Home ಕ್ರೈಂ ನ್ಯೂಸ್ ಕಚೇರಿಯ ಮಾಜಿ ಪ್ರಿಯಕರನಿಂದ 18 ವರ್ಷದ ಯುವತಿ ಕೊಲೆ ನಂತರ ಶವದಹನ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಕಚೇರಿಯ ಮಾಜಿ ಪ್ರಿಯಕರನಿಂದ 18 ವರ್ಷದ ಯುವತಿ ಕೊಲೆ ನಂತರ ಶವದಹನ!

Share
ಪ್ರಿಯಕರ
Share

ಇಡುಕ್ಕಿ: ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ 2023ರಿಂದ ಪ್ರೇಮದಲ್ಲಿದ್ದ 18 ವರ್ಷದ ಯುವತಿಯೊಬ್ಬಳನ್ನು ಮಾಜಿ ಪ್ರಿಯಕರನೇ ಅತ್ಯಂತ ಕ್ರೂರವಾಗಿ ಕತ್ತು ಹಿಸುಕಿ, ಕಲ್ಲಿನಿಂದ ಜಜ್ಜಿ ಕೊಲೆ ಮಾಡಿ, ನಂತರ ಶವಕ್ಕೆ ಬೆಂಕಿ ಹಚ್ಚಿ ವಿಕೃತಿ ಮೆರೆದಿರುವ ಘಟನೆ ಬೆಳಕಿಗೆ ಬಂದಿದೆ.

ತಮಿಳುನಾಡಿನ ಬೋಡಿನಾಯಕನೂರಿನ ಪರಮಶಿವನ್ ಕೋಯಿಲ್ ಬೀದಿಯ ನಿವಾಸಿ ನಿತ್ಯಾ (18) ಕೊಲೆಯಾದ ದುರ್ದೈವಿ. ರಾಜಾಕುಮಾರಿಯ ವಟ್ಟಪ್ಪಾರ ಬಿ ಡಿವಿಷನ್ ನಿವಾಸಿ 19 ವರ್ಷದ ನಿಶಾಂತ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಪರಸ್ಪರ ಒಪ್ಪಿಗೆಯಿಂದ 2023ರಿಂದ ಜೊತೆಯಾಗಿದ್ದ ಇಬ್ಬರ ನಡುವೆ ನಂತರ ಭಿನ್ನಾಭಿಪ್ರಾಯ ಉಂಟಾಗಿ ಬ್ರೇಕ್ಅಪ್ ಆಗಿತ್ತು. ಈ ವಿಚಾರವಾಗಿ ಮಾತನಾಡುವ ನೆಪದಲ್ಲಿ ನಿಶಾಂತ್ ಯುವತಿಯನ್ನು ಪೂಪಾರಕ್ಕೆ ಕರೆಸಿಕೊಂಡಿದ್ದನು. ಅಕ್ಟೋಬರ್ 11 ರಂದು ಮಧ್ಯಾಹ್ನ 2:30 ರ ಸುಮಾರಿಗೆ ಪೂಪಾರದ ಚಹಾ ತೋಟದಲ್ಲಿ ಇಬ್ಬರೂ ಭೇಟಿಯಾದಾಗ ಮಾತುಕತೆ ವಿಕೋಪಕ್ಕೆ ತಿರುಗಿ ಗಲಾಟೆಯಾಗಿದೆ. ಈ ವೇಳೆ ಆಕ್ರೋಶಗೊಂಡ ನಿಶಾಂತ್ ನಿತ್ಯಾಳನ್ನು ಕತ್ತು ಹಿಸುಕಿ, ತಲೆಗೆ ಕಲ್ಲಿನಿಂದ ಸತತವಾಗಿ ಹೊಡೆದು ಸ್ಥಳದಲ್ಲೇ ಹತ್ಯೆಗೈದಿದ್ದಾನೆ. ನಂತರ ರಾತ್ರಿ 10 ಗಂಟೆಯ ಬಳಿಕ ಆಟೋರಿಕ್ಷಾದಲ್ಲಿ ಮೃತದೇಹವನ್ನು ಪಂಬ್ಲಾ ಅಣೆಕಟ್ಟು ಪ್ರದೇಶಕ್ಕೆ ಸಾಗಿಸಿ, ಪೆಟ್ರೋಲ್ ಸುಟ್ಟು ಸಾಕ್ಷ್ಯ ನಾಶಪಡಿಸಲು ಯತ್ನಿಸಿದ್ದಾನೆ.

ಆರೋಪಿ ಬಂಧನ: ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದ ನಿಶಾಂತ್‌ನನ್ನು ರಾಜಾಕುಮಾರಿ ಪ್ರದೇಶದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸಾಕ್ಷ್ಯ ನಾಶ ಯತ್ನ: ಕೊಲೆ ಮಾಡಿದ ಬಳಿಕ ಶವವನ್ನು ಆಟೋದಲ್ಲಿ ಒಯ್ದು ಪೆಟ್ರೋಲ್ ಹಾಕಿ ದಹನ ಮಾಡಲಾಗಿದೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಹೆಚ್ಚಿನ ತನಿಖೆ ಮುಂದುವರೆಸಿದ್ದಾರೆ ಹಾಗೂ ಹತ್ಯೆಗೆ ನಿಜವಾದ ಕಾರಣಗಳನ್ನು ಪತ್ತೆ ಹಚ್ಚುತ್ತಿದ್ದಾರೆ.

Share

Leave a comment

Leave a Reply

Your email address will not be published. Required fields are marked *