದರಾಮಯ್ಯ ಒಪ್ಪಿದರೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗುವ ಸಾಧ್ಯತೆ ದಟ್ಟವಾಗಿದೆ. ಆದರೆ ಅಧಿಕೃತವಾಗಿ ಕಾಂಗ್ರೆಸ್ ನಾಯಕರು ಈ ನಾಯಕತ್ವ ಬದಲಾವಣೆಯ ಸುದ್ದಿಯನ್ನು ನಿರಾಕರಿಸಿದ್ದು, ಸಭೆಯಲ್ಲಿ ಕೇವಲ ರಾಜ್ಯಸಭಾ ಚುನಾವಣೆ ಬಗ್ಗೆ ಚರ್ಚೆಯಾಗಿದೆ ಎಂದಿದ್ದಾರೆ.
- Congress High Command
- Delhi Offer
- DK Shivakumar
- Karnataka Politics
- Leadership Change
- Lok Sabha Elections 2029
- Mallikarjun Kharge
- OBC Face
- Rajya Sabha Elections
- Siddaramaiah
- ಒಬಿಸಿ ನಾಯಕ
- ಕರ್ನಾಟಕ ರಾಜಕಾರಣ
- ಕಾಂಗ್ರೆಸ್ ಹೈಕಮಾಂಡ್
- ಡಿ. ಕೆ. ಶಿವಕುಮಾರ್
- ದೆಹಲಿ ಆಫರ್
- ನಾಯಕತ್ವ ಬದಲಾವಣೆ
- ಮಲ್ಲಿಕಾರ್ಜುನ ಖರ್ಗೆ
- ರಾಜ್ಯಸಭೆ ಚುನಾವಣೆ
- ಲೋಕಸಭೆ ಚುನಾವಣೆ 2029
- ಸಿದ್ದರಾಮಯ್ಯ





Leave a comment