Home ದಾವಣಗೆರೆ ಗಣಪತಿ ವಿಸರ್ಜನೆ ವೇಳೆ ಸಲ್ಮಾನ್ ಖಾನ್ ಎಡವಟ್ಟು: ತಪ್ಪು ದಿಕ್ಕಿನಲ್ಲಿ ಆರತಿ ಎತ್ತಿದ ‘ಭಾಯಿಜಾನ್’, ತಪ್ಪಿದ್ದನ್ನು ನೋಡಿ ತಕ್ಷಣ ತಿದ್ದಿದ ತಂಗಿ ಅರ್ಪಿತಾ ಖಾನ್!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ಗಣಪತಿ ವಿಸರ್ಜನೆ ವೇಳೆ ಸಲ್ಮಾನ್ ಖಾನ್ ಎಡವಟ್ಟು: ತಪ್ಪು ದಿಕ್ಕಿನಲ್ಲಿ ಆರತಿ ಎತ್ತಿದ ‘ಭಾಯಿಜಾನ್’, ತಪ್ಪಿದ್ದನ್ನು ನೋಡಿ ತಕ್ಷಣ ತಿದ್ದಿದ ತಂಗಿ ಅರ್ಪಿತಾ ಖಾನ್!

Share
ಸಲ್ಮಾನ್ ಖಾನ್
Share

ಮುಂಬೈ: ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬದ ಸಂಭ್ರಮ ಕಳೆಗಟ್ಟಿದ್ದು, ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ತಮ್ಮ ಕುಟುಂಬದೊಂದಿಗೆ ಗಣಪತಿ ವಿಸರ್ಜನೆ ಹಾಗೂ ಪೂಜಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು. ಮುಂಬೈನಲ್ಲಿರುವ ತಮ್ಮ ಸಹೋದರ ಸೊಹೈಲ್ ಖಾನ್ ಅವರ ನಿವಾಸದಲ್ಲಿ ನಡೆದ ಗಣಪತಿ ಆರತಿ ವೇಳೆ ನಟ ಸಲ್ಮಾನ್ ಖಾನ್ ಸಣ್ಣ ಗೊಂದಲಕ್ಕೊಳಗಾದ ಪ್ರಸಂಗ ನಡೆದಿದೆ.

ವಿಡಿಯೋ ವೀಕ್ಷಿಸಿ:

ಗಣೇಶನಿಗೆ ಆರತಿ ಮಾಡುವಾಗ ಸಲ್ಮಾನ್ ಖಾನ್ ತಟ್ಟೆಯನ್ನು ಪ್ರದಕ್ಷಿಣೆ (ಕ್ಲಾಕ್‌ ವೈಸ್) ಆಕಾರದಲ್ಲಿ ಸುತ್ತಿಸುವ ಬದಲು ಉಲ್ಟಾ (ಕೌಂಟರ್-ಕ್ಲಾಕ್‌ ವೈಸ್) ದಿಕ್ಕಿನಲ್ಲಿ ಆರತಿ ಎತ್ತಲು ಪ್ರಾರಂಭಿಸಿದರು. ಇದನ್ನು ತಕ್ಷಣ ಗಮನಿಸಿದ ಅವರ ಸಹೋದರಿ ಅರ್ಪಿತಾ ಖಾನ್, ಪೂಜೆಗೆ ಯಾವುದೇ ಭಂಗ ಬಾರದಂತೆ ಸಲ್ಮಾನ್ ಅವರಿಗೆ ಸೈಗೆಯ ಮೂಲಕ ಸರಿಯಾದ ದಿಕ್ಕನ್ನು ತೋರಿಸಿಕೊಟ್ಟರು.

ತಂಗಿಯ ಸೂಚನೆಯನ್ನು ಕೂಡಲೇ ಅರ್ಥಮಾಡಿಕೊಂಡ ಸಲ್ಮಾನ್ ಖಾನ್ ತಮ್ಮ ತಪ್ಪನ್ನು ತಿದ್ದಿಕೊಂಡು ಸರಿಯಾದ ರೀತಿಯಲ್ಲಿ ಆರತಿ ಪೂರ್ಣಗೊಳಿಸಿದರು. ಆರತಿ ಮುಗಿದ ನಂತರ ಸಲ್ಮಾನ್ ಖಾನ್ ತಮ್ಮ ಸಂಬಂಧಿ ಮಗುವಿಗೂ ಸಹ ಪೂಜೆ ಮಾಡುವ ಸರಿಯಾದ ವಿಧಾನವನ್ನು ಹೇಳಿಕೊಡುತ್ತಿರುವುದು ಕಂಡುಬಂತು. ಈ ಸಹೋದರ-ಸಹೋದರಿಯ ಮುದ್ದಾದ ಬಾಂಧವ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿಡಿಯೋ ವೀಕ್ಷಿಸಿ: 

ಸಲ್ಮಾನ್ ಖಾನ್ ಮುಂಬರುವ ದಿನಗಳಲ್ಲಿ ಅಪೂರ್ವ ಲಾಖಿಯಾ ನಿರ್ದೇಶನದ ‘ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್’ ಚಿತ್ರದಲ್ಲಿ ನಟಿಸಲಿದ್ದಾರೆ. ಇದಲ್ಲದೆ, ವಂಶಿ ಪೈಡಿಪಲ್ಲಿ ನಿರ್ದೇಶನದಲ್ಲಿ ಹಾಗೂ ದಿಲ್ ರಾಜು ನಿರ್ಮಾಣದಲ್ಲಿ ಮೂಡಿಬರಲಿರುವ ಹೆಸರಿಡದ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಇದು 2027ರ ಈದ್ ಹಬ್ಬದ ಸಂದರ್ಭದಲ್ಲಿ ತೆರೆಕಾಣಲಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles