Home ಕ್ರೈಂ ನ್ಯೂಸ್ ಪ್ರಶ್ನೆ ಪತ್ರಿಕೆ ಲೀಕ್ ಅಲ್ಲ, ಹೈಟೆಕ್ ಹ್ಯಾಕಿಂಗ್: ಫಾರ್ಮಸಿ ಪರೀಕ್ಷೆ ಅಕ್ರಮದ ರಹಸ್ಯವೇ ಭಯಾನಕ, 43 ಮಂದಿ ಬಂಧನ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಪ್ರಶ್ನೆ ಪತ್ರಿಕೆ ಲೀಕ್ ಅಲ್ಲ, ಹೈಟೆಕ್ ಹ್ಯಾಕಿಂಗ್: ಫಾರ್ಮಸಿ ಪರೀಕ್ಷೆ ಅಕ್ರಮದ ರಹಸ್ಯವೇ ಭಯಾನಕ, 43 ಮಂದಿ ಬಂಧನ!

Share
ಫಾರ್ಮಸಿ
Share

ಚಂಡೀಗಢ: ಪಂಜಾಬ್‌ನ ಫಾರ್ಮಸಿ ಅಧಿಕಾರಿಗಳ ನೇಮಕಾತಿ ಪರೀಕ್ಷೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮವು ಪ್ರಶ್ನೆ ಪತ್ರಿಕೆ ಸೋರಿಕೆಯಲ್ಲ (Paper Leak), ಬದಲಾಗಿ ಹರಿಯಾಣ ಮೂಲದ ಗ್ಯಾಂಗ್ ನಡೆಸಿದ ಬೃಹತ್ “ಹೈಟೆಕ್ ಕಾಪಿ” (High-tech Cheating) ಜಾಲ ಎಂದು ಪಂಜಾಬ್ ಶಿಕ್ಷಣ ಸಚಿವ ಹರ್ಜೋತ್ ಸಿಂಗ್ ಬೈನ್ಸ್ ತಿಳಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ 10 ಮುಖ್ಯ ಆರೋಪಿಗಳು, 25 ಅಭ್ಯರ್ಥಿಗಳು ಹಾಗೂ 8 ಏಜೆಂಟರು ಸೇರಿದಂತೆ ಒಟ್ಟು 43 ಜನರನ್ನು ಬಂಧಿಸಿದ್ದಾರೆ.

ಭಿವಾನಿ ಟು ಫರೀದ್‌ಕೋಟ್: ಹೈಟೆಕ್ ಕಾಪಿ ದಂಧೆಯ ನೆಟ್‌ವರ್ಕ್

ಪೊಲೀಸ್ ತನಿಖೆಯ ಪ್ರಕಾರ, ಈ ದಂಧೆಯ ಮುಖ್ಯ ಬೇರುಗಳು ಹರಿಯಾಣದ ಭಿವಾನಿ ಜಿಲ್ಲೆಯಲ್ಲಿದ್ದವು. ಹರಿಯಾಣದಲ್ಲಿ ಅಭ್ಯರ್ಥಿಗಳ ಅರ್ಜಿ ಭರ್ತಿ ಮಾಡುವುದರಿಂದ ಹಿಡಿದು ಪರೀಕ್ಷಾ ಕೇಂದ್ರಗಳಲ್ಲಿ ಕಾಪಿ ಹೊಡೆಯಲು ನೆರವಾಗುತ್ತಿದ್ದ ಈ ಗ್ಯಾಂಗ್, ನಂತರ ಪಂಜಾಬ್‌ನ ಫಿರೋಜ್‌ಪುರ ಮತ್ತು ಫರೀದ್‌ಕೋಟ್‌ಗೆ ತನ್ನ ಜಾಲವನ್ನು ವಿಸ್ತರಿಸಿತ್ತು.

ಫರೀದ್‌ಕೋಟ್‌ನಲ್ಲಿರುವ ಗ್ಯಾಂಗ್‌ನ ಸದಸ್ಯ ಗುರ್ಮೀತ್ ಸಿಂಗ್ ಎಂಬಾತನ ಮನೆಯನ್ನೇ ಕಂಟ್ರೋಲ್ ರೂಮ್ ಆಗಿ ಬಳಸಿಕೊಳ್ಳಲಾಗುತ್ತಿತ್ತು. ಇಲ್ಲಿಂದಲೇ ಪರೀಕ್ಷಾರ್ಥಿಗಳಿಗೆ ಉತ್ತರಗಳನ್ನು ತಲುಪಿಸುವ ಕಾರ್ಯ ನಡೆಯುತ್ತಿತ್ತು.

ಹೇಗೆ ನಡೆಯುತ್ತಿತ್ತು ಈ ಹೈಟೆಕ್ ಅಕ್ರಮ?

ರಿಯಲ್-ಟೈಮ್ ಸ್ಕ್ಯಾನಿಂಗ್: ಪರೀಕ್ಷೆ ಆರಂಭವಾದ ಕೆಲವೇ ನಿಮಿಷಗಳಲ್ಲಿ ಅಭ್ಯರ್ಥಿಯೊಬ್ಬ ಪೆನ್ ಕ್ಯಾಮೆರಾ/ಮೊಬೈಲ್ ಸ್ಕ್ಯಾನರ್ ಬಳಸಿ ಪ್ರಶ್ನೆ ಪತ್ರಿಕೆಯನ್ನು ಸ್ಕ್ಯಾನ್ ಮಾಡಿ ವಾಟ್ಸಾಪ್ ಮೂಲಕ ಹೊರಗಡೆ ಕಳುಹಿಸಿದ್ದ.

ಬ್ಲೂಟೂತ್ & RF ಡಿವೈಸ್: ಹೊರಗಿನಿಂದ ಹೆಡ್‌ಫೋನ್, ಮೈಕ್ರೋ ಬ್ಲೂಟೂತ್ ಇಯರ್‌ಪೀಸ್ ಹಾಗೂ ಆರ್.ಎಫ್ (RF) ಆಂಟೆನಾ ಮೂಲಕ ಉತ್ತರಗಳನ್ನು ಪರೀಕ್ಷಾ ಕೊಠಡಿಯಲ್ಲಿದ್ದ ಅಭ್ಯರ್ಥಿಗಳಿಗೆ ರವಾನಿಸಲಾಗುತ್ತಿತ್ತು.

ರೂ. 3 ರಿಂದ 13 ಲಕ್ಷ ಡೀಲ್: ಸರ್ಕಾರಿ ಹುದ್ದೆ ಕೊಡಿಸುವುದಾಗಿ ಪ್ರತಿಯೊಬ್ಬ ಅಭ್ಯರ್ಥಿಯಿಂದ 3 ಲಕ್ಷದಿಂದ 13 ಲಕ್ಷ ರೂಪಾಯಿವರೆಗೆ ಹಣ ವಸೂಲಿ ಮಾಡಲಾಗಿತ್ತು.

ಪೊಲೀಸ್ ಉಪ ಮಹಾನಿರೀಕ್ಷಕಿ (DIG) ನೀಲಂಬರಿ ಜಗದಾಳೆ ನೇತೃತ್ವದ 200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯ ತಂಡ ರಹಸ್ಯ ಮಾಹಿತಿಯನ್ನಾಧರಿಸಿ ಪರೀಕ್ಷಾ ಕೇಂದ್ರಗಳ ಮೇಲೆ ದಾಳಿ ನಡೆಸಿ ಹಲವು ಮೊಬೈಲ್, ಇಯರ್‌ಫೋನ್ ಹಾಗೂ ಇವಿಎಂ ಮಾದರಿಯ ಸಾಧನಗಳನ್ನು ಜಪ್ತಿ ಮಾಡಿದೆ.

“ಸರ್ಕಾರ ಯಾವುದೇ ತನಿಖೆಗೆ ಸಿದ್ಧವಿದೆ. ಇದು ಪೇಪರ್ ಲೀಕ್ ಅಲ್ಲ, ತಂತ್ರಜ್ಞಾನ ದುರ್ಬಳಕೆ ಮಾಡಿಕೊಂಡು ನಡೆಸಿದ ಅಕ್ರಮ. ಅಗತ್ಯಬಿದ್ದರೆ ಸಿಬಿಐ ತನಿಖೆಗೂ ಆದೇಶಿಸಲು ಸಿದ್ಧ.”

ಹರ್ಜೋತ್ ಸಿಂಗ್ ಬೈನ್ಸ್, ಪಂಜಾಬ್ ಶಿಕ್ಷಣ ಸಚಿ

Share

Leave a comment

Leave a Reply

Your email address will not be published. Required fields are marked *

Related Articles