ಹೊಸದೆಹಲಿ: ದೇಶದ ಅತ್ಯಂತ ಸವಾಲಿನ ಮತ್ತು ಪ್ರತಿಷ್ಠಿತ ಪರೀಕ್ಷೆಯಾದ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಗೆ (UPSC Civil Services Examination) ಸಿದ್ಧತೆ ನಡೆಸುವುದು ಕೇವಲ ಶೈಕ್ಷಣಿಕ ಜ್ಞಾನದ ಪರೀಕ್ಷೆಯಲ್ಲ, ಅದಕ್ಕಿಂತ ಹೆಚ್ಚಾಗಿ ಮನೋಬಲ ಮತ್ತು ಆತ್ಮವಿಶ್ವಾಸದ ಪರೀಕ್ಷೆಯಾಗಿದೆ ಎಂದು 2020ರ ಬ್ಯಾಚ್‌ನ ಐಎಎಸ್ ಅಧಿಕಾರಿ ಪರಿ ಬಿಶ್ನೋಯ್ ಅಭಿಪ್ರಾಯಪಟ್ಟಿದ್ದಾರೆ.
ಆರಂಭದಲ್ಲಿ ತಮಗೂ ಕೂಡ ದೊಡ್ಡ ವಿಶ್ವವಿದ್ಯಾಲಯಗಳಿಂದ ಬಂದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನೋಡಿ “ನಮ್ಮ ನಂಬರ್ ಎಲ್ಲಿ ಬರುತ್ತದೆ?” ಎಂಬ ಆತಂಕವಿತ್ತು ಎಂದು ಪರಿ ತಿಳಿಸಿದ್ದಾರೆ. ಆದರೆ ಸಾಮಾನ್ಯ ಶಾಲಾ-ಕಾಲೇಜು ಹಿನ್ನೆಲೆಯಿಂದ ಬಂದಿದ್ದರೂ ತಾವು ಸ್ವಯಂ ನಂಬಿಕೆಯನ್ನು ಕೈಬಿಡಲಿಲ್ಲ ಎಂದು ಹೇಳಿದ್ದಾರೆ.
ಆಕಾಂಕ್ಷಿಗಳು ಇತರರೊಂದಿಗೆ ತಮ್ಮ ಪ್ರಗತಿಯನ್ನು ಪ್ರತಿದಿನ ಹೋಲಿಕೆ ಮಾಡಿಕೊಳ್ಳುವುದನ್ನು ಬಿಟ್ಟು, ತಮ್ಮದೇ ಆದ ಸಿದ್ಧತೆಯ ಮೇಲೆ ಸಂಪೂರ್ಣ ಗಮನಹರಿಸಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ. ಪ್ರಾಮಾಣಿಕವಾಗಿ ಹಾಗೂ ಸ್ಥಿರತೆಯಿಂದ ತಯಾರಿ ನಡೆಸಿದರೆ ಪರೀಕ್ಷೆಯ ಭಯವನ್ನು ಸುಲಭವಾಗಿ ಗೆಲ್ಲಬಹುದು ಎಂದು ತಿಳಿಸಿರುವ ಅವರು, ಯುಪಿಎಸ್‌ಸಿ ಎನ್ನುವುದು ಕೇವಲ ಜ್ಞಾನದ ಪರೀಕ್ಷೆಯಲ್ಲ, ಇದು ಆಕಾಂಕ್ಷಿಯ ಮಾನಸಿಕ ದೃಢತೆಯ ಅಗ್ನಿಪರೀಕ್ಷೆ ಎಂದು ಬಣ್ಣಿಸಿದ್ದಾರೆ.
- civil services exam mindset.
- competition is in our heads
- IAS Pari Bishnoi
- IAS success story
- mental strength
- motivation for students
- UPSC aspirants
- UPSC civil services exam
- UPSC preparation tips
- ಐಎಎಸ್ ಅಧಿಕಾರಿ ಪರಿ ಬಿಶ್ನೋಯ್
- ಮಾನಸಿಕ ಸ್ಥೈರ್ಯ
- ಯಶಸ್ಸಿನ ಮಂತ್ರ.
- ಯುಪಿಎಸ್‌ಸಿ ಆಕಾಂಕ್ಷಿಗಳು
- ಯುಪಿಎಸ್‌ಸಿ ಸಿದ್ಧತೆ
- ಸಿಕ್ಕಿಂ ಜಿಲ್ಲಾಧಿಕಾರಿ
- ಸಿವಿಲ್ ಸರ್ವೀಸಸ್ ಪರೀಕ್ಷೆ
- ಸ್ಪರ್ಧಾತ್ಮಕ ಪರೀಕ್ಷೆ ಸಲಹೆ





Leave a comment