Home ಕ್ರೈಂ ನ್ಯೂಸ್ “ಮದುವೆ ಶೋ-ಆಫ್‌ಗೆ ಬ್ರೇಕ್: ಒಂದೇ ವೇದಿಕೆಯಲ್ಲಿ 14 ಗಂಡುಮಕ್ಕಳಿಗೆ ಮದುವೆ ಮಾಡಿಸಿ ಜಾಣ್ಮೆ ಮೆರೆದ ರೈತ ಕುಟುಂಬ!”
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

“ಮದುವೆ ಶೋ-ಆಫ್‌ಗೆ ಬ್ರೇಕ್: ಒಂದೇ ವೇದಿಕೆಯಲ್ಲಿ 14 ಗಂಡುಮಕ್ಕಳಿಗೆ ಮದುವೆ ಮಾಡಿಸಿ ಜಾಣ್ಮೆ ಮೆರೆದ ರೈತ ಕುಟುಂಬ!”

Share
ಮದುವೆ
Share

ಮಧ್ಯಪ್ರದೇಶ: ಇಂದಿನ ದಿನಗಳಲ್ಲಿ ಮದುವೆ ಎಂದರೆ ಕೋಟ್ಯಂತರ ರೂಪಾಯಿ ಖರ್ಚು, ಐಷಾರಾಮಿ ಕಾರುಗಳು, ಕುದುರೆ ಸವಾರಿ ಹಾಗೂ ಸೋಷಿಯಲ್ ಮೀಡಿಯಾ ರೀಲ್ಸ್‌ಗಾಗಿ ಮಾಡುವ ಭರ್ಜರಿ ಶೋ-ಆಫ್‌ಗಳೇ ಕಣ್ಣಮುಂದೆ ಬರುತ್ತವೆ. ನೆಂಟರ ಮುಂದೆ ಪ್ರತಿಷ್ಠೆ ಪ್ರದರ್ಶಿಸಲು ಹೋಗಿ ಲಕ್ಷಾಂತರ ರೂಪಾಯಿ ಸಾಲದ ಸುಳಿಗೆ ಸಿಲುಕುವ ಮಧ್ಯಮ ವರ್ಗದವರ ಮಧ್ಯೆ, ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಜಂಟಿ ಕೃಷಿಕ ಕುಟುಂಬವೊಂದು ಸಮಾಜಕ್ಕೆ ಹೊಸ ಮುನ್ನುಡಿ ಬರೆದಿದೆ.

ಮದುವೆಯ ಅದ್ದೂರಿತನ ಹಾಗೂ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಸೆಡ್ಡು ಹೊಡೆದಿರುವ ಈ ರೈತ ಕುಟುಂಬವು, ತಮ್ಮ ಮನೆಯ ಹಾಗೂ ಸೋದರಸಂಬಂಧಿ ಸೇರಿದಂತೆ ಒಟ್ಟು 14 ಗಂಡುಮಕ್ಕಳಿಗೆ ಒಂದೇ ಮಂಟಪದಲ್ಲಿ ಒಟ್ಟಿಗೆ ವಿವಾಹ ನೆರವೇರಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದೆ.

ಟ್ರ್ಯಾಕ್ಟರ್‌ನಲ್ಲೇ ವಧು-ವರರ ರಾಜಗಾಂಭೀರ್ಯದ ಎಂಟ್ರಿ!

ಸಾಮಾನ್ಯವಾಗಿ ವರನ ಮೆರವಣಿಗೆಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ದುಬಾರಿ ಕಾರುಗಳನ್ನು ಬಾಡಿಗೆಗೆ ತರಲಾಗುತ್ತದೆ. ಆದರೆ, ಈ ಕೃಷಿಕ ಕುಟುಂಬ ತಮಗೆ ಅನ್ನ ನೀಡುವ ಕೃಷಿ ವಾಹನವನ್ನೇ ಮದುವೆಯ ರಥವನ್ನಾಗಿ ಮಾಡಿಕೊಂಡಿದೆ. ಒಂದು ಟ್ರ್ಯಾಕ್ಟರ್ ಟ್ರಾಲಿಯನ್ನು ವಿಶೇಷವಾಗಿ ಅಲಂಕರಿಸಿ, ಅದರಲ್ಲಿ 14 ಜನ ವರರು ಒಟ್ಟಿಗೆ ಕುಳಿತು ಮದುವೆ ಮಂಟಪಕ್ಕೆ ಆಗಮಿಸಿದ್ದಾರೆ.

ಮದುವೆಯ ಶಾಸ್ತ್ರಗಳು ಮುಗಿದ ಬಳಿಕ, ಹೊಸ ಬದುಕಿಗೆ ಹೆಜ್ಜೆ ಇಟ್ಟ 14 ಹೆಣ್ಣುಮಕ್ಕಳು (ವಧುಗಳು) ಮತ್ತೊಂದು ಟ್ರ್ಯಾಕ್ಟರ್ ಟ್ರಾಲಿಯಲ್ಲೇ ಅತ್ಯಂತ ಸರಳವಾಗಿ, ಯಾವುದೇ ಆಡಂಬರವಿಲ್ಲದೆ ಪತಿಯ ಮನೆಗೆ ಮರಳಿದ್ದಾರೆ. ಈ ಅಪರೂಪದ ದೃಶ್ಯದ ವಿಡಿಯೋ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ರೈತ ಕುಟುಂಬದ ಜಾಣ್ಮೆಗೆ ಸಲಾಂ ಎನ್ನುತ್ತಿದ್ದಾರೆ.

Satna, Madhya Pradesh: ಇಂದಿನ ದಿನಗಳಲ್ಲಿ ಮದುವೆ ಎಂದರೆ ಕೋಟ್ಯಂತರ ರೂಪಾಯಿ ಖರ್ಚು, ಐಷಾರಾಮಿ ಕಾರುಗಳು, ಕುದುರೆ ಸವಾರಿ ಹಾಗೂ ಸೋಷಿಯಲ್ ಮೀಡಿಯಾ ರೀಲ್ಸ್‌ಗಾಗಿ ಮಾಡುವ ಭರ್ಜರಿ ಶೋ-ಆಫ್‌ಗಳೇ ಕಣ್ಣಮುಂದೆ ಬರುತ್ತವೆ. ನೆಂಟರ ಮುಂದೆ ಪ್ರತಿಷ್ಠೆ ಪ್ರದರ್ಶಿಸಲು ಹೋಗಿ ಲಕ್ಷಾಂತರ ರೂಪಾಯಿ ಸಾಲದ ಸುಳಿಗೆ ಸಿಲುಕುವ ಮಧ್ಯಮ ವರ್ಗದವರ ಮಧ್ಯೆ, ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಜಂಟಿ ಕೃಷಿಕ ಕುಟುಂಬವೊಂದು ಸಮಾಜಕ್ಕೆ ಹೊಸ ಮುನ್ನುಡಿ ಬರೆದಿದೆ.

ಮದುವೆಯ ಅದ್ದೂರಿತನ ಹಾಗೂ ಹೆಚ್ಚುತ್ತಿರುವ ಹಣದುಬ್ಬರಕ್ಕೆ ಸೆಡ್ಡು ಹೊಡೆದಿರುವ ಈ ರೈತ ಕುಟುಂಬವು, ತಮ್ಮ ಮನೆಯ ಹಾಗೂ ಸೋದರಸಂಬಂಧಿ ಸೇರಿದಂತೆ ಒಟ್ಟು 14 ಗಂಡುಮಕ್ಕಳಿಗೆ ಒಂದೇ ಮಂಟಪದಲ್ಲಿ ಒಟ್ಟಿಗೆ ವಿವಾಹ ನೆರವೇರಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದೆ.

ಟ್ರ್ಯಾಕ್ಟರ್‌ನಲ್ಲೇ ವಧು-ವರರ ರಾಜಗಾಂಭೀರ್ಯದ ಎಂಟ್ರಿ!

ಸಾಮಾನ್ಯವಾಗಿ ವರನ ಮೆರವಣಿಗೆಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ದುಬಾರಿ ಕಾರುಗಳನ್ನು ಬಾಡಿಗೆಗೆ ತರಲಾಗುತ್ತದೆ. ಆದರೆ, ಈ ಕೃಷಿಕ ಕುಟುಂಬ ತಮಗೆ ಅನ್ನ ನೀಡುವ ಕೃಷಿ ವಾಹನವನ್ನೇ ಮದುವೆಯ ರಥವನ್ನಾಗಿ ಮಾಡಿಕೊಂಡಿದೆ. ಒಂದು ಟ್ರ್ಯಾಕ್ಟರ್ ಟ್ರಾಲಿಯನ್ನು ವಿಶೇಷವಾಗಿ ಅಲಂಕರಿಸಿ, ಅದರಲ್ಲಿ 14 ಜನ ವರರು ಒಟ್ಟಿಗೆ ಕುಳಿತು ಮದುವೆ ಮಂಟಪಕ್ಕೆ ಆಗಮಿಸಿದ್ದಾರೆ.

ಮದುವೆಯ ಶಾಸ್ತ್ರಗಳು ಮುಗಿದ ಬಳಿಕ, ಹೊಸ ಬದುಕಿಗೆ ಹೆಜ್ಜೆ ಇಟ್ಟ 14 ಹೆಣ್ಣುಮಕ್ಕಳು (ವಧುಗಳು) ಮತ್ತೊಂದು ಟ್ರ್ಯಾಕ್ಟರ್ ಟ್ರಾಲಿಯಲ್ಲೇ ಅತ್ಯಂತ ಸರಳವಾಗಿ, ಯಾವುದೇ ಆಡಂಬರವಿಲ್ಲದೆ ಪತಿಯ ಮನೆಗೆ ಮರಳಿದ್ದಾರೆ. ಈ ಅಪರೂಪದ ದೃಶ್ಯದ ವಿಡಿಯೋ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ರೈತ ಕುಟುಂಬದ ಜಾಣ್ಮೆಗೆ ಸಲಾಂ ಎನ್ನುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *