Home ಕ್ರೈಂ ನ್ಯೂಸ್ ಗುರುಗ್ರಾಮದಲ್ಲಿ ಮಹಿಳಾ ಬೈಕರ್‌ಗೆ ಕಾರು ಡಿಕ್ಕಿ ಕೇಸ್ ಗೆ ಬಿಗ್ ಟ್ವಿಸ್ಟ್: ಕಾರಿನಲ್ಲಿದ್ದ ನಾಲ್ವರು ವಿಪರೀತ ಮದ್ಯ ಸೇವಿಸಿದ್ದರು, ಸಂತ್ರಸ್ತೆ ಸಹೋದರ ಗಂಭೀರ ಆರೋಪ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಗುರುಗ್ರಾಮದಲ್ಲಿ ಮಹಿಳಾ ಬೈಕರ್‌ಗೆ ಕಾರು ಡಿಕ್ಕಿ ಕೇಸ್ ಗೆ ಬಿಗ್ ಟ್ವಿಸ್ಟ್: ಕಾರಿನಲ್ಲಿದ್ದ ನಾಲ್ವರು ವಿಪರೀತ ಮದ್ಯ ಸೇವಿಸಿದ್ದರು, ಸಂತ್ರಸ್ತೆ ಸಹೋದರ ಗಂಭೀರ ಆರೋಪ!

Share
ಗುರುಗ್ರಾಮ
Share

ಗುರುಗ್ರಾಮ: ಹರಿಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಇನ್‌ಸ್ಟಾಗ್ರಾಮ್ ಪ್ರಭಾವಿ ಹಾಗೂ ಬೈಕರ್ ಆಗಿರುವ “ರೆಬೆಲ್ ವೀಲ್ಸ್ ಸಿಯಾ” ಅವರ ಎಪ್ರಿಲಿಯಾ RS 457 ಬೈಕ್‌ಗೆ ಮಾರುತಿ ಸಿಯಾಜ್ ಕಾರೊಂದು ಡಿಕ್ಕಿ ಹೊಡೆದು ಪರಾರಿಯಾದ ದ್ರೋಹದ ಘಟನೆ ಬೆಳಕಿಗೆ ಬಂದಿದೆ. ಘಟನೆಯ ದೃಶ್ಯಾವಳಿಗಳು ಬೈಕರ್‌ ಗೋಪೋ (GoPro) ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.

ಸಂತ್ರಸ್ತೆ ಸಿಯಾ ಅವರ ಸಹೋದರ ನೀಡಿದ ಮಾಹಿತಿಯಂತೆ, ಕಾರಿನಲ್ಲಿದ್ದ ನಾಲ್ವರು ವ್ಯಕ್ತಿಗಳು ಮದ್ಯಪಾನ ಮಾಡಿದ್ದರು ಮತ್ತು ಸಿಯಾ ಅವರನ್ನು ಹಿಂಬಾಲಿಸುತ್ತಾ ಕಿರುಕುಳ ನೀಡುತ್ತಿದ್ದರು. ಬೈಕ್‌ನಿಂದ ದೂರವಿರಲು ಮನವಿ ಮಾಡಿದರೂ, ಕಾರು ಚಾಲಕ ಬೇಕೆಂದೇ ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾನೆ. ಅಪಘಾತದಿಂದ ಸಿಯಾ ಅವರ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿದ್ದು, ರೈಡಿಂಗ್ ಗೇರ್ (ಸುರಕ್ಷತಾ ಉಡುಪು) ಧರಿಸಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಗುರುಗ್ರಾಮದ ಸೆಕ್ಟರ್ 56 ಪೊಲೀಸ್ ಠಾಣೆಯಲ್ಲಿ ಸುಒ-ಮೊಟೊ (ಸ್ವಯಂಪ್ರೇರಿತ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಾರು ಚಾಲನೆ ಮಾಡುತ್ತಿದ್ದ ಆರೋಪಿಯನ್ನು ಕಲ್ಯಾಣ್ ಬೈನ್ಸ್ಲಾ ಎಂದು ಗುರುತಿಸಲಾಗಿದ್ದು, ಈತ ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ ಹಾಗೂ ಜಿಮ್ ಮಾಲೀಕ ಎಂದು ಹೇಳಿಕೊಂಡಿದ್ದಾನೆ. ಆದರೆ, ಅಪಘಾತಕ್ಕೀಡಾದ ಕಾರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮನೀಶ್ ಎಂಬುವರಿಗೆ ಸೇರಿದ್ದಾಗಿದೆ. ಪೊಲೀಸರು ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles