Home ದಾವಣಗೆರೆ ಆಯುಧ ಹಿಡಿದ ನಕ್ಸಲರು ಖಲಾಸ್, ಮುಂದಿನ ಗುರಿ ‘ಈಗ ‘ವಿಚಾರವಾದಿ ನಕ್ಸಲರ ಮಟ್ಟ ಹಾಕ್ತೇವೆ ‘: ನರೇಂದ್ರ ಮೋದಿ ಖಡಕ್ ಎಚ್ಚರಿಕೆ!
ದಾವಣಗೆರೆನವದೆಹಲಿಬೆಂಗಳೂರು

ಆಯುಧ ಹಿಡಿದ ನಕ್ಸಲರು ಖಲಾಸ್, ಮುಂದಿನ ಗುರಿ ‘ಈಗ ‘ವಿಚಾರವಾದಿ ನಕ್ಸಲರ ಮಟ್ಟ ಹಾಕ್ತೇವೆ ‘: ನರೇಂದ್ರ ಮೋದಿ ಖಡಕ್ ಎಚ್ಚರಿಕೆ!

Share
ನರೇಂದ್ರ ಮೋದಿ
Share

ನವದೆಹಲಿ:ಆಯುಧ ಹಿಡಿದ ನಕ್ಸಲರು ಖಲಾಸ್, ಮುಂದಿನ ಗುರಿ ‘ಈಗ ‘ವಿಚಾರವಾದಿ ನಕ್ಸಲರ ಮಟ್ಟ ಹಾಕ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಗುಡುಗಿದ್ದಾರೆ. 

ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಭದ್ರತೆ ಮತ್ತು ಆಂತರಿಕ ಸವಾಲುಗಳ ಕುರಿತಂತೆ ಪ್ರಮುಖ ಹೆಜ್ಜೆ ಇಟ್ಟಿರುವುದಾಗಿ ಘೋಷಿಸಿದ್ದಾರೆ.

ಆಯುಧಗಳನ್ನು ಹಿಡಿದು ಹಿಂಸಾಚಾರ ನಡೆಸುತ್ತಿದ್ದ ನಕ್ಸಲರನ್ನು ಸರ್ಕಾರ ಈಗಾಗಲೇ ಯಶಸ್ವಿಯಾಗಿ ಮಟ್ಟಹಾಕಿದೆ. ಆದರೆ, ಮುಂಬರುವ ದಿನಗಳಲ್ಲಿ ಸಮಾಜದಲ್ಲಿ ಸೈದ್ಧಾಂತಿಕ ಹಾಗೂ ಮಾನಸಿಕವಾಗಿ ಪ್ರಚೋದನೆ ನೀಡುವ ‘ದಿಮಾಗಿ ನಕ್ಸಲರನ್ನು’  ಗುರುತಿಸಿ ಅವರನ್ನು ಪ್ರತ್ಯೇಕಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಪ್ರಧಾನಿ ಎಚ್ಚರಿಸಿದ್ದಾರೆ.

ದೇಶದ ಪ್ರಗತಿ ಮತ್ತು ಆಂತರಿಕ ರಕ್ಷಣೆಗೆ ಸವಾಲಾಗಿರುವ ಇಂತಹ ನಕ್ಸಲ್ ಬೆಂಬಲಿತ ಜಾಲಗಳನ್ನು ಹತ್ತಿಕ್ಕಲು ಸರ್ಕಾರ ಮುಂದಿನ ದಿನಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಮೋದಿ ತಮ್ಮ ಭಾಷಣದಲ್ಲಿ ಸ್ಪಷ್ಟಪಡಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *