Home ನವದೆಹಲಿ ಭಾರತ ದೇಶ ಬಹುತ್ವದ ಆತ್ಮ, ನೂರು ವರ್ಷಗಳಾದರೂ ಆರ್.ಎಸ್.ಎಸ್.ನಂಥ ನಕಲಿ ದೇಶಪ್ರೇಮಿಗಳಿಂದ ನಾಶ ಸಾಧ್ಯವಿಲ್ಲ: ಬಿ. ಕೆ. ಹರಿಪ್ರಸಾದ್!
ನವದೆಹಲಿದಾವಣಗೆರೆಬೆಂಗಳೂರು

ಭಾರತ ದೇಶ ಬಹುತ್ವದ ಆತ್ಮ, ನೂರು ವರ್ಷಗಳಾದರೂ ಆರ್.ಎಸ್.ಎಸ್.ನಂಥ ನಕಲಿ ದೇಶಪ್ರೇಮಿಗಳಿಂದ ನಾಶ ಸಾಧ್ಯವಿಲ್ಲ: ಬಿ. ಕೆ. ಹರಿಪ್ರಸಾದ್!

Share
ಭಾರತ
Share

ಬೆಂಗಳೂರು: ಭಾರತ ದೇಶ ಬಹುತ್ವದ ಆತ್ಮ. ಅದನ್ನು ನಾಶ ಮಾಡಲು ಆರ್.ಎಸ್.ಎಸ್ ಇನ್ನೂ ನೂರು ವರ್ಷಗಳಾದರೂ ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ. ಕೆ. ಹರಿಪ್ರಸಾದ್ ಹೇಳಿದ್ದಾರೆ.

ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ‘RSS ಯಾಗದ ಕುದುರೆ ಕಟ್ಟಿದ ಖಂಬೀರ’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ನಮ್ಮ ಪೂರ್ವಜರು ನಮಗಾಗಿ ಸ್ವತಂತ್ರ ಭಾರತವನ್ನು, ಸಂವಿಧಾನ, ಪ್ರಜಾಪ್ರಭುತ್ವದ ಮೌಲ್ಯವನ್ನು ನಮ್ಮ ಕೈಗೆ ಕೊಟ್ಟಿದ್ದಾರೆ. ಅದನ್ನು ನಾಶಪಡಿಸಲು ಈ ನಕಲಿ ದೇಶಪ್ರೇಮಿಗಳಿಂದ ಸಾಧ್ಯವಿಲ್ಲ ಎಂದು ಕಿಡಿಕಾರಿದರು.

ಈ ದೇಶ ಎರಡು ಕವಲು ದಾರಿಯಲ್ಲಿದೆ. ಒಂದು ಗಾಂಧಿಯ ಸತ್ಯ, ಶಾಂತಿ, ಅಹಿಂಸೆಯ ಸಿದ್ದಾಂತ, ಇನ್ನೊಂದು ಗಾಂಧಿಯನ್ನೇ ಕೊಂದಾ ಗೋಡ್ಸೆಯ ಕೋಮುವಾದಿ ಸಿದ್ದಾಂತ. ಈ ದೇಶಕ್ಕೆ ಆರ್.ಎಸ್ ಎಸ್ ಚಿಂತನೆಗಳು ಅತ್ಯಂತ ಅಪಾಯಕಾರಿಯಾಗಿದೆ. ಆರ್.ಎಸ್.ಎಸ್ ಕುರಿತು ನೂರಾರು ಪುಸ್ತಕಗಳು ಬರುತ್ತಿದೆ. ಆರ್.ಎಸ್.ಎಸ್ ಸಿದ್ದಾಂತವನ್ನು ಪ್ರಶ್ನಿಸುವ, ಚರ್ಚಿಸುವ ಹಾಗೂ ಸತ್ಯವನ್ನು ಅರಿಯುವ ಪ್ರಜ್ಞೆಯನ್ನು ಬೆಳೆಸುವ ಇಂತಹ ಕೃತಿಗಳು ಮತ್ತಷ್ಟು ಹೆಚ್ಚಾಗಲಿ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಚಿಂತಕರಾದ ಬಂಜಗೆರೆ ಜಯಪ್ರಕಾಶ್, ಶಾಸಕರಾದ ಎಂ ವೈ ಪಾಟೀಲ್, ತಿಪ್ಪಣ್ಣಪ್ಪ ಕಮಕನೂರು, ಜಗದೇವ್ ಗುತ್ತೇದಾರ್, ಸಿಪಿಎಂ ರಾಜ್ಯ ಕಾರ್ಯದರ್ಶಿ ಕೆ.ಪ್ರಕಾಶ್, ಕೃತಿಯ ಸಂಪಾದಕರಾದ ರೇಣುಕಾ ಸಿಂಗ್ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles