Home ದಾವಣಗೆರೆ ರಿಯಲ್ ಲೈಫ್ ‘ವಿವಾಹ್’: ಮದುವೆ ಹಿಂದಿನ ದಿನವೇ ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿದ ವಧು; ಬರ್ನ್ ವಾರ್ಡ್‌ನಲ್ಲೇ ತಾಳಿ ಕಟ್ಟಿದ ವರ!
ದಾವಣಗೆರೆನವದೆಹಲಿಬೆಂಗಳೂರು

ರಿಯಲ್ ಲೈಫ್ ‘ವಿವಾಹ್’: ಮದುವೆ ಹಿಂದಿನ ದಿನವೇ ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿದ ವಧು; ಬರ್ನ್ ವಾರ್ಡ್‌ನಲ್ಲೇ ತಾಳಿ ಕಟ್ಟಿದ ವರ!

Share
ಮದುವೆ
Share

ಕಾನ್ಪುರ: ಸಿನಿಮಾಗಳಲ್ಲಿ ಪ್ರೀತಿಗಾಗಿ ಏನನ್ನಾದರೂ ಮಾಡಲು ಸಿದ್ಧರಿರುವ ಪಾತ್ರಗಳನ್ನು ನಾವೆಲ್ಲರೂ ನೋಡಿರುತ್ತೇವೆ. ಆದರೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಬಾಲಿವುಡ್‌ನ ಪ್ರಸಿದ್ಧ ‘ವಿವಾಹ್’ ಸಿನಿಮಾ ಮಾದರಿಯಲ್ಲೇ ರಿಯಲ್ ಲೈಫ್ ಘಟನೆಯೊಂದು ನಡೆದಿದ್ದು, ವರನೊಬ್ಬ ತೀವ್ರವಾಗಿ ಸುಟ್ಟ ಗಾಯಗಳಿಂದ ಆಸ್ಪತ್ರೆ ಸೇರಿದ್ದ ತನ್ನ ಭಾವಿ ಪತ್ನಿಯನ್ನು ಆಸ್ಪತ್ರೆಯ ಬರ್ನ್ ವಾರ್ಡ್‌ನಲ್ಲೇ ಮದುವೆಯಾಗುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

ನಡೆದಿದ್ದೇನು?:

ಕಾನ್ಪುರದ ವಿಕಾಸ್ ಮತ್ತು ಶ್ವೇತಾ ಎಂಬುವವರ ಮದುವೆ ಗುರುವಾರಕ್ಕೆ ನಿಶ್ಚಯವಾಗಿತ್ತು. ಆದರೆ ಮದುವೆಯ ಹಿಂದಿನ ದಿನವಾದ ಬುಧವಾರ ಸಂಜೆ ಮನೆಯಲ್ಲಿ ಶಾಸ್ತ್ರಗಳು ನಡೆಯುತ್ತಿದ್ದಾಗ ಗ್ಯಾಸ್ ಸಿಲಿಂಡರ್ ಪೈಪ್ ಲೀಕ್ ಆಗಿ ಭಾರಿ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ನಂದಿಸುವ ಗಡಿಬಿಡಿಯಲ್ಲಿ ಬಿಸಿ ಎಣ್ಣೆಯ ಪಾತ್ರೆಯೊಂದು ಉರುಳಿ ಬಿದ್ದು, ವಧು ಶ್ವೇತಾ ಸೇರಿದಂತೆ ಒಟ್ಟು 12 ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಎಲ್ಲರನ್ನೂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಶ್ವೇತಾ ಅವರ ಗಾಯಗಳು ಗಂಭೀರವಾಗಿದ್ದರಿಂದ ಅವರನ್ನು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಚಿತ್ರಕಥೆಯಂತಾದ ಮದುವೆ:

ವಿಷಯ ತಿಳಿದು ಕುಟುಂಬದವರೊಂದಿಗೆ ಆಸ್ಪತ್ರೆಗೆ ಧಾವಿಸಿದ ವರ ವಿಕಾಸ್, ಮದುವೆ ಮುಂದೂಡಲು ನಿರಾಕರಿಸಿದ್ದಾರೆ. ಯಾವುದೇ ಪರಿಸ್ಥಿತಿಯಲ್ಲೂ ತಾವು ಶ್ವೇತಾ ಕೈ ಹಿಡಿಯುವುದಾಗಿ ಹಠ ಹಿಡಿದಿದ್ದಾರೆ. ಕೊನೆಗೆ ಆಸ್ಪತ್ರೆಯ ವೈದ್ಯರ ಅನುಮತಿ ಪಡೆದು, ಇತ್ತಂಡಗಳ ಕುಟುಂಬಸ್ಥರ ಸಮ್ಮುಖದಲ್ಲಿ ಖಾಸಗಿ ಆಸ್ಪತ್ರೆಯ ಬರ್ನ್ ವಾರ್ಡ್ ಅನ್ನೇ ಕಲ್ಯಾಣ ಮಂಟಪವನ್ನಾಗಿ ಮಾಡಲಾಯಿತು.

ಆಸ್ಪತ್ರೆಯಲ್ಲೇ ವಿಕಾಸ್ ಶ್ವೇತಾಗೆ ಸಿಂಧೂರ ಇಟ್ಟು, ಇಬ್ಬರೂ ಮಾಲೆ ಬದಲಾಯಿಸಿಕೊಳ್ಳುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಆಸ್ಪತ್ರೆಯ ಸಿಬ್ಬಂದಿ ಹಾಗೂ ನೆರೆದಿದ್ದವರು ಕಣ್ಣೀರು ಹಾಕಿದ್ದಾರೆ. ಪ್ರಸ್ತುತ ಶ್ವೇತಾ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *