ಬೆಂಗಳೂರು: ಉದ್ಯೋಗ ಆಕಾಂಕ್ಷಿ ಯುವಸಮೂಹದ ನೆಮ್ಮದಿಯ ನಾಳೆಗಳಿಗಾಗಿ “ಮುಖ್ಯಮಂತ್ರಿ ಉದ್ಯೋಗ ಸಂಕಲ್ಪ” ಆರಂಭಿಸುತ್ತಿದ್ದೇನೆ ಎಂದು ಸಿಎಂ ಡಿ ಕೆ ಶಿವಕುಮಾರ್ ಘೋಷಿಸಿದ್ದಾರೆ.
80 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ನಂತರ ಅವರು ಮಾತನಾಡಿದರು.
ಪ್ರಮುಖ ಘೋಷಣೆಗಳು:
ಸರ್ಕಾರಿ ಹುದ್ದೆಗಳ ಭರ್ತಿ:
ಸರ್ಕಾರಿ ವಲಯದ ಖಾಲಿ ಹುದ್ದೆಗಳನ್ನು ತುಂಬುವುದು ನಮ್ಮ ಮೊದಲ ಆದ್ಯತೆ.
ವಿವಿಧ ಇಲಾಖೆಗಳ ಖಾಲಿ ಹುದ್ದೆಗಳ ಪೈಕಿ ಪ್ರಮುಖ 72,000 ಹುದ್ದೆಗಳನ್ನು ತುಂಬುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.
ಮುಂದಿನ ಆರು ತಿಂಗಳಲ್ಲಿ ಎಲ್ಲಾ ಹುದ್ದೆಗಳ ಭರ್ತಿಗಾಗಿ ಅಧಿಸೂಚನೆಗಳನ್ನು ಹೊರಡಿಸುತ್ತೇವೆ.
“ಯುವ ಉದ್ಯೋಗ ಸೇತು” ಎಂಬ ಹೊಸ ಯೋಜನೆ ಆರಂಭಿಸಲಾಗುವುದು. ಖಾಸಗಿ ವಲಯದಲ್ಲಿರುವ ಉದ್ಯೋಗದ ಅವಕಾಶಗಳನ್ನು ಯುವಜನರಿಗೆ ತಲುಪಿಸಲು ರೂಪಿಸಲಾಗುವುದು.
ಸಮಗ್ರ ತಂತ್ರಾಂಶ :
ಈ ತಂತ್ರಾಂಶ ಉದ್ಯೋಗ ಹುಡುಕುವವರು, ಉದ್ಯೋಗ ನೀಡುವವರು ಮತ್ತು ಶಿಕ್ಷಣ ಸಂಸ್ಥೆಗಳನ್ನು ಒಂದೇ ವೇದಿಕೆಗೆ ತರಲಿದೆ.
ಖಾಸಗಿ ಕೈಗಾರಿಕೆಗಳ ಸಹಯೋಗದಲ್ಲಿ 10,000 ಯುವಕರಿಗೆ ಉದ್ಯೋಗದ ಅವಕಾಶ ಕಲ್ಪಿಸಲಾಗುವುದು.
ಉದ್ಯೋಗ ನಿಧಿ:
ಉದ್ಯೋಗ ನಿಧಿ ಎಂಬ ಹೊಸ ಯೋಜನೆಯನ್ನು ಆರಂಭಿಸಲಾಗುವುದು.
ರಾಜ್ಯದ ಅತ್ಯಂತ ಹಿಂದುಳಿದ ಹತ್ತು ಜಿಲ್ಲೆಗಳಲ್ಲಿ ಹೊಸ ಉದ್ಯೋಗ ಸೃಷ್ಟಿಸುವ ಉದ್ಯಮಿಗಳಿಗೆ ಸರ್ಕಾರ ಪ್ರೋತ್ಸಾಹ ನೀಡಲಿದೆ.
ಪ್ರತಿ ಹೊಸ ಉದ್ಯೋಗಕ್ಕೆ ಪ್ರತಿ ತಿಂಗಳು ಸರ್ಕಾರವೇ ತಲಾ 2500 ರೂಪಾಯಿ ಪ್ರೋತ್ಸಾಹ ಧನ ನೀಡಲಿದೆ. ಈ ಸೌಲಭ್ಯ ಮುಂದಿನ ಎರಡು ವರ್ಷಗಳ ಕಾಲ ಜಾರಿಯಲ್ಲಿರುತ್ತದೆ. ಇದರಿಂದ ಒಂದು ಲಕ್ಷ ಹೊಸ
ಉದ್ಯೋಗಗಳು ಸೃಷ್ಟಿಯಾಗಲಿವೆ.
- 72 ಸಾವಿರ ಹುದ್ದೆಗಳ ಭರ್ತಿ
- 72000 recruitment Karnataka
- DK Shivakumar News
- Karnataka Govt Jobs
- Karnataka Latest News
- Karnataka Recruitment 2026
- Mukhyamantri Udyoga Sankalpa
- Siddaramaiah job announcement
- Udyoga Nidhi scheme
- Yuva Udyoga Setu
- ಉದ್ಯೋಗ ನಿಧಿ ಯೋಜನೆ
- ಉದ್ಯೋಗ ಸಂಕಲ್ಪ ಯೋಜನೆ
- ಕರ್ನಾಟಕ ಉದ್ಯೋಗ ಸುದ್ದಿ
- ಕರ್ನಾಟಕ ಸರ್ಕಾರಿ ನೇಮಕಾತಿ
- ಕಲ್ಯಾಣ ಕರ್ನಾಟಕ ನೇಮಕಾತಿ
- ಡಿ. ಕೆ. ಶಿವಕುಮಾರ್
- ಯುವ ಉದ್ಯೋಗ ಸೇತು
- ಸರ್ಕಾರಿ ಉದ್ಯೋಗ 2026
- ಸಿದ್ದರಾಮಯ್ಯ





Leave a comment