Home ಕ್ರೈಂ ನ್ಯೂಸ್ ಭಿಕ್ಷುಕಿ ಸತ್ತ ಬಳಿಕ ಸಿಕ್ತು ಮನೆಯಲ್ಲಿ ಮೂಟೆಗಟ್ಟಲೆ ಹಣ: ಬದುಕಿದ್ದಾಗ ಕಣ್ಣೆತ್ತಿಯೂ ನೋಡದ ಸಂಬಂಧಿಕರು ಹಣ ಮಾತ್ರ ಹಂಚಿಕೊಂಡ್ರು!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಭಿಕ್ಷುಕಿ ಸತ್ತ ಬಳಿಕ ಸಿಕ್ತು ಮನೆಯಲ್ಲಿ ಮೂಟೆಗಟ್ಟಲೆ ಹಣ: ಬದುಕಿದ್ದಾಗ ಕಣ್ಣೆತ್ತಿಯೂ ನೋಡದ ಸಂಬಂಧಿಕರು ಹಣ ಮಾತ್ರ ಹಂಚಿಕೊಂಡ್ರು!

Share
ಹಣ
Share

ಮಂಡ್ಯ: ಆ ಭಿಕ್ಷುಕಿ ಬದುಕು ನಿಜಕ್ಕೂ ದುರಂತ.ಎಲ್ಲರೂ ಇದ್ದರೂ ಇಲ್ಲದಂತೆ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದರು. ಭಿಕ್ಷೆ ಬೇಡುವ ವೇಳೆ ಸಿಕ್ಕ ಹಣವನ್ನೆಲ್ಲಾ ಮನೆಯಲ್ಲಿ ಸಂಗ್ರಹಿಸಿಡುತ್ತಿದ್ದರು. ಆಗ ಸಂಬಂಧಿಕರು ನಾಪತ್ತೆ ಆಗಿದ್ದರು. ತಿರುಗಿಯೂ ನೋಡಲಿಲ್ಲ. ಅಜ್ಜಿ ಆರೈಕೆ ಮಾಡಲಿಲ್ಲ. ಆಸ್ತಿಗೆ ಮಾತ್ರ ಬರುವುದನ್ನು ಮರೆಯಲಿಲ್ಲ. 

ಇಂಥ ಹೃದಯವಿದ್ರಾವಕ ಘಟನೆಗೆ ಸಾಕ್ಷಿಯಾಗಿರುವುದು ಮಂಡ್ಯ ಜಿಲ್ಲೆ. ಅಜ್ಜಿಯ ಬದುಕು ನಿಜಕ್ಕೂ ಕಣ್ಣೀರು, ನೋವಿನಿಂದಲೇ ಕೂಡಿತ್ತು. ಸಂಬಂಧಿಕರು ಇದ್ದಾಗ ಚೆನ್ನಾಗಿ ನೋಡಿಕೊಳ್ಳದೇ ಸತ್ತಾಗ ಬಂದು ಹಣವನ್ನು ಮಾತ್ರ ಹಂಚಿಕೊಂಡರು. ಇಂಥ ವರ್ತನೆಯು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಕೆಲವರು ಅಜ್ಜಿಯ ಹಣಕ್ಕೆ ಬಂದ ಸಂಬಂಧಿಕರಿಗೆ ಛೀಮಾರಿ ಹಾಕಿದ್ದರೆ, ಮತ್ತೆ ಕೆಲವರು ಇಂಥ ಅನಾಗರಿಕ ವರ್ತನೆ ನಿಜಕ್ಕೂ ಖಂಡನೀಯ. ಹಣಕ್ಕೆ ಪ್ರಾಮುಖ್ಯತೆ ನೀಡುವ ಜನರು ಅಜ್ಜಿ ಬದುಕ್ಕಿದ್ದಾಗ ಯಾಕೆ ಚೆನ್ನಾಗಿ ನೋಡಿಕೊಳ್ಳಲಿಲ್ಲ. ಇವರೆಲ್ಲಾ ಮನುಷ್ಯರಾ ಎಂದು ಪ್ರಶ್ನಿಸಿದ್ದಾರೆ.

ಸಿಕ್ಕರೆ ಊಟ, ಇಲ್ಲದಿದ್ದರೆ ಉಪವಾಸ… ಊರೂರು ಅಲೆದು ಭಿಕ್ಷೆ ಬೇಡುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟ ಬಳಿಕ ಅವರ ಮನೆಯಲ್ಲಿ ಬರೋಬ್ಬರಿ ₹8 ಲಕ್ಷಕ್ಕೂ ಅಧಿಕ ನಗದು ಹಣ ಪತ್ತೆಯಾಗಿರುವ ಅಚ್ಚರಿಯ ಘಟನೆ ಮಂಡ್ಯ ನಗರದಲ್ಲಿ ಬೆಳಕಿಗೆ ಬಂದಿದೆ. ಬದುಕಿದ್ದಾಗ ಕಣ್ಣೆತ್ತಿಯೂ ನೋಡದ ಸಂಬಂಧಿಕರು, ಸಾವಿನ ನಂತರ ಮನೆಯಲ್ಲಿದ್ದ ಲಕ್ಷಾಂತರ ರೂಪಾಯಿ ಹಣವನ್ನು ಹಂಚಿಕೊಂಡಿದ್ದಾರೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಮಂಡ್ಯ ನಗರದ ಗುತ್ತಲು ಬಡಾವಣೆಯ ನಿವಾಸಿಯಾಗಿದ್ದ ನೂರ್ (ಹೆಸರು) ಎಂಬ ವೃದ್ಧೆ, ಕುಟುಂಬಸ್ಥರು ಹಾಗೂ ಸಂಬಂಧಿಕರ ಆಸರೆ ಇಲ್ಲದೆ ಹಲವು ವರ್ಷಗಳಿಂದ ನಗರದ ವಿವಿಧೆಡೆ ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ತಮ್ಮ ಪುಟ್ಟ ಮನೆಯಲ್ಲೇ ಕೊನೆಯುಸಿರೆಳೆದಿದ್ದಾರೆ. ವೃದ್ಧೆ ಮೃತಪಟ್ಟ ಸುದ್ದಿ ತಿಳಿದ ಸ್ಥಳೀಯರು ಹಾಗೂ ಸಂಬಂಧಿಕರು ಸೇರಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ಅಂತ್ಯಸಂಸ್ಕಾರ ಮುಗಿದ ನಂತರ ಸಂಬಂಧಿಕರು ಹಾಗೂ ಸ್ಥಳೀಯ ಮುಖಂಡರು ವೃದ್ಧೆ ವಾಸವಿದ್ದ ಮನೆಯನ್ನು ಪರಿಶೀಲಿಸಲು ತೆರಳಿದ್ದಾರೆ. ಈ ವೇಳೆ ಮನೆಯ ಒಳಗಿದ್ದ ಮೂಟೆಗಳು, ಪೆಟ್ಟಿಗೆಗಳನ್ನು ತೆರೆದು ನೋಡಿದಾಗ ಎಲ್ಲರಿಗೂ ಶಾಕ್ ಕಾದಿತ್ತು. ಮನೆಯ ಮೂಲೆ ಮೂಲೆಗಳಲ್ಲಿ ಕಂತೆ ಕಂತೆ ನೋಟುಗಳು ಹಾಗೂ ನಾಣ್ಯಗಳ ಮೂಟೆಗಳು ಪತ್ತೆಯಾಗಿದ್ದವು. ಸ್ಥಳೀಯರು ಮತ್ತು ಸಂಬಂಧಿಕರು ಒಟ್ಟಾಗಿ ಕುಳಿತು ಹಣ ಎಣಿಕೆ ಮಾಡಿದ್ದು, ಒಟ್ಟು ಮೊತ್ತ ₹8 ಲಕ್ಷಕ್ಕೂ ಅಧಿಕ ಇರುವುದು ದೃಢಪಟ್ಟಿದೆ. ಬಳಿಕ ಆ ಹಣವನ್ನು ವೃದ್ಧೆಯ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ.

ಆದರೆ, ವೃದ್ಧೆ ಬದುಕಿದ್ದಾಗ ಯಾವೊಬ್ಬ ಸಂಬಂಧಿಯೂ ಸಹಾಯಕ್ಕೆ ಬರಲಿಲ್ಲ, ಸತ್ತ ಮೇಲೆ ಕಷ್ಟದ ಹಣವನ್ನು ಮುಲಾಜಿಲ್ಲದೆ ಹಂಚಿಕೊಂಡಿದ್ದಾರೆ ಎಂದು ಸಾರ್ವಜನಿಕರು ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಈ ಘಟನೆ ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Share

Leave a comment

Leave a Reply

Your email address will not be published. Required fields are marked *