Home ದಾವಣಗೆರೆ 3 ಲಕ್ಷ RTC ಗಳಲ್ಲಿ ವಕ್ಫ್ ನಮೂದು ಗುರಿ? ಕಾಂಗ್ರೆಸ್ ಸರ್ಕಾರದ ವಿರುದ್ಧ ‘ಲ್ಯಾಂಡ್ ಜಿಹಾದ್’ ಆರೋಪ ಹೊರಿಸಿದ ಬಿಜೆಪಿ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

3 ಲಕ್ಷ RTC ಗಳಲ್ಲಿ ವಕ್ಫ್ ನಮೂದು ಗುರಿ? ಕಾಂಗ್ರೆಸ್ ಸರ್ಕಾರದ ವಿರುದ್ಧ ‘ಲ್ಯಾಂಡ್ ಜಿಹಾದ್’ ಆರೋಪ ಹೊರಿಸಿದ ಬಿಜೆಪಿ!

Share
ಸರ್ಕಾರ
Share

ಬೆಂಗಳೂರು: ರಾಜ್ಯದಲ್ಲಿ ಮತ್ತೆ ವಕ್ಫ್ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರವು ಕೇವಲ ತನ್ನ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಸಣ್ಣ ಮತ್ತು ಅತಿ ಸಣ್ಣ ರೈತರ ಭೂಮಿಯನ್ನು ವಕ್ಫ್ ಹೆಸರಿನಲ್ಲಿ ಕಸಿದುಕೊಳ್ಳಲು ವ್ಯವಸ್ಥಿತ ಸಂಚು ರೂಪಿಸುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಮಾಧ್ಯಮಗಳಲ್ಲಿ ವರದಿಯಾಗಿರುವ ಅಂಕಿ-ಅಂಶಗಳನ್ನು ಉಲ್ಲೇಖಿಸಿರುವ ಅವರು, ರಾಜ್ಯದಲ್ಲಿ ಸುಮಾರು 3 ಲಕ್ಷ ಪಹಣಿಗಳಲ್ಲಿ (RTC) ವಕ್ಫ್ ವಿವಾದದ ಹೊಸ ನಮೂದುಗಳನ್ನು ಮಾಡಲು ಅಪಾಯಕಾರಿ ಗುರಿ ಹೊಂದಲಾಗಿದೆ. ಈಗಾಗಲೇ 1,80,000 ಆರ್‌.ಟಿ.ಸಿಗಳ ಕಾಲಂ 11ರಲ್ಲಿ ವಕ್ಫ್ ಒಡೆತನವನ್ನು ನಮೂದಿಸಲಾಗಿದೆ ಎಂದು ಆಪಾದಿಸಿದ್ದಾರೆ. ಇದರಿಂದಾಗಿ ತಲೆತಲಾಂತರಗಳಿಂದ ಭೂಮಿಯನ್ನು ನಂಬಿ ಬದುಕುತ್ತಿರುವ ಅನ್ನದಾತರು ಬ್ಯಾಂಕ್ ಸಾಲ ಸಿಗದೆ, ಜಮೀನು ಮಾರಾಟ ಮಾಡಲಾಗದೆ ಕೋರ್ಟ್ ಮೆಟ್ಟಿಲೇರುವಂತಾಗಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ರೈತರ ಒಪ್ಪಿಗೆಯಿಲ್ಲದೆ ಅವರ ಭೂಮಿಗೆ ಕೈ ಹಾಕುವ ಸರ್ಕಾರದ ಈ ‘ಲ್ಯಾಂಡ್ ಜಿಹಾದ್’ ಧೋರಣೆಯನ್ನು ಪಕ್ಷವು ತೀವ್ರವಾಗಿ ವಿರೋಧಿಸುತ್ತದೆ. ಸರ್ಕಾರ ತಕ್ಷಣವೇ ಈ ಗೊಂದಲಗಳಿಗೆ ಇತಿಶ್ರೀ ಹಾಡಿ, ರೈತರ ಹಿತ ಕಾಯದಿದ್ದರೆ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗಲಿದೆ ಎಂದು ವಿಜಯೇಂದ್ರ ಎಚ್ಚರಿಕೆ ನೀಡಿದ್ದಾರೆ

Share

Leave a comment

Leave a Reply

Your email address will not be published. Required fields are marked *