ಬೆಂಗಳೂರು: “ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷಗಳು ಟೀಕೆ ಮಾಡಿದವು. ಆದರೆ ಇಂದು ನಾವು ಗ್ಯಾರಂಟಿಗಳಿಂದಲೇ ದೇಶಕ್ಕೆ ಮಾದರಿಯಾಗಿದ್ದೇವೆ. ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ ಹೀಗೆ ಎಲ್ಲಾ ಕಡೆ ಕರ್ನಾಟಕ ಮಾದರಿ ನಕಲು ಮಾಡಿದರು ಈಗ ಅಮೇರಿಕಾದ ಡೊನಾಲ್ಡ್ ಟ್ರಂಪ್ ಕೂಡ ನಕಲು ಮಾಡುತ್ತಿದ್ದಾರೆ. ನನಗೆ ಮತ ಹಾಕಿ, ಇಂತಿಷ್ಟು ಡಾಲರ್ ಹಣ ನೀಡುತ್ತೇನೆ ಎಂದು ಹೇಳುತ್ತಿದ್ದಾರೆ. ನಮ್ಮ ಆಲೋಚನೆ ಇಡೀ ವಿಶ್ವಕ್ಕೆ ಪರಿಚಯವಾಗುತ್ತಿದೆ” ಎಂದು ಸಿಎಂ ಡಿ. ಕೆ. ಶಿವಕುಮಾರ್ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ಬಿಜೆಪಿ ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ಯಾರಂಟಿ ಯೋಜನೆಗಳನ್ನು ಎಲ್ಲಾ ಪಕ್ಷ, ಜಾತಿಗಳಿಗೂ ನೀಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷಕ್ಕೆ ಬಂದ ಮತಗಳು 1.34 ಲಕ್ಷ ಆದರೆ 4.44 ಕೋಟಿ ಜನರಿಗೆ ಅನ್ನಭಾಗ್ಯ ನೀಡುತ್ತಿದ್ದೇವೆ. ಅದಕ್ಕೆ ಕಾಂಗ್ರೆಸ್ ಶಕ್ತಿಯೇ ದೇಶದ ಶಕ್ತಿ, ಇತಿಹಾಸ” ಎಂದರು.
“ಅಸ್ಸಾಂ ರಾಜ್ಯದಲ್ಲಿ ಕೆಲವರಿಗೆ ಮಾತ್ರ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದ್ದಾರೆ. ಎಸ್ ಸಿಪಿ, ಟಿಎಸ್ ಪಿ ಜಾರಿಗೆ ತಂದಿದ್ದು ಕಾಂಗ್ರೆಸ್ ಪಕ್ಷ. ವಿದ್ಯಾರ್ಥಿಗಳಿಗೆ ಬಸ್ ಪಾಸ್ ಉಚಿತವಾಗಿ ನೀಡಲಾಗುತ್ತಿದೆ. ಜನರ ಮನೆ ಬಾಗಿಲಿಗೆ ಸರ್ಕಾರ ತಲುಪಿಸಿದ್ದೇವೆ. ಪ್ರಜಾಸೇವೆ ಮಾಡುತ್ತಿದ್ದೇವೆ. ಇದನ್ನು ಶಾಸಕರು ಹೇಗೆ ಬಳಸಿಕೊಳ್ಳುತ್ತಾರೋ ತಿಳಿದಿಲ್ಲ. ನಾನಂತೂ ಆದಷ್ಟು ಯಶಸ್ವಿಗೊಳಿಸುವೆ” ಎಂದರು.
“ಭಾರತ್ ಜೋಡೋ ಮೂಲಕ ದೇಶದ ಐಕ್ಯತೆ, ಸಮಗ್ರತೆಯನ್ನು ಕಾಪಾಡಲು ಮಾಡಲಾಯಿತು. ಈ ಪಾದಯಾತ್ರೆ ನಡೆದ ಸ್ಥಳಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿತ್ತು. ಇದೇ ಅಲೆ 2028 ರಲ್ಲಿಯೂ ಇರಲಿದೆ. ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ” ಎಂದರು.
“ಈ ದೇಶಕ್ಕೆ ಸ್ವಾತಂತ್ರ್ಯ, ರಾಷ್ಟ್ರಧ್ವಜ, ಸಂವಿಧಾನ, ರಾಷ್ಟ್ರಗೀತೆ ಸೇರಿದಂತೆ ಅನೇಕ ಕೊಡುಗೆಗಳನ್ನು ನೀಡಿದ್ದು ಕಾಂಗ್ರೆಸ್ ಪಕ್ಷ. ಬಡವರ ಪರ ಆಲೋಚನೆ ಮಾಡುವುದು, ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುವುದು, ತಂದಿರುವುದು ಕಾಂಗ್ರೆಸ್ ಪಕ್ಷ ಮಾತ್ರ. ಅದಕ್ಕೆ ನಾವು ಕಾರ್ಯಕರ್ತರಿಗೆ ಅಧಿಕಾರ ನೀಡಲು ಮುಂದಾಗಿದ್ದೇವೆ” ಎಂದರು.
ಪಂಚಾಯತಿ ಮಟ್ಟದಲ್ಲಿ 70 ಸಾವಿರ ಜನರಿಗೆ ಅಧಿಕಾರ
“ಪ್ರತಿ ಪಂಚಾಯತಿಯಲ್ಲೂ 6 ಜನರಿಗೆ ಗ್ಯಾರಂಟಿ ಸಮಿತಿಯಲ್ಲಿ ಇರಲು ಅವಕಾಶ ನೀಡಲಾಗಿದೆ. ಇದರಿಂದ 70 ಸಾವಿರ ಜನರಿಗೆ ಅಧಿಕಾರ ಸಿಗಲಿದೆ. ಇದರಿಂದ ನೀವುಗಳು ವಿಧಾನಸೌಧಕ್ಕೆ ಬರುವ ಅಧಿಕಾರ, ಜನರ ಸೇವೆ ಮಾಡಲು ಅವಕಾಶ ಸಿಗಲಿದೆ” ಎಂದರು.
“ಯುವಕರು ಕೌಶಲ್ಯದ ಮೇಲೆ ಹೆಚ್ಚು ಆಧ್ಯತೆ ನೀಡಬೇಕು. ಇದರಿಂದ ಹೆಚ್ಚು ಅವಕಾಶಗಳು ಸೃಷ್ಟಿಯಾಗಲಿದೆ. ಎಲ್ಲರ ಕೆಲಸಗಳನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಅದಕ್ಕೆ ಅದರದೇ ಆದ ಕೌಶಲ್ಯ ಮುಖ್ಯ. ಉದ್ಯೋಗ ಮಾಡುವ ಅವಕಾಶವಿದೆ” ಎಂದರು
“ಎಲ್ಲಾ ಜಾತಿಗಳು ಒಂದೇ ಎಂದು ನಾವು ಭಾವಿಸಿದ್ದೇವೆ. ಶಾಲೆಗಳಲ್ಲಿ ಯಾರೂ ಜಾತಿ ಕೇಳುವುದಿಲ್ಲ. ನಮ್ಮೆಲ್ಲರ ರಕ್ತ ಕೆಂಪು. ಬೆವರು ಉಪ್ಪು. ಮಾನವೀಯತೆ ಕಾಂಗ್ರೆಸ್ ಪಕ್ಷದ ಆಧಾರ ಸ್ತಂಭ. ಬಸವಣ್ಣ, ಏಸು ಸೇರಿದಂತೆ ಅನೇಕ ಪೂಜ್ಯರ ಆಶೀರ್ವಾದ ನಮ್ಮ ಸರ್ಕಾರದ ಮೇಲಿದೆವು” ಎಂದರು.
“ಯುವಕರು ಭಾರತ್ ಜೋಡೋ ಸಂಘಗಳನ್ನು ಯುವಕರು ಸದುಪಯೋಗ ಮಾಡಿಕೊಳ್ಳಬೇಕು. ನಾಟಕ, ಕ್ರೀಡೆ ಸೇರಿದಂತೆ ಹಾಗೂ ಇತರೇ ಕಾರ್ಯಗಳನ್ನು ಯುವಕರು ಮಾಡಬೇಕು. ಕ್ರಿಯಾಶೀಲವಾಗಿ ಇದರಲ್ಲಿ ತೊಡಗಿಕೊಳ್ಳಬೇಕು” ಎಂದರು.
- Anna Bhagya Scheme
- Bharat Jodo Yatra
- Congress Party Karnataka
- DK Shivakumar
- Donald Trump Copying Guarantee
- Karnataka Guarantee Schemes
- Karnataka Politics 2028
- KPCC Bengaluru
- NL Narendra Babu
- Siddaramaiah
- ಅನ್ನಭಾಗ್ಯ ಯೋಜನೆ
- ಕರ್ನಾಟಕ ರಾಜಕೀಯ
- ಕರ್ನಾಟಕ ರಾಜಕೀಯ 2028
- ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು
- ಕಾಂಗ್ರೆಸ್ ಬಿಜೆಪಿ
- ಕೆಪಿಸಿಸಿ
- ಡಿ. ಕೆ. ಶಿವಕುಮಾರ್
- ಡೊನಾಲ್ಡ್ ಟ್ರಂಪ್
- ನೆ ಲ ನರೇಂದ್ರಬಾಬು
- ಪಂಚಾಯತಿ ಗ್ಯಾರಂಟಿ ಸಮಿತಿ
- ಪೆನ್ ಡ್ರೈವ್ ಚರ್ಚೆ
- ಭಾರತ್ ಜೋಡೋ ಯಾತ್ರೆ
- ಸಿದ್ದರಾಮಯ್ಯ
- ಹೆಚ್.ಡಿ. ಕುಮಾರಸ್ವಾಮಿ





Leave a comment