Home ಕ್ರೈಂ ನ್ಯೂಸ್ ವಿಧಿಬರಹ ಎಂಥ ಘೋರ….. ಪ್ರವಾಹದ ನೀರಿಗೆ ಕೊಚ್ಚಿಹೋದ ಕಾರಿನಲ್ಲಿ ಕಣ್ಣೆದುರೇ ಪತ್ನಿ, ಇಬ್ಬರು ಮಕ್ಕಳು ಬಾರದೂರಿಗೆ ಪಯಣ…! ಮರ ಹಿಡಿದು ಜೀವ ಉಳಿಸಿಕೊಂಡ ಪತಿ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ವಿಧಿಬರಹ ಎಂಥ ಘೋರ….. ಪ್ರವಾಹದ ನೀರಿಗೆ ಕೊಚ್ಚಿಹೋದ ಕಾರಿನಲ್ಲಿ ಕಣ್ಣೆದುರೇ ಪತ್ನಿ, ಇಬ್ಬರು ಮಕ್ಕಳು ಬಾರದೂರಿಗೆ ಪಯಣ…! ಮರ ಹಿಡಿದು ಜೀವ ಉಳಿಸಿಕೊಂಡ ಪತಿ!

Share
ಪ್ರವಾಹ
Share

ಯವತ್ಮಾಳ್: ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ ನದಿ-ನಾಲೆಗಳು ಉಕ್ಕಿ ಹರಿಯುತ್ತಿದ್ದು, ಯವತ್ಮಾಳ್ ಜಿಲ್ಲೆಯಲ್ಲಿ ಕರುಳು ಹಿಂಡುವ ಘಟನೆಯೊಂದು ನಡೆದಿದೆ.

ಉಕ್ಕಿ ಹರಿಯುತ್ತಿದ್ದ ನದಿಯ ನೀರಿನ ರಭಸಕ್ಕೆ ಎಸ್‌ಯುವಿ (SUV) ಕಾರೊಂದು ಕೊಚ್ಚಿಹೋಗಿದ್ದು, ಕಾರಿನಲ್ಲಿದ್ದ ತಾಯಿ ಹಾಗೂ ಅವರ ಇಬ್ಬರು ಹೆಣ್ಣುಮಕ್ಕಳು ಜಲಸಮಾಧಿಯಾಗಿದ್ದಾರೆ. ಕಾರು ಚಲಾಯಿಸುತ್ತಿದ್ದ ಪತಿ ಸಮಯಪ್ರಜ್ಞೆಯಿಂದ ಮರವನ್ನು ಗಟ್ಟಿಯಾಗಿ ಹಿಡಿದುಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಘಟನೆಯ ವಿವರ:

ಅವಿನಾಶ್ ಖಂಡಾರೆ ಹಾಗೂ ಅವರ ಕುಟುಂಬಸ್ಥರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ದಾರ್ವಾ ಪ್ರದೇಶದ ಕುಪ್ತಿ ನದಿಯ (ಅಡಾಣ್ ನದಿ) ಸೇತುವೆಯ ಮೇಲಿಂದ ಭಾರಿ ಪ್ರಮಾಣದ ಪ್ರವಾಹ ಹರಿಯುತ್ತಿತ್ತು. ರಾತ್ರಿಯ ಕತ್ತಲಿನಲ್ಲಿ ಪ್ರವಾಹದ ತೀವ್ರತೆ ಹಾಗೂ ನೀರಿನ ಆಳವನ್ನು ಸರಿಯಾಗಿ ಅಂದಾಜಿಸಲು ಸಾಧ್ಯವಾಗದೆ ಕಾರು ಚಾಲಕ ಸೇತುವೆ ದಾಟಲು ಯತ್ನಿಸಿದ್ದಾರೆ. ಈ ವೇಳೆ ನೀರಿನ ತೀವ್ರ ರಭಸಕ್ಕೆ ಕಾರು ನಿಯಂತ್ರಣ ತಪ್ಪಿ ನದಿಗೆ ಕೊಚ್ಚಿಹೋಗಿದೆ.

ಕಣ್ಣೆದುರೇ ಕೊಚ್ಚಿಹೋದ ಕುಟುಂಬ:

ಕಾರು ಕೊಚ್ಚಿಹೋಗುತ್ತಿದ್ದಂತೆ ಸಮಯಪ್ರಜ್ಞೆ ಮೆರೆದ ಅವಿನಾಶ್ ಖಂಡಾರೆ ಅವರು ಕಾರಿನಿಂದ ಹೊರಬಂದು ನದಿ ದಂಡೆಯಲ್ಲಿದ್ದ ಮರವೊಂದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದಾರೆ. ಆದರೆ, ಅವರ ಕಣ್ಣೆದುರೇ ಪತ್ನಿ ಮಾಧವಿ ಹಾಗೂ ಇಬ್ಬರು ಸಣ್ಣ ಹೆಣ್ಣುಮಕ್ಕಳು ಕಾರಿನೊಳಗೆ ಸಿಲುಕಿ ನೀರಿನ ಸೆಳೆತಕ್ಕೆ ಕೊಚ್ಚಿಹೋಗಿದ್ದಾರೆ.

ಶವಗಳ ಪತ್ತೆ:

ವಿಷಯ ತಿಳಿದ ಕೂಡಲೇ ಪೊಲೀಸರು ಹಾಗೂ ವಿಪತ್ತು ನಿರ್ವಹಣಾ ಪಡೆಗಳು ಸ್ಥಳಕ್ಕೆ ಧಾವಿಸಿ ಸುದೀರ್ಘ ಕಾರ್ಯಾಚರಣೆ ನಡೆಸಿದವು. ಶುಕ್ರವಾರ ಕಾರು ಹಾಗೂ ಮೂವರ ಮೃತದೇಹಗಳನ್ನು ನದಿಯಿಂದ ಹೊರತೆಗೆಯಲಾಗಿದೆ.

ಮಹಾರಾಷ್ಟ್ರದಲ್ಲಿ ಮುಂದಿನ ಕೆಲವು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ರಾಜ್ಯದಾದ್ಯಂತ ರೆಡ್, ಆರೆಂಜ್ ಹಾಗೂ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಹರಿಯುವ ನೀರಿನಲ್ಲಿ ಅಪಾಯಕಾರಿ ಪ್ರಯಾಣ ಮಾಡದಂತೆ ಆಡಳಿತ ಮಂಡಳಿ ಎಚ್ಚರಿಕೆ ನೀಡಿದೆ.

Share

Leave a comment

Leave a Reply

Your email address will not be published. Required fields are marked *