Home ಕ್ರೈಂ ನ್ಯೂಸ್ ಮದುವೆ ಶಾಪಿಂಗ್ ನೆಪದಲ್ಲಿ ಉದ್ಯಮಿಯಿಂದ ರೂ.1 ಕೋಟಿ ಪೀಕಿ ಪ್ರಿಯಕರನಿಗೆ ನೀಡಿದ್ದ ಕೊಲೆಗಾತಿ: ಕಂದಕಕ್ಕೆ ತಳ್ಳಿ ಕೊಲೆಗೈದ ಹಂತಕಿ ಊಸರವಳ್ಳಿ ನಾಟಕ ಬಟಾಬಯಲು!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರುವಾಣಿಜ್ಯ

ಮದುವೆ ಶಾಪಿಂಗ್ ನೆಪದಲ್ಲಿ ಉದ್ಯಮಿಯಿಂದ ರೂ.1 ಕೋಟಿ ಪೀಕಿ ಪ್ರಿಯಕರನಿಗೆ ನೀಡಿದ್ದ ಕೊಲೆಗಾತಿ: ಕಂದಕಕ್ಕೆ ತಳ್ಳಿ ಕೊಲೆಗೈದ ಹಂತಕಿ ಊಸರವಳ್ಳಿ ನಾಟಕ ಬಟಾಬಯಲು!

Share
ಮದುವೆ
Share

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ನಡೆದ 26 ವರ್ಷದ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ತನಿಖೆಯ ವೇಳೆ ಬೆಚ್ಚಿಬೀಳಿಸುವ ಆಘಾತಕಾರಿ ಸತ್ಯಗಳು ಹೊರಬಂದಿವೆ. ಮದುವೆ ಶಾಪಿಂಗ್ ನೆಪದಲ್ಲಿ ತನ್ನ ಭಾವಿ ಪತಿಯಿಂದ ಬರೋಬ್ಬರಿ 1 ಕೋಟಿ ರೂಪಾಯಿ ಹಣ ಪಡೆದ ಯುವತಿ, ಆ ಸಂಪೂರ್ಣ ಮೊತ್ತವನ್ನು ತನ್ನ ಪ್ರಿಯಕರನಿಗೆ ನೀಡಿ, ಕೊನೆಗೆ ಇಬ್ಬರೂ ಸೇರಿ ಉದ್ಯಮಿಯನ್ನು ಕೋಟೆಯ ಕಂದಕಕ್ಕೆ ತಳ್ಳಿ ಕೊಲೆ ಮಾಡಿದ್ದಾರೆ!

ಜೂನ್ 18 ರಂದು ಪುಣೆಯ ಪ್ರಸಿದ್ಧ ಲೋಹಗಢ್ ಕೋಟೆಯಲ್ಲಿ (Lohagad Fort) ನಡೆದಿದ್ದ ಈ ಭೀಕರ ಕೊಲೆಗೆ ಸಂಬಂಧಿಸಿದಂತೆ ಮೃತರ ಭಾವಿ ಪತ್ನಿ ಸಿಯಾ ಗೋಯಲ್ (20) ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ (22) ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಿಯಕರನ ಸೆಟಲ್‌ಮೆಂಟ್‌ಗಾಗಿ ₹1 ಕೋಟಿ ವಂಚನೆ!

ಪೊಲೀಸ್ ಮೂಲಗಳ ಪ್ರಕಾರ, ಚೇತನ್ ಚೌಧರಿ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯವನಾಗಿದ್ದ. ತಾನು ಆರ್ಥಿಕವಾಗಿ ಸ್ಥಿರವಾಗಲು ಕನಿಷ್ಠ 3 ವರ್ಷ ಬೇಕಾಗುತ್ತದೆ ಎಂದು ಆತ ಸಿಯಾ ಬಳಿ ಹೇಳಿದ್ದ. ಇದಕ್ಕಾಗಿ ಸ್ಕೆಚ್ ಹಾಕಿದ ಸಿಯಾ ಗೋಯಲ್, ತನ್ನ ಭಾವಿ ಪತಿ ಕೇತನ್ ಅಗರ್ವಾಲ್ ಬಳಿ ಮದುವೆ ಶಾಪಿಂಗ್ ಮತ್ತು ಸಿದ್ಧತೆಗಳ ನೆಪ ಹೇಳಿ 1 ಕೋಟಿ ರೂಪಾಯಿ ಹಣ ಪಡೆದಿದ್ದಾಳೆ. ಆ ಹಣವನ್ನು ತನ್ನ ಮದುವೆಗೆ ಬಳಸುವ ಬದಲಾಗಿ, ಪ್ರಿಯಕರ ಚೇತನ್‌ನ ಬಿಸಿನೆಸ್ ಮತ್ತು ಕೆರಿಯರ್ ಸೆಟಲ್‌ಮೆಂಟ್‌ಗಾಗಿ ವರ್ಗಾಯಿಸಿದ್ದಾಳೆ.

ಕೊಲೆಯ ನಂತರ ಯಾರಿಗೂ ಸಂಶಯ ಬಾರದಿರಲು ಮುಂದಿನ 3 ವರ್ಷಗಳ ಕಾಲ ತಾನು ಮದುವೆಯಾಗದೆ ಒಂಟಿಯಾಗಿಯೇ ಇರಲು ಮತ್ತು ಚೇತನ್ ಆರ್ಥಿಕವಾಗಿ ಸುಧಾರಿಸಿಕೊಂಡ ಬಳಿಕ ಇಬ್ಬರೂ ಮದುವೆಯಾಗಲು ಯೋಜನೆ ರೂಪಿಸಿದ್ದರು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

‘ಶೂ ಲೇಸ್’ ಕೋಡ್ ವರ್ಡ್ ಮತ್ತು ಸಿಗ್ನಲ್ ಆಧಾರಿತ ಕೊಲೆ!

ಜೂನ್ 18 ರಂದು ಕೇತನ್‌ನನ್ನು ಲೋಹಗಢ್ ಕೋಟೆಗೆ ಕರೆದೊಯ್ದಿದ್ದ ಸಿಯಾ, ಕೊಲೆಗೆ ವಿಚಿತ್ರ ಕೋಡ್ ವರ್ಡ್ ಬಳಸಿದ್ದಳು.

  • ಕೋಟೆಯ ತುದಿಯಲ್ಲಿ ನಿಂತಿದ್ದಾಗ ಸಿಯಾ ನೀರು ಕುಡಿಯುವ ನೆಪದಲ್ಲೋ ಅಥವಾ ಶೂ ಲೇಸ್ ಕಟ್ಟುವ ನೆಪದಲ್ಲೋ ಕೆಳಗೆ ಕುಳಿತುಕೊಳ್ಳಬೇಕಿತ್ತು. ಇದು ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದ ಪ್ರಿಯಕರ ಚೇತನ್‌ಗೆ ನೀಡುವ ಸಿಗ್ನಲ್ ಆಗಿತ್ತು.

  • ಸಿಯಾ ಕೆಳಗೆ ಕುಳಿತುಕೊಳ್ಳುತ್ತಿದ್ದಂತೆ ಚೇತನ್ ಹಿಂದಿನಿಂದ ಬಂದು ಕೇತನ್‌ನನ್ನು ಕಂದಕಕ್ಕೆ ತಳ್ಳಬೇಕೆಂದು ಪ್ಲಾನ್ ಮಾಡಲಾಗಿತ್ತು.

  • ಸಿಯಾ ಉದ್ದೇಶಪೂರ್ವಕವಾಗಿಯೇ ಕೆಳಗೆ ಕುಳಿತಿದ್ದಳು. ಏಕೆಂದರೆ ಚೇತನ್ ತಳ್ಳುವಾಗ ಕೇತನ್ ಆಕಸ್ಮಿಕವಾಗಿ ಸಿಯಾಳನ್ನು ಹಿಡಿದುಕೊಂಡರೆ ಆಕೆಯೂ ಕಂದಕಕ್ಕೆ ಬೀಳಬಹುದು ಎಂಬ ಭಯ ಇಬ್ಬರಿಗೂ ಇತ್ತು. ಹೀಗಾಗಿ ಆಕೆಯ ಸುರಕ್ಷತೆಗಾಗಿ ಈ ‘ಸಿಟ್ಟಿಂಗ್ ಸಿಗ್ನಲ್’ ಸ್ಕೆಚ್ ಹಾಕಲಾಗಿತ್ತು.

ಮೊದಲ ಯತ್ನ ವಿಫಲ, ಎರಡನೇ ಯತ್ನದಲ್ಲಿ ಮೃತ್ಯು!

ಜೂನ್ 14 ರಂದೇ ಸಿಯಾ ಮೊದಲ ಬಾರಿಗೆ ಕೇತನ್‌ನನ್ನು ತಳ್ಳಲು ಯತ್ನಿಸಿದ್ದಳು. ಆದರೆ ಕೇತನ್ ಪೊದೆಯೊಂದನ್ನು ಹಿಡಿದು ಬದುಕುಳಿದಿದ್ದರು. ಆಗ ಸಿಯಾ ‘ಹಾವು ಬಂತು’ ಎಂದು ಸುಳ್ಳು ಹೇಳಿ ನಾಟಕವಾಡಿದ್ದಳು. ಹೀಗಾಗಿ ಜೂನ್ 18 ರಂದು ಎರಡನೇ ಬಾರಿ ಪ್ಲಾನ್ ಮಾಡಿದಾಗ, ಯಾವುದೇ ಕಾರಣಕ್ಕೂ ಕೇತನ್ ಬದುಕುಳಿಯಬಾರದು ಎಂದು ಪ್ರಿಯಕರ ಚೇತನ್ ಖುದ್ದಾಗಿ ಸ್ಕೂಟರ್‌ನಲ್ಲಿ 90 ಕಿಮೀ ಪ್ರಯಾಣಿಸಿ ಕೋಟೆಗೆ ತಲುಪಿದ್ದ. ಟೋಲ್ ಪ್ಲಾಜಾಗಳಲ್ಲಿ ಕಾರು ಸಿಸಿಟಿವಿಗೆ ಸಿಕ್ಕಿಬೀಳುತ್ತದೆ ಎಂಬ ಕಾರಣಕ್ಕೆ ಆತ ಸ್ಕೂಟರ್ ಬಳಸಿದ್ದ. ಕೊಲೆಗೆ ಕೇವಲ 34 ನಿಮಿಷಗಳ ಮೊದಲು ಇವರಿಬ್ಬರ ನಡುವೆ ‘ಸೀಕ್ರೆಟ್ ಕಾಲ್’ ನಡೆದಿರುವುದು ಸಿಡಿಆರ್ (CDR) ತನಿಖೆಯಿಂದ ಸಾಬೀತಾಗಿದೆ

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles