Home ದಾವಣಗೆರೆ ಮುಂಗಾರು ಅಧಿವೇಶನದಲ್ಲಿ ಸತತ ಗದ್ದಲದಲ್ಲೇ ಚರ್ಚೆಯಿಲ್ಲದೇ 20 ಮಸೂದೆಗಳಿಗೆ ಅಂಕಿತ: 7,000ಕ್ಕೂ ಹೆಚ್ಚು ನಿಮಿಷ ಪೋಲು, 175 ಕೋಟಿ ರೂ. ನಷ್ಟ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಮುಂಗಾರು ಅಧಿವೇಶನದಲ್ಲಿ ಸತತ ಗದ್ದಲದಲ್ಲೇ ಚರ್ಚೆಯಿಲ್ಲದೇ 20 ಮಸೂದೆಗಳಿಗೆ ಅಂಕಿತ: 7,000ಕ್ಕೂ ಹೆಚ್ಚು ನಿಮಿಷ ಪೋಲು, 175 ಕೋಟಿ ರೂ. ನಷ್ಟ!

Share
ಮುಂಗಾರು ಅಧಿವೇಶನ
Share

ನವದೆಹಲಿ: ನಿಕಟಪೂರ್ವ ಸಂಸತ್ತಿನ ಮುಂಗಾರು ಅಧಿವೇಶನವು ನಿರಂತರ ಗದ್ದಲ ಮತ್ತು ಪ್ರತಿಭಟನೆಗಳಿಗೆ ಆಹುತಿಯಾಗಿದ್ದು, ಸಾರ್ವಜನಿಕರ ಕೋಟ್ಯಂತರ ರೂಪಾಯಿ ತೆರಿಗೆ ಹಣ ಪೋಲಾಗಿದೆ. ಲಭ್ಯವಿರುವ ಅಧಿಕೃತ ಅಂಕಿಅಂಶಗಳ ಪ್ರಕಾರ, ಈ ಬಾರಿಯ ಅಧಿವೇಶನದಲ್ಲಿ ಒಟ್ಟು 7,023 ನಿಮಿಷಗಳ ಅಮೂಲ್ಯ ಸಮಯ ವೃಥಾ ಹಾಳಾಗಿದೆ.

ಲೋಕಸಭೆಯ ಕಲಾಪ ನಡೆಸಲು ಪ್ರತಿ ನಿಮಿಷಕ್ಕೆ ಸುಮಾರು 2.5 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಈ ಲೆಕ್ಕಾಚಾರದಂತೆ, ಇದುವರೆಗೆ ಕಲಾಪ ತಡೆ ಹಾಗೂ ಗದ್ದಲದಿಂದಾಗಿ ಸುಮಾರು 175 ಕೋಟಿ ರೂಪಾಯಿ ನಷ್ಟ ಸಂಭವಿಸಿದೆ.

ಚರ್ಚೆಯಿಲ್ಲದೇ 20 ಮಸೂದೆಗಳು ಪಾಸ್:

ಅಧಿವೇಶನದಲ್ಲಿ ನಿರಂತರ ಪ್ರತಿಪಕ್ಷಗಳ ಗದ್ದಲ ಹಾಗೂ ಕಲಾಪ ಬಹಿಷ್ಕಾರದ ನಡುವೆಯೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ 20 ಪ್ರಮುಖ ಮಸೂದೆಗಳನ್ನು ಅಂಗೀಕರಿಸಲಾಯಿತು. ಆದರೆ, ಸೂಕ್ತ ಚರ್ಚೆ ಅಥವಾ ಸಂವಾದಗಳಿಲ್ಲದೇ ಗದ್ದಲದ ವಾತಾವರಣದಲ್ಲೇ ಈ ಮಸೂದೆಗಳಿಗೆ ಅಂಕಿತ ಹಾಕಲಾಯ್ತು.

ಇದೇ ಮೊದಲಲ್ಲ – ಇತಿಹಾಸದಲ್ಲೂ ನಡೆದಿದೆ ಕಲಾಪದ ‘ವಾಶ್‌ಔಟ್’:

ಸಂಸತ್ತಿನ ಇಡೀ ಅಧಿವೇಶನ ಗದ್ದಲಕ್ಕೆ ಬಲಿಯಾಗಿರುವುದು ಇದೇ ಮೊದಲೇನಲ್ಲ. 1980ರ ದಶಕದ ಬೋಫೋರ್ಸ್ ಹಗರಣದಿಂದ ಹಿಡಿದು ಇತ್ತೀಚಿನ ವರ್ಷಗಳವರೆಗೆ ಹಲವು ವಿಷಯಗಳು ಸಂಸತ್ತಿನ ಕಲಾಪವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿವೆ.

2010ರ ಚಳಿಗಾಲದ ಅಧಿವೇಶನ: 2G ಸ್ಪೆಕ್ಟ್ರಮ್ ಹಗರಣದ ತನಿಖೆಗೆ ಜಂಟಿ ಸಂಸದೀಯ ಸಮಿತಿ (JPC) ರಚನೆಗೆ ಆಗ್ರಹಿಸಿ ಇಡೀ ಅಧಿವೇಶನ ರದ್ದಾಗಿತ್ತು.

2012ರ ಮುಂಗಾರು ಅಧಿವೇಶನ: ಕಾಮನ್‌ವೆಲ್ತ್ ಗೇಮ್ಸ್ ಅಕ್ರಮ ಹಾಗೂ ಲೋಕಪಾಲ್ ಮಸೂದೆ ವಿವಾದದಿಂದಾಗಿ ಲೋಕಸಭೆಯು ನಿಗದಿತ 60 ಗಂಟೆಗಳಲ್ಲಿ ಕೇವಲ 23 ಗಂಟೆ ಮಾತ್ರ ಕಾರ್ಯನಿರ್ವಹಿಸಿತು.

2015ರ ಮುಂಗಾರು ಅಧಿವೇಶನ: ವ್ಯಾಪಂ ಹಗರಣ ಮತ್ತು ಲಲಿತ್ ಮೋದಿ ಪ್ರಕರಣದ ಪ್ರತಿಭಟನೆಯಿಂದಾಗಿ ಕೇವಲ 46% ಕೆಲಸ ಮಾತ್ರ ಪೂರ್ಣಗೊಂಡಿತ್ತು.

2016ರ ಚಳಿಗಾಲದ ಅಧಿವೇಶನ: ನೋಟು ರದ್ದತಿ (ಡಿಮಾನಿಟೈಸೇಶನ್) ವಿರೋಧಿ ಪ್ರತಿಭಟನೆಯಿಂದಾಗಿ ಲೋಕಸಭೆಯ ಸುಮಾರು 92 ಗಂಟೆಗಳ ಸಮಯ ಪೋಲಾಗಿತ್ತು.

2018ರ ಮುಂಗಾರು ಅಧಿವೇಶನ: ರಫೇಲ್ ಯುದ್ಧ ವಿಮಾನ ಒಪ್ಪಂದದ ಅಕ್ರಮ ಆರೋಪ ಹಾಗೂ ಅವಿಶ್ವಾಸ ನಿರ್ಣಯದ ಗದ್ದಲದಿಂದ ನಿಗದಿತ ಕೆಲಸದಲ್ಲಿ ಕೇವಲ 15% ಮಾತ್ರ ಪೂರ್ಣಗೊಂಡಿತ್ತು.

2023ರ ಮುಂಗಾರು ಅಧಿವೇಶನ: ಮಣಿಪುರ ಹಿಂಸಾಚಾರದ ಕುರಿತು ಚರ್ಚೆಗೆ ಪಟ್ಟು ಹಿಡಿದಿದ್ದರಿಂದ ಅಧಿವೇಶನ ತೀವ್ರ ಗದ್ದಲಕ್ಕೆ ಸಾಕ್ಷಿಯಾಗಿತ್ತು.

Share

Leave a comment

Leave a Reply

Your email address will not be published. Required fields are marked *