ದಾವಣಗೆರೆ: ದಾವಣಗೆರೆ ಜಿಲ್ಲಾ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಕಛೇರಿಯಲ್ಲಿ ಸುದೀರ್ಘ ಸುಮಾರು 50 ವರ್ಷಗಳ ಕಾಲ ಅತ್ಯಂತ ನಿಷ್ಠೆ, ಶಿಸ್ತು ಹಾಗೂ ಸಮರ್ಪಣಾ ಭಾವದಿಂದ ಕಛೇರಿಯ ಜವಾಬ್ದಾರಿಯನ್ನು ನಿರ್ವಹಿಸಿಕೊಂಡು ಬಂದಿದ್ದ ಹಿರಿಯ ಸಿಬ್ಬಂದಿ ವೀರಯ್ಯನವರು ನಿಧನರಾಗಿದ್ದಾರೆ.
ಅವರ ಅಗಲಿಕೆಗೆ ಜಿಲ್ಲೆಯ ಬಿಜೆಪಿ ನಾಯಕರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ದಶಕಗಳ ಕಾಲ ಪಕ್ಷದ ಕಛೇರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಪ್ರತಿಯೊಬ್ಬ ಕಾರ್ಯಕರ್ತರಿಗೂ ಮಾರ್ಗದರ್ಶಕರಾಗಿದ್ದ ಅವರ ಸೇವೆ ಅಪಾರವಾದದ್ದು.
ಅಂತಿಮ ದರ್ಶನದ ವಿವರ:
ಅಮರ ಆತ್ಮದ ಪಾರ್ಥೀವ ಶರೀರವನ್ನು ಸಾರ್ವಜನಿಕರ ಹಾಗೂ ಆತ್ಮೀಯರ ಅಂತಿಮ ದರ್ಶನಕ್ಕಾಗಿ ಅವರ ಸ್ವಂತ ನಿವಾಸದಲ್ಲಿ ಇರಿಸಲಾಗಿದೆ.
ಸ್ಥಳ: ಬಿ.ಐ.ಇ.ಟಿ ಕಾಲೇಜು ರಸ್ತೆ, 14ನೇ ಕ್ರಾಸ್, ಆಂಜನೇಯ ಬಡಾವಣೆ, ದಾವಣಗೆರ ಇಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಮೃತರ ನಿಧನಕ್ಕೆ ಬಿಜೆಪಿ ಜಿಲ್ಲಾ ಮುಖಂಡರು, ಕಾರ್ಯಕರ್ತರು ಹಾಗೂ ಸ್ನೇಹಿತರು ಕಂಬನಿ ಮಿಡಿದಿದ್ದಾರೆ.





Leave a comment