Home ಕ್ರೈಂ ನ್ಯೂಸ್ ಬ್ರೇಕ್ ಬದಲಿಗೆ ಆಕ್ಸಿಲರೇಟರ್ ಒತ್ತಿ ಅನಾಹುತ: ಡ್ರೈವಿಂಗ್ ಲೈಸೆನ್ಸ್ ಟೆಸ್ಟ್‌ಗೂ ಮುನ್ನವೇ ಪ್ರಾಣ ಕಳೆದುಕೊಂಡ ಮಹಿಳೆ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಬ್ರೇಕ್ ಬದಲಿಗೆ ಆಕ್ಸಿಲರೇಟರ್ ಒತ್ತಿ ಅನಾಹುತ: ಡ್ರೈವಿಂಗ್ ಲೈಸೆನ್ಸ್ ಟೆಸ್ಟ್‌ಗೂ ಮುನ್ನವೇ ಪ್ರಾಣ ಕಳೆದುಕೊಂಡ ಮಹಿಳೆ!

Share
ಮಹಿಳೆ
Share

ಕೋಲ್ಕತ್ತಾ: ಚಾಲನಾ ಪರವಾನಗಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 42 ವರ್ಷದ ಮಹಿಳೆಯೊಬ್ಬರು ಕಾರು ಚಾಲನೆ ಅಭ್ಯಾಸ ಮಾಡುವ ವೇಳೆ ಆಕಸ್ಮಿಕವಾಗಿ ನಿಯಂತ್ರಣ ತಪ್ಪಿ ಕಾರು ಕೊಳಕ್ಕೆ ಬಿದ್ದು ದುರಂತವಾಗಿ ಸಾವನ್ನಪ್ಪಿರುವ ಘಟನೆ ಕೋಲ್ಕತ್ತಾದ ಕೆಸ್ಟೋಪುರದ ಪ್ರಫುಲ್ಲ ಕಾನನ್ ಪ್ರದೇಶದಲ್ಲಿ ನಡೆದಿದೆ.

ಮೃತ ಮಹಿಳೆಯನ್ನು ಸುಮಿತ್ರಾ ದಾಸ್ (42) ಎಂದು ಗುರುತಿಸಲಾಗಿದೆ. ಬುಧವಾರ ಬೆಳಿಗ್ಗೆ ತಮ್ಮ ಮಗಳನ್ನು ಸ್ಕೂಟರ್‌ನಲ್ಲಿ ಶಾಲೆಗೆ ಬಿಟ್ಟು ಮನೆಗೆ ಹಿಂತಿರುಗಿದ್ದ ಸುಮಿತ್ರಾ, ಬಳಿಕ ಹ್ಯುಂಡೈ ಇಯಾನ್  ಕಾರನ್ನು ಗ್ಯಾರೇಜ್‌ನಿಂದ ಹೊರತೆಗೆದು ಚಾಲನೆ ಅಭ್ಯಾಸ ಮಾಡಲು ತೊಡಗಿದ್ದರು. ಈ ವೇಳೆ ಬ್ರೇಕ್ ತುಳಿಯುವ ಬದಲಿಗೆ ಆಕಸ್ಮಿಕವಾಗಿ ಆಕ್ಸಿಲರೇಟರ್ ಪ್ರೆಸ್ ಮಾಡಿದ ಪರಿಣಾಮ ಕಾರು ವೇಗವಾಗಿ ತೆರಳಿ ಸಮೀಪದ ಕೊಳದ ಮಧ್ಯಭಾಗಕ್ಕೆ ಬಿದ್ದಿದೆ.

ಕಾರು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ್ದರಿಂದ ಅವರನ್ನು ರಕ್ಷಿಸಲು ಸ್ಥಳೀಯರು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಶ್ರಮಿಸಿದ ಅಗ್ನಿಶಾಮಕ ದಳ ಮತ್ತು ಪೊಲೀಸರು ಕಾರನ್ನು ನೀರಿನಿಂದ ಹೊರತೆಗೆದರು. ಕಾರಿನ ಹಿಂಭಾಗದ ಹ್ಯಾಚ್ ಕಡೆಗೆ ಮುಖ ಮಾಡಿ, ಸ್ಟೀರಿಂಗ್ ಬಳಿ ಕಾಲುಗಳಿದ್ದ ಸ್ಥಿತಿಯಲ್ಲಿ ಸುಮಿತ್ರಾ ಅವರ ಮೃತದೇಹ ಪತ್ತೆಯಾಗಿದೆ. ಕಾರು ಮುಳುಗುತ್ತಿದ್ದಾಗ ಅವರು ಪಾರಾಗಲು ತೀವ್ರ ಯತ್ನ ನಡೆಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಆಗಸ್ಟ್ 22 ರಂದು ಸುಮಿತ್ರಾ ಅವರಿಗೆ ಡ್ರೈವಿಂಗ್ ಟೆಸ್ಟ್ ನಿಗದಿಯಾಗಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *