ತುಮಕೂರು: ಪ್ರೀತಿ ನಿರಾಕರಿಸಿದ ಹಳೇ ಪ್ರೇಯಸಿಯೊಂದಿಗೆ ತಾನೂ ಸಾಯಬೇಕೆಂದು ಚಲಿಸುವ ಕಾರಿನಲ್ಲೇ ಬಾಂಬ್ ಸ್ಫೋಟಿಸಿದ ಭೀಕರ ಘಟನೆ ತುಮಕೂರು ಜಿಲ್ಲೆಯ ಸಿರಾ ತಾಲೂಕಿನ ಜೋಗಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಶನಿವಾರ ನಡೆದಿದೆ. ಯುವತಿ ಸಮಯಪ್ರಜ್ಞೆಯಿಂದ ಕಾರಿನಿಂದ ಹೊರ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದು, ಕಿಡ್ನ್ಯಾಪ್ ಮಾಡಿದ್ದ ಮಾಜಿ ಪ್ರೇಮಿ ಕಾರಿನೊಳಗೇ ಸಜೀವ ದಹನವಾಗಿದ್ದಾನೆ.
ಮೃತನನ್ನು ನಾಗೇಂದ್ರ (30) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಗಾಯಗೊಂಡ ಬೆಂಗಳೂರಿನ ಆಸ್ಪತ್ರೆಯೊಂದರ ಒಟಿ ಟೆಕ್ನಿಷಿಯನ್ ಆಗಿರುವ ಯುವತಿ ಮತ್ತು ಉಬರ್ ಕ್ಯಾಬ್ ಚಾಲಕ ಪ್ರವೀಣ್ ಎಂಬುವವರನ್ನು ತುಮಕೂರು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಯ ಹಿನ್ನೆಲೆ:
ನಾಗೇಂದ್ರ ಮತ್ತು ಯುವತಿ ಈ ಹಿಂದೆ ಪ್ರೀತಿಸುತ್ತಿದ್ದು, ಇತ್ತೀಚೆಗೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ದೂರಾಗಿದ್ದರು. ಯುವತಿಯು ನಾಗೇಂದ್ರನ ನಂಬರ್ ಬ್ಲಾಕ್ ಮಾಡಿದ್ದಳು. ಇದರಿಂದ ಆಕ್ರೋಶಗೊಂಡ ನಾಗೇಂದ್ರ, ಶನಿವಾರ ಮುಂಜಾನೆ ಬೆಂಗಳೂರಿನ ಜಯನಗರದಲ್ಲಿದ್ದ ಯುವತಿಯ ಬಾಡಿಗೆ ಮನೆಗೆ ಬಂದು ಗಲಾಟೆ ಮಾಡಿದ್ದಾನೆ. ಬಳಿಕ ಅವಳನ್ನು ಬಲವಂತವಾಗಿ ಹಳದಿ ಬೋರ್ಡ್‌ನ ಉಬರ್ ಕಾರಿನಲ್ಲಿ ಅಪಹರಿಸಿಕೊಂಡು ಅಂಕೋಲಾ ಕಡೆಗೆ ಮುಖ ಮಾಡಿದ್ದಾನೆ. ಮಗಳು ನಾಪತ್ತೆಯಾದ ಹಿನ್ನೆಲೆಯಲ್ಲಿ ಯುವತಿಯ ಪೋಷಕರು ಜಯನಗರ ಪೊಲೀಸ್ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಿಸಿದ್ದರು.
ಕಾರಿನಲ್ಲೇ ಚಾಕು ಇರಿತ, ಯುವತಿ ಎಸ್ಕೇಪ್:
ಪ್ರಯಾಣದ ಉದ್ದಕ್ಕೂ ನಾಗೇಂದ್ರ ಯುವತಿಗೆ ಪ್ರಾಣ ಬೆದರಿಕೆ ಹಾಕಿದ್ದು, ತನ್ನ ಬಳಿಯಿದ್ದ ಸ್ಫೋಟಕ ವಸ್ತುವನ್ನು ತೋರಿಸಿದ್ದಾನೆ ಎನ್ನಲಾಗಿದೆ. ಕಾರು ಸಿರಾ ತಾಲೂಕಿನ ಜೋಗಿಹಳ್ಳಿ ಬಳಿ ತಲುಪುತ್ತಿದ್ದಂತೆ ನಾಗೇಂದ್ರ ಚಲಿಸುವ ಕಾರಿನಲ್ಲೇ ಯುವತಿಗೆ ಚಾಕುವಿನಿಂದ ಇರಿದಿದ್ದಾನೆ. ತಕ್ಷಣವೇ ಕ್ಯಾಬ್ ಚಾಲಕ ಪ್ರವೀಣ್ ಕಾರು ನಿಲ್ಲಿಸಿದ್ದು, ಯುವತಿ ಕಾರಿನ ಡೋರ್ ಅನ್ಲಾಕ್ ಮಾಡಿ ಹೊರಗೆ ಜಿಗಿದಿದ್ದಾಳೆ.
ಕ್ಷಣಾರ್ಧದಲ್ಲಿ ಕಾರು ಬ್ಲಾಸ್ಟ್:
ಯುವತಿ ಹೊರಬೀಳುತ್ತಿದ್ದಂತೆ ಕಾರಿನಲ್ಲಿ ಭೀಕರ ಸ್ಫೋಟ ಸಂಭವಿಸಿದ್ದು, ಇಡೀ ವಾಹನ ಕ್ಷಣಾರ್ಧದಲ್ಲಿ ಬೆಂಕಿಯ ಉಂಡೆಯಾಗಿದೆ. ಕಾರಿನೊಳಗೆ ಸಿಲುಕಿಕೊಂಡ ನಾಗೇಂದ್ರ ಸ್ಥಳದಲ್ಲೇ ಸಜೀವ ದಹನವಾಗಿದ್ದಾನೆ. ಸ್ಫೋಟದ ತೀವ್ರತೆಗೆ ಹೆದ್ದಾರಿಯಲ್ಲಿ ಸುಮಾರು ಒಂದು ಕಿಲೋಮೀಟರ್‌ಗೂ ಹೆಚ್ಚು ದೂರ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಪೊಲೀಸ್ ತನಿಖೆ: ಸ್ಥಳಕ್ಕೆ ಭೇಟಿ ನೀಡಿದ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಅಶೋಕ್ ಕೆ.ವಿ, ಪ್ರಾಥಮಿಕ ತನಿಖೆಯ ಪ್ರಕಾರ ನಾಗೇಂದ್ರ ಸ್ಫೋಟಕ ವಸ್ತುವನ್ನು ಹೊಂದಿದ್ದು, ತಾನೇ ಮುದ್ದಾಂ ಸ್ಫೋಟಿಸಿಕೊಂಡಿರುವುದು ಕಂಡುಬಂದಿದೆ ಎಂದಿದ್ದಾರೆ. ಕಾರಿನ ಅವಶೇಷಗಳಲ್ಲಿ ಬಾಂಬ್ ಮಾದರಿಯ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಇವುಗಳನ್ನು ಎಲ್ಲಿಂದ ತರಲಾಗಿತ್ತು ಮತ್ತು ಹೇಗೆ ಸ್ಫೋಟಿಸಲಾಯಿತು ಎಂಬ ಬಗ್ಗೆ ತೀವ್ರ ತನಿಖೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
- Bengaluru woman kidnap
- Jayanagar kidnap case
- Karnataka car bomb blast
- murder suicide car blast
- Nagendra Tumakuru case
- NH 48 car fire
- Sira highway blast
- Tumakuru car explosion
- Tumakuru police investigation
- Uber cab explosion Karnataka
- ಉಬರ್ ಕ್ಯಾಬ್ ಸ್ಫೋಟ
- ಕಾರಿನಲ್ಲಿ ಬಾಂಬ್ ಸ್ಫೋಟ
- ಚಲಿಸುವ ಕಾರಿನಲ್ಲಿ ಬೆಂಕಿ
- ತುಮಕೂರು ಕಾರು ಸ್ಫೋಟ
- ತುಮಕೂರು ಪೊಲೀಸ್ ತನಿಖೆ
- ನರೇಂದ್ರ ತುಮಕೂರು
- ಪ್ರೇಮಿ ಸಜೀವ ದಹನ
- ಬೆಂಗಳೂರು ಯುವತಿ ಕಿಡ್ನ್ಯಾಪ್
- ಶಿರಾ ರಾಷ್ಟ್ರೀಯ ಹೆದ್ದಾರಿ ಅಪಘಾತ





Leave a comment