ಬೆಂಗಳೂರು: ಸ್ಯಾಂಡಲ್‌ವುಡ್‌ನ (Sandalwood) ಚಂದದ ನಟಿ, ‘ಹುಚ್ಚ’ ಹಾಗೂ ‘ಹುಡುಗಾಟ’ ಸಿನಿಮಾ ಖ್ಯಾತಿಯ ರೇಖಾ ವೇದವ್ಯಾಸ್ (Rekha Vedavyas) ತಮ್ಮ ಮದುವೆಯ ಸುತ್ತ ಹರಿದಾಡುತ್ತಿರುವ ಎಲ್ಲಾ ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ. ಖ್ಯಾತ ಟಾಕ್ ಶೋ ಒಂದರಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಅವರು, ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅತ್ಯಂತ ಬೋಲ್ಡ್ ಆಗಿ ಮಾತನಾಡಿದ್ದಾರೆ.
ಸಲ್ಮಾನ್ ಖಾನ್ ಬಿಟ್ಟರೆ ನಾನೇ ಅನ್ಸುತ್ತೆ!
ಸಾಕಷ್ಟು ಜನ ನನಗೆ ಈಗಾಗಲೇ ಮದುವೆಯಾಗಿದೆ ಅಥವಾ ಲೈಫ್‌ನಲ್ಲಿ ಯಾರೋ ಇದ್ದಾರೆ ಅಂದುಕೊಂಡಿದ್ದಾರೆ. ಆದರೆ ಅದೆಲ್ಲ ಸುಳ್ಳು, ನಾನು ಇನ್ನೂ ಕಂಪ್ಲೀಟ್ ಸಿಂಗಲ್ ಎಂದು ಸ್ಪಷ್ಟಪಡಿಸಿದ್ದಾರೆ. ಇಷ್ಟು ವಯಸ್ಸಾದರೂ ಯಾಕೆ ಮದುವೆಯಾಗಿಲ್ಲ? ಎಂಬ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ರೇಖಾ, “ಬಹುಶಃ ಇಡೀ ದೇಶದಲ್ಲಿ ಸಲ್ಮಾನ್ ಖಾನ್ ಬಿಟ್ಟರೆ ಮದುವೆಯಾಗದೆ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಆಗಿ ಉಳಿಯುತ್ತಿರುವುದು ನಾನೇ ಅನ್ಸುತ್ತೆ” ಎಂದು ತಮಾಷೆ ಮಾಡಿದ್ದಾರೆ.
ಇನ್‌ಸ್ಟಾಗ್ರಾಂನಲ್ಲಿ ನೇರವಾಗಿ ಡಿಎಂ (DM) ಮಾಡಿ!
“ಹಿಂದೆ ಒಬ್ಬ ಹುಡುಗನನ್ನು ಇಷ್ಟಪಟ್ಟಿದ್ದೆ. ಆದರೆ ಆ ವಿಷಯವನ್ನು ಅವನಿಗೆ ಹೇಳಲು ಧೈರ್ಯ ಬರಲಿಲ್ಲ. ನನ್ನ ಹಾಗೆ ಯಾರೂ ಸುಮ್ಮನಿರಬೇಡಿ, ಇಷ್ಟವಾದರೆ ತಕ್ಷಣ ಪ್ರಪೋಸ್ ಮಾಡಿ” ಎಂದಿದ್ದಾರೆ. ಇದೇ ವೇಳೆ ನಿರೂಪಕಿ ಫನ್ನಿಯಾಗಿ ‘ನೀವು ಸಿಂಗಲ್ ಅಂತ ಗೊತ್ತಾದರೆ ಈಗ ಸಾಲು ಸಾಲು ಪ್ರಪೋಸಲ್ಸ್ ಬರುತ್ತವಲ್ಲ’ ಎಂದಾಗ ರೇಖಾ ಓಪನ್ ಆಗಿ ರಿಯಾಕ್ಟ್ ಮಾಡಿದ್ದಾರೆ.
“ನಿಮ್ಮಲ್ಲಿ ಯಾರಾದರೂ ನನ್ನನ್ನು ನಿಯತ್ತಿನಿಂದ ಪ್ರೀತಿಸಿ, ಮದುವೆಯಾಗಲು ಬಯಸಿದರೆ, ಹಿಂಜರಿಕೆಯಿಲ್ಲದೆ ನನ್ನ ಇನ್‌ಸ್ಟಾಗ್ರಾಂ (Instagram) ಖಾತೆಗೆ ನೇರವಾಗಿ ಡಿಎಂ ಮಾಡಿ. ನನಗೆ ಜೆನ್ಯೂನ್ ಅನ್ನಿಸುವ ಮೆಸೇಜ್‌ಗಳಿಗೆ ನಾನು ಖಂಡಿತ ರಿಪ್ಲೈ ಮಾಡುತ್ತೇನೆ, ಅಲ್ಲಿಯವರೆಗೂ ಸ್ವಲ್ಪ ಕಾಯಿರಿ” ಎಂದು ನಗುತ್ತಾ ಆಫರ್ ಕೊಟ್ಟಿದ್ದಾರೆ.
ಹುಡುಗನಿಗೆ ಇರಬೇಕಾದ ಲಕ್ಷಣಗಳೇನು?
“ಈ ಭೂಮಿ ಮೇಲೆ ಯಾರೂ ಪರ್ಫೆಕ್ಟ್ ಅಲ್ಲ, ನಾನು ಕೂಡ ಅಲ್ಲ. ಹಾಗಾಗಿ ನನಗೆ ಹುಡುಗನ ಲುಕ್ಸ್, ಬಣ್ಣ ಮುಖ್ಯವಲ್ಲ. ನನ್ನನ್ನು ನನ್ನಂತೆಯೇ ಪ್ರೀತಿಸುವ, ಒಂದು ಒಳ್ಳೆಯ ಮನಸ್ಸಿರುವ ಹುಡುಗ ಸಿಕ್ಕರೆ ಸಾಕು. ನಾನು 5.6 ಹೈಟ್ ಇದ್ದೇನೆ, ನನಗಿಂತ ಸ್ವಲ್ಪ ಎತ್ತರವಿದ್ದರೆ ಸಾಕು, ಇಲ್ಲದಿದ್ದರೆ ನಾನು ‘ರೀ’ ಅಂತ ಕರೆಯಲು ಚೆನ್ನಾಗಿರಲ್ಲ” ಎಂದು ನಗುತ್ತಲೇ ತಮ್ಮ ಮನದ ಆಸೆಯನ್ನು ಬಿಚ್ಚಿಟ್ಟಿದ್ದಾರೆ ಜಿಂಕೆಮರಿ ರೇಖಾ.
- Actress Rekha Vedavyas marriage
- Huchcha heroine Rekha
- Hudugaata actress Rekha single
- Kannada actress Rekha wedding rumors
- Rekha Veda Vyas single status
- Rekha Vedavyas current age
- Rekha Vedavyas Instagram DM
- Rekha Vedavyas latest news
- Sandalwood actress Rekha interview
- ಕನ್ನಡ ನಟಿ ರೇಖಾ ಸಿಂಗಲ್
- ಜಿಂಕೆಮರಿ ರೇಖಾ ಮದುವೆ
- ನಟಿ ರೇಖಾ ವೇದವ್ಯಾಸ್
- ನಾನಿನ್ನೂ ಸಿಂಗಲ್
- ರೇಖಾ ವೇದವ್ಯಾಸ್ ಇನ್‌ಸ್ಟಾಗ್ರಾಂ ಡಿಎಂ
- ರೇಖಾ ವೇದವ್ಯಾಸ್ ಟಾಕ್ ಶೋ
- ರೇಖಾ ವೇದವ್ಯಾಸ್ ವಯಸ್ಸು
- ಸ್ಯಾಂಡಲ್ವುಡ್ ನಟಿ ರೇಖಾ ಲೇಟೆಸ್ಟ್ ನ್ಯೂಸ್
- ಹುಚ್ಚ ನಟಿ ರೇಖಾ
- ಹುಡುಗಾಟ ನಟಿ ರೇಖಾ ಮದುವೆ





Leave a comment