ವಯನಾಡ್: ಎಐಸಿಸಿ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ಕೇರಳದ ವಯನಾಡಿನಲ್ಲಿ ವಿವಾದಾತ್ಮಕ ಪೋಸ್ಟರ್‌ಗಳನ್ನು ಅಂಟಿಸಲಾಗಿದ್ದು, ಈ ಸಂಬಂಧ ಕಲ್ಪೆಟ್ಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾಂಗ್ರೆಸ್ ಶಾಸಕ ಟಿ. ಸಿದ್ದಿಕ್ ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಮುಖ್ಯಮಂತ್ರಿ ಆಯ್ಕೆ ಗೊಂದಲದ ನಡುವೆ ನಡೆದ ಘಟನೆ:
ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (UDF) ಮೈತ್ರಿಕೂಟ ಭರ್ಜರಿ ಬಹುಮತ ಪಡೆದಿದ್ದರೂ, ಮುಂದಿನ ಮುಖ್ಯಮಂತ್ರಿ ಯಾರು ಎಂಬ ಆಯ್ಕೆಯ ಪ್ರಕ್ರಿಯೆಯಲ್ಲಿ ತೀವ್ರ ಗೊಂದಲ ಮೂಡಿತ್ತು. ಈ ಹಿನ್ನೆಲೆಯಲ್ಲಿ ಮೇ 13 ರಂದು ವಯನಾಡ್ ಡಿಸಿಸಿ (DCC) ಕಚೇರಿಯ ಕಾಂಪೌಂಡ್ ಗೋಡೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.
ಪೋಸ್ಟರ್‌ನಲ್ಲೇನಿತ್ತು?:
ಇಂಗ್ಲಿಷ್‌ನಲ್ಲಿ ಮುದ್ರಿಸಲಾಗಿದ್ದ ಈ ಪೋಸ್ಟರ್‌ಗಳಲ್ಲಿ, “ರಾಹುಲ್ ಮತ್ತು ಪ್ರಿಯಾಂಕಾ ಅವರೇ, ವಯನಾಡನ್ನು ಮರೆತುಬಿಡಿ. ಮುಂದಿನ ಚುನಾವಣೆಯಲ್ಲಿ ನೀವು ಇಲ್ಲಿಂದ ಗೆಲ್ಲಲು ಸಾಧ್ಯವಿಲ್ಲ” ಮತ್ತು “ವಯನಾಡ್ ಮುಂದಿನ ಅಮೇಠಿ ಆಗಲಿದೆ” ಎಂಬ ಎಚ್ಚರಿಕೆಯ ಸಂದೇಶಗಳಿದ್ದವು. ಕೆ.ಸಿ. ವೇಣುಗೋಪಾಲ್ ಅವರನ್ನು ಮುಖ್ಯಮಂತ್ರಿ ಮಾಡಲು ಹೈಕಮಾಂಡ್ ಒಲವು ತೋರಿದ್ದಕ್ಕೆ ಅಸಮಾಧಾನಗೊಂಡು ಈ ಪೋಸ್ಟರ್ ಅಂಟಿಸಲಾಗಿದೆ ಎನ್ನಲಾಗಿದೆ.
ಪೊಲೀಸ್ ತನಿಖೆ ಚುರುಕು:
ಘಟನೆ ಬೆಳಕಿಗೆ ಬರುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪೋಸ್ಟರ್‌ಗಳನ್ನು ತೆರವುಗೊಳಿಸಿದ್ದಾರೆ. ಸದ್ಯ ಕಲ್ಪೆಟ್ಟಾ ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಮತ್ತು ಕೇರಳ ಪೊಲೀಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೋಸ್ಟರ್ ಅಂಟಿಸುತ್ತಿದ್ದ ವ್ಯಕ್ತಿಯ ದೃಶ್ಯಾವಳಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
- Amethi warning posters
- Kalpetta police station
- KC Venugopal
- Kerala Congress CM deadlock
- Kerala political news
- Priyanka Gandhi Vadra
- Rahul Gandhi
- T Siddique MLA
- Wayanad DCC office
- Wayanad poster controversy
- ಅಮೇಠಿ ಎಚ್ಚರಿಕೆ
- ಕಲ್ಪೆಟ್ಟಾ ಪೊಲೀಸ್ ಕೇಸ್
- ಕಾಂಗ್ರೆಸ್ ಹೈಕಮಾಂಡ್
- ಕೆ ಸಿ ವೇಣುಗೋಪಾಲ್
- ಕೇರಳ ಕಾಂಗ್ರೆಸ್ ಸಿಎಂ ಗೊಂದಲ
- ಕೇರಳ ರಾಜಕಾರಣ
- ಟಿ ಸಿದ್ದಿಕ್
- ಪ್ರಿಯಾಂಕಾ ಗಾಂಧಿ
- ರಾಹುಲ್ ಗಾಂಧಿ
- ವಯನಾಡ್ ಪೋಸ್ಟರ್ ವಿವಾದ





Leave a comment