Home ದಾವಣಗೆರೆ ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ 2026: ಬಿಜೆಪಿಗೆ ಭರ್ಜರಿ ಮುನ್ನಡೆ, ಕಾಂಗ್ರೆಸ್‌ಗೆ ತೀವ್ರ ಮುಖಭಂಗ!
ದಾವಣಗೆರೆನವದೆಹಲಿಬೆಂಗಳೂರು

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ 2026: ಬಿಜೆಪಿಗೆ ಭರ್ಜರಿ ಮುನ್ನಡೆ, ಕಾಂಗ್ರೆಸ್‌ಗೆ ತೀವ್ರ ಮುಖಭಂಗ!

Share
ರಾಜಸ್ಥಾನ
Share

ಜೈಪುರ: ರಾಜಸ್ಥಾನದ 309 ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಪೂರ್ಣಗೊಂಡಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (BJP) ಬೃಹತ್ ಜಯ ದಾಖಲಿಸಿದೆ.

ರಾಜ್ಯದ ಒಟ್ಟು 10,167 ವಾರ್ಡ್‌ಗಳ ಪೈಕಿ ಬಿಜೆಪಿ 4,049 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿ ಅಗ್ರಸ್ಥಾನಕ್ಕೇರಿದ್ದರೆ, ಪ್ರತಿಪಕ್ಷ ಕಾಂಗ್ರೆಸ್ 3,456 ವಾರ್ಡ್‌ಗಳನ್ನು ಪಡೆದುಕೊಂಡಿದೆ. ಪಕ್ಷೇತರರು ಹಾಗೂ ಇತರೆ ಅಭ್ಯರ್ಥಿಗಳು 2,438 ವಾರ್ಡ್‌ಗಳಲ್ಲಿ ಜಯಗಳಿಸಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳ ಫಲಿತಾಂಶದ ವಿವರ:

ನಗರ ನಿಗಮಗಳು

10 ನಗರ ನಿಗಮಗಳಲ್ಲಿ ಬಿಜೆಪಿ 403 ವಾರ್ಡ್‌ಗಳಲ್ಲಿ ಗೆದ್ದು ಜೈಪುರ, ಕೋಟಾ, ಉದಯಪುರ ಹಾಗೂ ಭಿಲ್ವಾರಾಗಳಲ್ಲಿ ಮುನ್ನಡೆ ಸಾಧಿಸಿದೆ. ಕಾಂಗ್ರೆಸ್ 330 ವಾರ್ಡ್‌ಗಳಲ್ಲಿ ಜಯಗಳಿಸಿ ಅಜ್ಮೇರ್ ಮತ್ತು ಬಿಕಾನೇರ್‌ಗಳಲ್ಲಿ ಹಿಡಿತ ಕಾಯ್ದುಕೊಂಡಿದೆ. ಜೋಧ್‌ಪುರದಲ್ಲಿ ಎರಡೂ ಪಕ್ಷಗಳು ತಲಾ 44 ವಾರ್ಡ್‌ಗಳನ್ನು ಗೆದ್ದು ಸಮಬಲ ಸಾಧಿಸಿವೆ.

ನಗರ ಪರಿಷತ್ :

ಬಿಜೆಪಿ 905 ವಾರ್ಡ್‌ಗಳನ್ನು ಗೆದ್ದು 21 ಪರಿಷತ್‌ಗಳಲ್ಲಿ ಅಧಿಕಾರಕ್ಕೇರಿದ್ದರೆ, ಕಾಂಗ್ರೆಸ್ 821 ವಾರ್ಡ್‌ಗಳೊಂದಿಗೆ 16 ಪರಿಷತ್‌ಗಳಲ್ಲಿ ಮುನ್ನಡೆ ಪಡೆದಿದೆ.

ಪುರಸಭೆಗಳು:

ಬಿಜೆಪಿ 2,741 ವಾರ್ಡ್‌ಗಳನ್ನು ಗೆದ್ದಿದ್ದರೆ, ಕಾಂಗ್ರೆಸ್ 2,335 ವಾರ್ಡ್‌ಗಳನ್ನು ತನ್ನದಾಗಿಸಿಕೊಂಡಿದೆ.

ಸೆಪ್ಟೆಂಬರ್ 9 ಮತ್ತು 11 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಸಲಾಗಿತ್ತು. ಮುಂದಿನ ಹಂತವಾಗಿ ಸೆಪ್ಟೆಂಬರ್ 21 ರಂದು ಮೇಯರ್ ಹಾಗೂ ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles