Home ದಾವಣಗೆರೆ ನೇಪಾಳ ಭೀಕರ ಪ್ರವಾಹದಲ್ಲಿ ದಕ್ಷಿಣ ಭಾರತದ 168 ಮಂದಿ ನಾಪತ್ತೆ: ಕರ್ನಾಟಕದ 5 ಮಂದಿ ಸೇರಿ ಬೇರೆ ರಾಜ್ಯಗಳ ಕೈಲಾಶ್ ಯಾತ್ರಿಕರ ರಕ್ಷಣೆಗೆ ತೀವ್ರ ಶೋಧ!
ದಾವಣಗೆರೆನವದೆಹಲಿಬೆಂಗಳೂರು

ನೇಪಾಳ ಭೀಕರ ಪ್ರವಾಹದಲ್ಲಿ ದಕ್ಷಿಣ ಭಾರತದ 168 ಮಂದಿ ನಾಪತ್ತೆ: ಕರ್ನಾಟಕದ 5 ಮಂದಿ ಸೇರಿ ಬೇರೆ ರಾಜ್ಯಗಳ ಕೈಲಾಶ್ ಯಾತ್ರಿಕರ ರಕ್ಷಣೆಗೆ ತೀವ್ರ ಶೋಧ!

Share
ನೇಪಾಳ
Share

ಕಠ್ಮಂಡು/ಹೊಸದೆಹಲಿ: ನೇಪಾಳದ ರಸುವಾ ಜಿಲ್ಲೆಯಲ್ಲಿ ಸಂಭವಿಸಿದ ದಿಢೀರ್ ಹಿಮಪಾತ ಹಾಗೂ ಭೀಕರ ಪ್ರವಾಹಕ್ಕೆ ಸಿಲುಕಿ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಸುಮಾರು 168ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಅಥವಾ ಸಿಲುಕಿಕೊಂಡಿದ್ದಾರೆ. ಕೈಲಾಶ ಮಾನಸಸರೋವರ ಯಾತ್ರೆಗಾಗಿ ತೆರಳಿದ್ದ ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣದ ಯಾತ್ರಿಕರು ಈ ದುರಂತದಲ್ಲಿ ಸಿಲುಕಿದ್ದಾರೆ.

ಇಲ್ಲಿಯವರೆಗೆ ಈ ಪ್ರವಾಹಕ್ಕೆ ಸುಮಾರು 175 ಜನರು ಬಲಿಯಾಗಿದ್ದು, 1,500ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ತಮಿಳುನಾಡು (103 ಯಾತ್ರಿಕರು): ತಮಿಳುನಾಡಿನಿಂದ ವಿವಿಧ ಪ್ರವಾಸಿ ಸಂಸ್ಥೆಗಳ ಮೂಲಕ ತೆರಳಿದ್ದ 103 ಜನರು ಪ್ರವಾಹ ಪೀಡಿತ ರಸುವಾ ನದಿ ಪ್ರದೇಶದಲ್ಲಿ ಸಿಲುಕಿಕೊಂಡಿದ್ದಾರೆ.

ಕೇರಳ (53 ಜನರು): ಕೇರಳದ ನೋರ್ಕಾ (NORKA) ಸಂಸ್ಥೆಯ ಮಾಹಿತಿ ಪ್ರಕಾರ, 53 ಮಂದಿ ಕನ್ನಡಿಗರು/ಕೇರಳಿಗಳು ಸಂಪರ್ಕಕ್ಕೆ ಸಿಗದೆ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಸಿಲುಕಿದ್ದಾರೆ.

ಕರ್ನಾಟಕ (5 ಕನ್ನಡಿಗರು): ಬೆಂಗಳೂರಿನ ಐದು ಮಂದಿ ಕನ್ನಡಿಗರು ಪ್ರವಾಹದ ಬಳಿಕ ನಾಪತ್ತೆಯಾಗಿದ್ದಾರೆ ಎಂದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಿಳಿಸಿದ್ದು, ರಕ್ಷಣಾ ಕಾರ್ಯಾಚರಣೆಗೆ ರಾಜ್ಯ ಸರ್ಕಾರ ಅಗತ್ಯ ಕ್ರಮ ವಹಿಸಿದೆ.

ಆಂಧ್ರಪ್ರದೇಶ & ತೆಲಂಗಾಣ: ಆಂಧ್ರಪ್ರದೇಶದ 7 ಜನರಲ್ಲಿ 4 ಜನರು ಸುರಕ್ಷಿತವಾಗಿದ್ದು, 3 ಜನರು ನಾಪತ್ತೆಯಾಗಿದ್ದಾರೆ. ತೆಲಂಗಾಣದ 70-80 ಕುಟುಂಬಗಳು ತಮ್ಮ ಸಂಬಂಧಿಕರ ಕುರಿತು ನೆರವು ಕೋರಿ ಕರೆ ಮಾಡಿದ್ದು, ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದಾರೆ.

ದಕ್ಷಿಣ ಭಾರತದ ರಾಜ್ಯ ಸರ್ಕಾರಗಳು ಕೇಂದ್ರ ವಿದೇಶಾಂಗ ಸಚಿವಾಲಯ ಹಾಗೂ ಕಠ್ಮಂಡುವಿನಲ್ಲಿರುವ ಭಾರತೀಯ ರಾಯಭಾರ ಕಚೇರಿಯೊಂದಿಗೆ ಸಂಪರ್ಕದಲ್ಲಿದ್ದು, ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.

Share

Leave a comment

Leave a Reply

Your email address will not be published. Required fields are marked *

Related Articles