ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ಕರ್ನಾಟಕ ವಸತಿ ಶೈಕ್ಷಣಿಕ ಸಂಸ್ಥೆಗಳ ಸಂಘದ (KREIS) ಅಡಿಯಲ್ಲಿ ಬರುವ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಅಟಲ್ ಬಿಹಾರಿ ವಾಜಪೇಯಿ, ಶ್ರೀಮತಿ ಇಂದಿರಾ ಗಾಂಧಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಗಳಲ್ಲಿನ 1087 ಶಿಕ್ಷಕರ (Group-B & Group-C) ಹುದ್ದೆಗಳ ನೇಮಕಾತಿಯ ಆನ್ಲೈನ್ ಅರ್ಜಿ ಸಲ್ಲಿಕೆಯ ಕೊನೆಯ ದಿನಾಂಕವನ್ನು ಆಗೆಸ್ಟ್ 17, 2026 ರವರೆಗೆ ವಿಸ್ತರಿಸಿದೆ.
ಹುದ್ದೆಗಳ ವಿವರ:
ಒಟ್ಟು ಹುದ್ದೆಗಳು: 1087
ಉಳಿಕೆ ಕರ್ನಾಟಕ (RPC) ವೃಂದ: 767 ಹುದ್ದೆಗಳು
ಕಲ್ಯಾಣ ಕರ್ನಾಟಕ (KK) ವೃಂದ: 320 ಹುದ್ದೆಗಳು
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 15 ಜುಲೈ 2026
ಅರ್ಜಿ ಸಲ್ಲಿಸಲು ವಿಸ್ತರಿಸಲಾದ ಕೊನೆಯ ದಿನಾಂಕ: 17 ಆಗಸ್ಟ್ 2026
ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ: 18 ಆಗಸ್ಟ್ 2026
ಅರ್ಹತೆ ಮತ್ತು ಆಯ್ಕೆ ಪ್ರಕ್ರಿಯೆ:
ಸಂಬಂಧಿಸಿದ ವಿಷಯದಲ್ಲಿ ಪದವಿ, B.Ed. ಪದವಿ ಹಾಗೂ KARTET / CTET (Paper-2) ಉತ್ತೀರ್ಣರಾಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಯ್ಕೆಯನ್ನು ಸಂಪೂರ್ಣವಾಗಿ ಸ್ಪರ್ಧಾತ್ಮಕ ಲಿಖಿತ ಪರೀಕ್ಷೆಯ (OMR ಆಧಾರಿತ) ಅಂಕಗಳ ಆಧಾರದ ಮೇಲೆ ನಡೆಸಲಾಗುತ್ತದೆ. ಯಾವುದೇ ಸಂದರ್ಶನ ಇರುವುದಿಲ್ಲ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಕೆಇಎ ಅಧಿಕೃತ ವೆಬ್ಸೈಟ್ cetonline.karnataka.gov.in/kea ಗೆ ಭೇಟಿ ನೀಡಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
- 1087 ಶಿಕ್ಷಕರ ಹುದ್ದೆಗಳು
- cetonline.karnataka.gov.in
- Karnataka Residential Schools Teacher Vacancy
- KEA KREIS Teacher Recruitment 2026
- KEA Recruitment 2026 Karnataka
- KEA Teacher Apply Online
- KREIS 1087 Teacher Posts
- KREIS Eligibility Criteria
- KREIS Teacher Application Last Date Extended
- ಆರ್ಪಿಸಿ ಮತ್ತು ಕಲ್ಯಾಣ ಕರ್ನಾಟಕ ಹುದ್ದೆಗಳು
- ಕರ್ನಾಟಕ ಶಿಕ್ಷಕರ ಹುದ್ದೆಗಳು
- ಕೆಇಎ ಆನ್ಲೈನ್ ಅರ್ಜಿ
- ಕೆಇಎ ಕೆಆರ್ಇಐಎಸ್ ಶಿಕ್ಷಕರ ನೇಮಕಾತಿ 2026
- ಕೆಇಎ ಲೇಟೆಸ್ಟ್ ನ್ಯೂಸ್
- ಕೊನೆಯ ದಿನಾಂಕ ವಿಸ್ತರಣೆ
- ವಸತಿ ಶಾಲೆ ಶಿಕ್ಷಕರ ನೇಮಕಾತಿ





Leave a comment