SUDDIKSHANA KANNADA NEWS/ DAVANAGERE/ DATE:09-11-2024
ಹುಬ್ಬಳ್ಳಿ: ಜೈನ ಧರ್ಮದ ತತ್ವ ಪಾಲನೆ ಮಾಡಿದರೆ ಜಗತ್ತಿನಲ್ಲಿ ಹಿಂಸೆ, ಭಯೋತ್ಪಾದನೆಗೆ ಅವಕಾಶವೇ ಇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅವರು ಇಂದು ಹುಬ್ಬಳ್ಳಿಯಲ್ಲಿರುವ ದಕ್ಷಿಣ ಭಾರತ ಜೈನ ಸಭೆಗೆ ಭೇಟಿ ನೀಡಿ 108 ಪುಣ್ಯ ಸಾಗರ ಮುನಿಮಹಾರಾಜ್ ಅವರ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಶಿಗ್ಗಾವಿ ಕ್ಷೇತ್ರಕ್ಕೆ 2008 ಕ್ಕೆ ಹೊದಾಗಿನಿಂದ ಸ್ವಾಮೀಜಿಯವರ ಆಶೀರ್ವಾದ ಪಡೆದು ಚುನಾವಣೆ ಮಾಡಿದ್ದೇನೆ. ಜೈನ ಸಮುದಾಯದ ಬಗ್ಗೆ ಹೇಳುವಂಥಾದ್ದೇನಿಲ್ಲ. ಬಹಳ ವಿಶಿಷ್ಟ ವ್ಯವಸ್ಥೆ ಹೊಂದಿರುವ ಜೈನ ಸಮುದಾಯದ ತತ್ವಗಳನ್ನು ಪಾಲಿಸಿದರೆ ಈ ಜಗ್ಗತ್ತಿನಲ್ಲಿ ಯುದ್ದ ಇರುವುದಿಲ್ಲ. ಭಯೋತ್ಲಾದನೆ ಇರುವುದಿಲ್ಲ. ದುರ್ದೈವ ಧರ್ಮದ ಹೆಸರಲ್ಲಿ ಭಯೊತ್ಪಾದನೆ ನಡೆಯುತ್ತಿದೆ. ಭಯೋತ್ಪಾದನೆ ಮಾಡಿದರೆ ದೇವರು ಸಿಗುತ್ತಾನೆ ಎಂಬ ನಂಬಿಕೆ ಕೆಲವರಲ್ಲಿ ಇದೆ ಎಂದು ಹೇಳಿದರು.
ಹಿಂಸೆಗೆ ಜೈನ, ಬೌಧ್ದ ಹಿಂದೂ ಧರ್ಮದಲ್ಲಿ ಸ್ಥಾನ ಇಲ್ಲ. ಈ ಧರ್ಮಗಳು ತ್ಯಾಗದಿಂದ ಹುಟ್ಟಿವೆ. ಬೇರೆ ಧರ್ಮಗಳು ಹೀಗೆ ಇಲ್ಲ. ಸಾಗರ ಮುನಿ ಮಹಾರಾಜರು ಬರೆದ ಗ್ರಂಥ ಉತ್ತಮವಾದ ಗ್ರಂಥ, ಅತ್ಯಂತ ಕಠಣವಾದ ಸಮಸ್ಯೆಗಳನ್ನು ಸುಲಭವಾಗಿ ಪರಿಹಾರ ಕಂಡುಕೊಳ್ಳಲು ಪರಿಹಾರ ಇದೆ. ಇವರ ನಮ್ಮ ನಡುವೆ ಗುರು ಶಿಷ್ಯರ ಸಂಬಂಧ ಇದೆ. ಇವರು ಯಾವಾಗಲೂ ಕೂಡ ನನಗೆ ಆಶಿರ್ವಾದ ಮಾಡಿದ್ದಾರೆ. ಶಿಗ್ಗಾವಿ ತಾಲೂಕಿನಲ್ಲಿ ಇರುವ ಜೈನ ಬಸದಿ ಸಮುದಾಯಗಳ ನಿರ್ಮಾಣಕ್ಕೆ 12 ಕೋಟಿ ನೀಡಿದ್ದೇನೆ. ಅರಟಾಳದಲ್ಲಿ ಇನ್ಬು ಮೂರ್ನಾಲ್ಕು ತಿಂಗಳಲ್ಲಿ ಸಭಾಭವನ ಆರಂಭವಾಗಲಿದೆ ಎಂದು ಹೇಳಿದರು.
ಇದೇ ವೇಳೆ, ಶಿಗ್ಗಾವಿಯಲ್ಲಿರುವ ತಮ್ಮ ಸಂಬಂಧಿಕರಿಗೆ ಭರತ್ ಬೊಮ್ಮಾಯಿಗೆ ಮತ ನೀಡುವಂತೆ ಸೂಚಿಸಲು ಮನವಿ ಮಾಡಿದರು.