ಬೆಂಗಳೂರು/ನವದೆಹಲಿ: ಭಾರತ ಸರ್ಕಾರದ ಸಂಪರ್ಕ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ಅಂಚೆ ಇಲಾಖೆಯು (India Post) ಗ್ರಾಮೀಣ ಡಾಕ್ ಸೇವಕ್ (GDS) ಶೆಡ್ಯೂಲ್-II (ಜುಲೈ-2026) ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ಈ ನೇಮಕಾತಿ ಅಭಿಯಾನದ ಮೂಲಕ ಬ್ರಾಂಚ್ ಪೋಸ್ಟ್ ಮಾಸ್ಟರ್ (BPM), ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ABPM) ಹಾಗೂ ಡಾಕ್ ಸೇವಕ್ ವಿಭಾಗದಲ್ಲಿ ಅಂದಾಜು 25,000ಕ್ಕೂ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಲು ಉದ್ದೇಶಿಸಲಾಗಿದೆ.
ಹುದ್ದೆಗಳ ವಿವರ ಮತ್ತು ವೇತನ:
ಬ್ರಾಂಚ್ ಪೋಸ್ಟ್ ಮಾಸ್ಟರ್ (BPM): ₹12,000 ದಿಂದ ₹29,380 (TRCA)
ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ABPM) / ಡಾಕ್ ಸೇವಕ್: ₹10,000 ದಿಂದ ₹24,470 (TRCA)
ಶೈಕ್ಷಣಿಕ ಅರ್ಹತೆ:
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ (SSLC/Secondary School Certificate) ಪಾಸಾಗಿರಬೇಕು. ಗಣಿತ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ತೇರ್ಗಡೆಯಾಗಿರುವುದು ಕಡ್ಡಾಯ. ಇದರೊಂದಿಗೆ ಅಭ್ಯರ್ಥಿಯು ಸಂಬಂಧಪಟ್ಟ ವೃತ್ತದ (Circle) ಸ್ಥಳೀಯ ಭಾಷೆಯನ್ನು 10ನೇ ತರಗತಿಯವರೆಗೆ ಅಭ್ಯಾಸ ಮಾಡಿರಬೇಕು. ಕಂಪ್ಯೂಟರ್ ಜ್ಞಾನ ಹಾಗೂ ಸೈಕಲ್ ಚಾಲನೆ ತಿಳದಿರುವುದು ಅಗತ್ಯ.
ವಯೋಮಿತಿ:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕಕ್ಕೆ ಸರಿಯಾಗಿ ಅಭ್ಯರ್ಥಿಗೆ ಕನಿಷ್ಠ 18 ವರ್ಷ ತುಂಬಿರಬೇಕು ಮತ್ತು ಗರಿಷ್ಠ 40 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ: SC/ST ಅಭ್ಯರ್ಥಿಗಳಿಗೆ 5 ವರ್ಷ, OBC ಅಭ್ಯರ್ಥಿಗಳಿಗೆ 3 ವರ್ಷ ಹಾಗೂ PwBD ಅಭ್ಯರ್ಥಿಗಳಿಗೆ 10 ರಿಂದ 15 ವರ್ಷಗಳ ವಯೋಮಿತಿ ಸಡಿಲಿಕೆ ಇರುತ್ತದೆ.
ಆಯ್ಕೆ ಪ್ರಕ್ರಿಯೆ:
ಈ ಹುದ್ದೆಗಳಿಗೆ ಯಾವುದೇ ರೀತಿಯ ಲಿಖಿತ ಪರೀಕ್ಷೆ ಅಥವಾ ಸಂದರ್ಶನ ಇರುವುದಿಲ್ಲ. ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಪಡೆದ ಅಂಕಗಳ (Merit Base) ಆಧಾರದ ಮೇಲೆ ಮೆರಿಟ್ ಪಟ್ಟಿಯನ್ನು ಸಿದ್ಧಪಡಿಸಿ ನೇರ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ, OBC ಹಾಗೂ EWS ವರ್ಗದ ಪುರುಷ ಅಭ್ಯರ್ಥಿಗಳಿಗೆ: ₹100
ಮಹಿಳಾ ಅಭ್ಯರ್ಥಿಗಳು, SC/ST, PwBD ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಪ್ರಮುಖ ದಿನಾಂಕಗಳು:
ಏಕಕಾಲಿಕ ನೋಂದಣಿ (OTR) ಪ್ರಾರಂಭ: 31 ಆಗಸ್ಟ್ 2026
ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭ: 02 ಸೆಪ್ಟೆಂಬರ್ 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 21 ಸೆಪ್ಟೆಂಬರ್ 2026 (ಸಂಜೆ 5:00 ಗಂಟೆಯವರೆಗೆ)
ಅರ್ಜಿ ತಿದ್ದುಪಡಿ (Correction Window): 23 ಸೆಪ್ಟೆಂಬರ್ ನಿಂದ 24 ಸೆಪ್ಟೆಂಬರ್ 2026
ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ಸೈಟ್ indiapost.gov.in ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
- 10th Pass Govt Jobs 2026
- 10ನೇ ತರಗತಿ ಉದ್ಯೋಗಗಳು
- Apply Online India Post GDS
- BPM ABPM Dak Sevak Vacancy
- India Post GDS Recruitment 2026
- India Post Merit List 2026
- India Post Schedule 2 Notification
- indiapost.gov.in GDS Application
- Post Office Vacancy 2026
- ಅಂಚೆ ಇಲಾಖೆ ನೇಮಕಾತಿ 2026
- ಎಸ್ಎಸ್ಎಲ್ಸಿ ಉದ್ಯೋಗ ಮಾಹಿತಿ
- ಕರ್ನಾಟಕ ಅಂಚೆ ನೇಮಕಾತಿ
- ಡಾಕ್ ಸೇವಕ್ ಅರ್ಜಿ
- ಪರೀಕ್ಷೆ ಇಲ್ಲದ ಸರ್ಕಾರಿ ಕೆಲಸ
- ಬಿಪಿಎಂ ಹುದ್ದೆಗಳು
- ಭಾರತೀಯ ಅಂಚೆ ಜಿಡಿಎಸ್ ನೇಮಕಾತಿ





Leave a comment