Home ಕ್ರೈಂ ನ್ಯೂಸ್ ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಉರ್ದು ಕಲಿಸುತ್ತಿದ್ದ ಮುಖ್ಯೋಪಾಧ್ಯಾಯನ ಮೇಲೆ ಹಲ್ಲೆ: ಶಾಲೆಗೆ ನುಗ್ಗಿ ಪ್ರಿನ್ಸಿಪಾಲ್ ಮೇಲೆ ಹಲ್ಲೆ ನಡೆಸಿದ ಜ‌ನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಉರ್ದು ಕಲಿಸುತ್ತಿದ್ದ ಮುಖ್ಯೋಪಾಧ್ಯಾಯನ ಮೇಲೆ ಹಲ್ಲೆ: ಶಾಲೆಗೆ ನುಗ್ಗಿ ಪ್ರಿನ್ಸಿಪಾಲ್ ಮೇಲೆ ಹಲ್ಲೆ ನಡೆಸಿದ ಜ‌ನ!

Share
ವಿದ್ಯಾರ್ಥಿ
Share

ಹೈದರಾಬಾದ್: ಮುಸ್ಲಿಮೇತರ ವಿದ್ಯಾರ್ಥಿಗಳಿಗೆ ಉರ್ದು ಕಲಿಸಲಾಗುತ್ತಿದೆ ಎಂಬ ಪೋಷಕರ ದೂರಿನ ಬೆನ್ನಲ್ಲೇ, ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಶಾಲೆಯೊಂದರ ಮುಖ್ಯೋಪಾಧ್ಯಾಯರ ಮೇಲೆ ಬಲಪಂಥೀಯ ಸಂಘಟನೆಯ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ಸೋಮವಾರ (ಜೂನ್ 29, 2026) ನಡೆದಿದೆ. ನಿಜಾಮಾಬಾದ್ ಜಿಲ್ಲೆಯ ಪೆರ್ಕಿಟ್ ಗ್ರಾಮದ ಭರತ್ ಚಂದ್ರ ಹೈಸ್ಕೂಲ್‌ನಲ್ಲಿ ಈ ಘಟನೆ ಸಂಭವಿಸಿದೆ.

ಪೋಷಕರ ಮತ್ತು ಪ್ರತಿಭಟನಾಕಾರರ ಆರೋಪವೇನು?

ಶಾಲೆಯಲ್ಲಿ ನಿಗದಿಪಡಿಸಲಾದ ಹಿಂದಿ ಪಠ್ಯಕ್ರಮದ ಬದಲಾಗಿ ವಿದ್ಯಾರ್ಥಿಗಳಿಗೆ ಉರ್ದು ಕಲಿಸಲಾಗುತ್ತಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಮಕ್ಕಳಿಗೆ ನಮಾಜ್ ಮಾಡಲು ಮತ್ತು ಇಸ್ಲಾಮಿಕ್ ಪ್ರಾರ್ಥನೆಗಳಾದ ಕಲಿಮಾವನ್ನು ಪಠಿಸಲು ಒತ್ತಾಯಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಶಾಲೆಯ ಬಳಿ ಜಮಾಯಿಸಿದ ಬಲಪಂಥೀಯ ಕಾರ್ಯಕರ್ತರು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದು, ಪ್ರತಿಭಟನೆಯ ನಡುವೆ ಪ್ರಿನ್ಸಿಪಾಲ್ ಅಮೀರ್ ಖಾನ್ ಅವರ ಮೇಲೆ ಮ್ಯಾನಹ್ಯಾಂಡ್ಲಿಂಗ್ (ದೈಹಿಕ ಹಲ್ಲೆ) ನಡೆಸಿದ್ದಾರೆ.

ಮುಖ್ಯೋಪಾಧ್ಯಾಯರ ಸ್ಪಷ್ಟನೆ:

ಈ ಎಲ್ಲಾ ಆರೋಪಗಳನ್ನು ಶಾಲಾ ಆಡಳಿತ ಮಂಡಳಿ ಮತ್ತು ಪ್ರಿನ್ಸಿಪಾಲ್ ಅಮೀರ್ ಖಾನ್ ತಳ್ಳಿಹಾಕಿದ್ದಾರೆ. “ಕೆಲವು ಪೋಷಕರ ಮನವಿಯ ಮೇರೆಗೆ ಶಾಲೆಯಲ್ಲಿ ಕೇವಲ ಎರಡು ದಿನಗಳ ಕಾಲ ಉರ್ದು ತರಗತಿಗಳನ್ನು ನಡೆಸಲಾಗಿತ್ತು. ಅದರಲ್ಲಿ ಕೇವಲ ಉರ್ದು ಅಲ್ಪಾಬೆಟ್ಸ್ (ವರ್ಣಮಾಲೆ) ಮಾತ್ರ ಕಲಿಸಲಾಗಿದೆಯೇ ಹೊರತು ಯಾವುದೇ ಧಾರ್ಮಿಕ ಪ್ರಾರ್ಥನೆ ಮಾಡಿಸಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.

ಎರಡು ಎಫ್‌ಐಆರ್ ದಾಖಲು:

ಘಟನೆಗೆ ಸಂಬಂಧಿಸಿದಂತೆ ಅರ್ಮೂರ್ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯಿಂದ ದೂರು ದಾಖಲಾಗಿದ್ದು, ಪೊಲೀಸರು ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಅಕ್ರಮ ಪ್ರವೇಶ, ಹಲ್ಲೆ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ಸ್ಥಳೀಯ ಬಿಜೆಪಿ ನಾಯಕರು ಸೇರಿದಂತೆ ಸುಮಾರು 20 ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮತ್ತೊಂದೆಡೆ, ಅನುಮತಿಯಿಲ್ಲದೆ ಉರ್ದು ಕಲಿಸಿದ ಮತ್ತು ಧರ್ಮಗಳ ನಡುವೆ ದ್ವೇಷ ಪ್ರಚೋದಿಸಿದ ಆರೋಪದ ಮೇಲೆ ಶಾಲೆಯ ಪ್ರಿನ್ಸಿಪಾಲ್, ಕರೆಸ್ಪಾಂಡೆಂಟ್ ಮತ್ತು ಉರ್ದು ಶಿಕ್ಷಕರ ವಿರುದ್ಧವೂ ಕೌಂಟರ್ ಕೇಸ್ ದಾಖಲಾಗಿದೆ.

ನಿಜಾಮಾಬಾದ್ ಬಂದ್‌ಗೆ ಕರೆ:

ಮುಖ್ಯೋಪಾಧ್ಯಾಯರ ಮೇಲಿನ ಹಲ್ಲೆಯನ್ನು ಖಂಡಿಸಿ ಹಾಗೂ ಶಾಲಾ ಸಿಬ್ಬಂದಿಗೆ ಸೂಕ್ತ ರಕ್ಷಣೆ ನೀಡುವಂತೆ ಆಗ್ರಹಿಸಿ ವಿವಿಧ ಅಲ್ಪಸಂಖ್ಯಾತ ಮತ್ತು ಶಿಕ್ಷಕರ ಸಂಘಟನೆಗಳು ಇಂದು ನಿಜಾಮಾಬಾದ್‌ನಲ್ಲಿ ಬಂದ್‌ಗೆ ಕರೆ ನೀಡಿವೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles