Home ಕ್ರೈಂ ನ್ಯೂಸ್ ಪಾಕ್ ಸೇನೆಯೇ ನಮಗೆ ಗನ್ ನೀಡಿತ್ತು, ಈಗ ನಮ್ಮನ್ನೇ ಉಗ್ರರು ಎನ್ನುತ್ತಿದ್ದಾರೆ: ಪಾಕಿಸ್ತಾನದ ಮುಖವಾಡ ಬಿಚ್ಚಿಟ್ಟ ಪಿಒಕೆ ನಾಯಕ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಪಾಕ್ ಸೇನೆಯೇ ನಮಗೆ ಗನ್ ನೀಡಿತ್ತು, ಈಗ ನಮ್ಮನ್ನೇ ಉಗ್ರರು ಎನ್ನುತ್ತಿದ್ದಾರೆ: ಪಾಕಿಸ್ತಾನದ ಮುಖವಾಡ ಬಿಚ್ಚಿಟ್ಟ ಪಿಒಕೆ ನಾಯಕ!

Share
ಪಾಕ್
Share

ರಾವಲಕೋಟ್ (ಪಿಒಕೆ): “ಕಾಶ್ಮೀರಿಗಳ ಕೈಗೆ ಮೊದಲು ಕರಬೂಸುಗಳನ್ನು, ಬಂದೂಕುಗಳನ್ನು ನೀಡಿದ್ದೇ ಇದೇ ಪಾಕಿಸ್ತಾನ ಸೇನೆ. ಆದರೆ ಇಂದು ಅದೇ ಸೇನೆ ನಮ್ಮನ್ನು ಭಯೋತ್ಪಾದಕರು ಎಂದು ಕರೆಯುವ ಧೈರ್ಯ ಮಾಡುತ್ತಿದೆ!” 

ಹೀಗೆಂದು ಪಾಕಿಸ್ತಾನದ ಉಗ್ರರ ನಿಲುವನ್ನು ಜಗತ್ತಿನೆದುರು ಬೆತ್ತಲೆಗೊಳಿಸಿರುವುದು ಪಾಕ್ ಆಕ್ರಮಿತ ಕಾಶ್ಮೀರದ (PoK) ಪ್ರಮುಖ ಜನನಾಯಕ ಸರ್ದಾರ್ ಅಮಾನ್ ಖಾನ್.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಸರ್ಕಾರದ ವಿರುದ್ಧ ನಡೆಯುತ್ತಿರುವ ಬೃಹತ್ ಪ್ರತಿಭಟನೆಗಳು ಭೀಕರ ಸ್ವರೂಪ ಪಡೆದುಕೊಂಡಿದ್ದು, 24ನೇ ದಿನಕ್ಕೆ ಕಾಲಿಟ್ಟಿವೆ. ರಾವಲಕೋಟ್‌ನ ಈದ್ಗಾ ಮೈದಾನದಲ್ಲಿ ಜಮಾಯಿಸಿದ್ದ 80,000ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಜಂಟಿ ಅವಾಮಿ ಆಕ್ಷನ್ ಕಮಿಟಿ (JAAC) ನಾಯಕ ಅಮಾನ್ ಖಾನ್, ಪಾಕಿಸ್ತಾನ ಸೇನೆ ಮತ್ತು ಸರ್ಕಾರದ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ಉಗ್ರರ ರ‍್ಯಾಲಿಗೆ ಭದ್ರತೆ, ಜನಸಾಮಾನ್ಯರಿಗೆ ಉಗ್ರ ಪಟ್ಟ!

ಕಳೆದ ವರ್ಷ ರಾವಲಕೋಟ್‌ನಲ್ಲಿ ನಿಷೇಧಿತ ಜೈಶ್-ಎ-ಮೊಹಮ್ಮದ್ ಸಂಘಟನೆಯ ಉಗ್ರರು ಎಕೆ-47 ಬಂದೂಕುಗಳು ಮತ್ತು ತಲ್ವಾರ್‌ಗಳನ್ನು ಹಿಡಿದು ಬಹಿರಂಗವಾಗಿ ಮೆರವಣಿಗೆ ನಡೆಸಿದ್ದರು. ಆ ರ‍್ಯಾಲಿಗೆ ಸ್ಥಳೀಯ ಡೆಪ್ಯುಟಿ ಕಮಿಷನರ್ ಭದ್ರತೆ ನೀಡಿದ್ದರು ಎಂಬುದನ್ನು ನೆನಪಿಸಿದ ಖಾನ್, “ಅಂದು ಉಗ್ರರ ಮೆರವಣಿಗೆಗೆ ರಕ್ಷಣೆ ಕೊಟ್ಟ ಅಧಿಕಾರಿಗಳು, ಇಂದು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಈ ಮಣ್ಣಿನ ಮಕ್ಕಳನ್ನು ಉಗ್ರರು ಎಂದು ಕರೆಯುತ್ತಿದ್ದಾರೆ. ಇದಕ್ಕೆ ನಾವು ಬಗ್ಗುವುದಿಲ್ಲ” ಎಂದು ಗುಡುಗಿದ್ದಾರೆ.

ಭಾರತದತ್ತ ಮುಖ ಮಾಡುವ ಎಚ್ಚರಿಕೆ:

ಪ್ರತಿಭಟನಾಕಾರರು ಇಸ್ಲಾಮಾಬಾದ್ ಸರ್ಕಾರಕ್ಕೆ ತೀವ್ರ ಎಚ್ಚರಿಕೆ ನೀಡಿದ್ದು, ಸ್ಥಳೀಯರ 38 ಪ್ರಮುಖ ಬೇಡಿಕೆಗಳನ್ನು ತಕ್ಷಣವೇ ಈಡೇರಿಸದಿದ್ದರೆ, ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ. “ಪಿಒಕೆ ಪಾಕಿಸ್ತಾನದ ಭಾಗವಲ್ಲ. ನಮಗಿಂತ ಹೆಚ್ಚಾಗಿ ಪಾಕಿಸ್ತಾನಕ್ಕೇ ನಮ್ಮ ಅಗತ್ಯವಿದೆ. ಒಂದು ವೇಳೆ ನಮ್ಮ ಬೇಡಿಕೆಗಳನ್ನು ಒಪ್ಪದಿದ್ದರೆ, ಪಾಕಿಸ್ತಾನ ಈ ಜಾಗವನ್ನು ಸಂಪೂರ್ಣವಾಗಿ ಖಾಲಿ ಮಾಡಬೇಕಾಗುತ್ತದೆ. ನಾವು ಭಾರತದೊಂದಿಗೆ ಕೈಜೋಡಿಸಬೇಕಾಗುತ್ತದೆ” ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಪ್ರಸ್ತುತ ಪಿಒಕೆಯಲ್ಲಿ ವಿದ್ಯುತ್ ದರ ಏರಿಕೆ, ಆಹಾರ ಧಾನ್ಯಗಳ ಕೊರತೆ ಹಾಗೂ ಪಾಕ್ ಅಧಿಕಾರಿಗಳ ದಬ್ಬಾಳಿಕೆ ವಿರುದ್ಧ ಜನಾಂದೋಲನ ಸೃಷ್ಟಿಯಾಗಿದ್ದು, ವಿದೇಶಗಳಲ್ಲಿರುವ ಕಾಶ್ಮೀರಿ ಡಯಾಸ್ಪೊರಾ ಕೂಡ ಪಾಕಿಸ್ತಾನಿ ರಾಯಭಾರ ಕಚೇರಿಗಳ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles