Home ಉದ್ಯೋಗ ವಾರ್ತೆ KPSC ನೇಮಕಾತಿ 2026: 68 ಅಸಿಸ್ಟೆಂಟ್ ಕಂಟ್ರೋಲರ್ ಮತ್ತು ಆಡಿಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಪೂರ್ಣ ವಿವರ ಇಲ್ಲಿದೆ
ಉದ್ಯೋಗ ವಾರ್ತೆದಾವಣಗೆರೆಬೆಂಗಳೂರು

KPSC ನೇಮಕಾತಿ 2026: 68 ಅಸಿಸ್ಟೆಂಟ್ ಕಂಟ್ರೋಲರ್ ಮತ್ತು ಆಡಿಟ್ ಆಫೀಸರ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಪೂರ್ಣ ವಿವರ ಇಲ್ಲಿದೆ

Share
KPSC
Share

ಬೆಂಗಳೂರು: ಕರ್ನಾಟಕ ಸಾರ್ವಜನಿಕ ಸೇವಾ ಆಯೋಗವು (KPSC) ರಾಜ್ಯದ ಲೆಕ್ಕಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 68 ಮಿಷಪಟ್ಟು (RPC) ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆಯನ್ನು ಹೊರಡಿಸಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು KPSC ಯ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವರ:

ಅಸಿಸ್ಟೆಂಟ್ ಕಂಟ್ರೋಲರ್ (Group A): 15 ಹುದ್ದೆಗಳು

ಆಡಿಟ್ ಆಫೀಸರ್ (Group B): 53 ಹುದ್ದೆಗಳು

ಒಟ್ಟು ಖಾಲಿ ಹುದ್ದೆಗಳು: 68

ಶೈಕ್ಷಣಿಕ ಅರ್ಹತೆ:

ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ M.Com, MBA (ಫೈನಾನ್ಸ್ / ಫೈನಾನ್ಷಿಯಲ್ ಮ್ಯಾನೇಜ್‌ಮೆಂಟ್), ಅಥವಾ ಫೈನಾನ್ಸ್ ವಿಷಯದೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು. ಅಥವಾ ICAI / ICMAI ಸಂಸ್ಥೆಯ ಸದಸ್ಯತ್ವ ಹೊಂದಿರುವ ಅಭ್ಯರ್ಥಿಗಳೂ ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ವಯೋಮಿತಿ ಮತ್ತು ಸಡಿಲಿಕೆ:

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಹಾಗೂ ಗರಿಷ್ಠ 40 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ (ಒಂದು ಬಾರಿಯ 5 ವರ್ಷಗಳ ವಯೋಮಿತಿ ಸಡಿಲಿಕೆ ಸೇರಿ).

ಪ್ರವರ್ಗ 2A, 2B, 3A, 3B: ಗರಿಷ್ಠ 43 ವರ್ಷಗಳು

SC/ST/ಪ್ರವರ್ಗ-1: ಗರಿಷ್ಠ 45 ವರ್ಷಗಳು

ವೇತನ ಶ್ರೇಣಿ:

ಅಸಿಸ್ಟೆಂಟ್ ಕಂಟ್ರೋಲರ್: ₹83,700 – ₹1,55,200

ಆಡಿಟ್ ಆಫೀಸರ್: ₹69,250 – ₹1,34,200

ಆಯ್ಕೆ ಪ್ರಕ್ರಿಯೆ:

ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

ಪೂರ್ವಭಾವಿ ಪರೀಕ್ಷೆ (Preliminary Exam): ವಸ್ತುನಿಷ್ಠ ಮಾದರಿ (Objective Type)

ಮುಖ್ಯ ಪರೀಕ್ಷೆ (Main Exam): ವಿವರಣಾತ್ಮಕ ಬರಹ ಮಾದರಿ (Descriptive Type)

(ಗಮನಿಸಿ: ಈ ಹುದ್ದೆಗಳಿಗೆ ಯಾವುದೇ ಸಂದರ್ಶನ ಪ್ರಕ್ರಿಯೆ ಇರುವುದಿಲ್ಲ).

ಪ್ರಮುಖ ದಿನಾಂಕಗಳು:

ಆನ್‌ಲೈನ್ ಅರ್ಜಿ ಸಲ್ಲಿಕೆ ಆರಂಭ: 28 ಆಗಸ್ಟ್ 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 26 ಸೆಪ್ಟೆಂಬರ್ 2026

ಪೂರ್ವಭಾವಿ ಪರೀಕ್ಷೆಯ ಸಂಭಾವ್ಯ ದಿನಾಂಕ: 06 ಡಿಸೆಂಬರ್ 2026

ಅರ್ಜಿ ಸಲ್ಲಿಸುವ ವಿಧಾನ:

ಆಸಕ್ತ ಅಭ್ಯರ್ಥಿಗಳು KPSC ಯ ಅಧಿಕೃತ ವೆಬ್‌ಸೈಟ್ kpsconline.karnataka.gov.in ಗೆ ಭೇಟಿ ನೀಡಿ ಒನ್‌ ಟೈಮ್ ರಿಜಿಸ್ಟ್ರೇಷನ್ (OTR) ಪೂರ್ಣಗೊಳಿಸಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

Share

Leave a comment

Leave a Reply

Your email address will not be published. Required fields are marked *