Home ದಾವಣಗೆರೆ ನಿಮಗೆ 2,000 ರೂ. ಗೃಹಲಕ್ಷ್ಮಿ ಹಣ ಬರುವುದು ನಿಲ್ಲುತ್ತಾ? ಬಯೋಮೆಟ್ರಿಕ್, ಫೇಸಿಯಲ್ ತಪಾಸಣೆ ಕಡ್ಡಾಯ: ಮನೆ ಬಾಗಿಲಿಗೆ ಬರಲಿದ್ದಾರೆ ಅಧಿಕಾರಿಗಳು!
ದಾವಣಗೆರೆಬೆಂಗಳೂರುವಾಣಿಜ್ಯ

ನಿಮಗೆ 2,000 ರೂ. ಗೃಹಲಕ್ಷ್ಮಿ ಹಣ ಬರುವುದು ನಿಲ್ಲುತ್ತಾ? ಬಯೋಮೆಟ್ರಿಕ್, ಫೇಸಿಯಲ್ ತಪಾಸಣೆ ಕಡ್ಡಾಯ: ಮನೆ ಬಾಗಿಲಿಗೆ ಬರಲಿದ್ದಾರೆ ಅಧಿಕಾರಿಗಳು!

Share
ಗೃಹಲಕ್ಷ್ಮಿ
Share

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಗೃಹಲಕ್ಷ್ಮಿ’ ಯೋಜನೆಯಲ್ಲಿ ಪಾರದರ್ಶಕತೆ ತರಲು ಕರ್ನಾಟಕ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಯೋಜನೆಯ ಅನರ್ಹ ಫಲಾನುಭವಿಗಳನ್ನು ಪಟ್ಟಿಯಿಂದ ಕೈಬಿಡುವ ಉದ್ದೇಶದಿಂದ ಆಗಸ್ಟ್ 30 ರಿಂದ ಒಂದು ತಿಂಗಳ ಕಾಲ ರಾಜ್ಯಾದ್ಯಂತ ಬಯೋಮೆಟ್ರಿಕ್ ಹಾಗೂ ಫೇಸಿಯಲ್ (ಮುಖ ಗುರುತು) ಮರು ಪರಿಶೀಲನಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.

ಮೃತಪಟ್ಟವರು, ಬೇರೆಡೆಗೆ ವಲಸೆ ಹೋದವರು ಹಾಗೂ ಆದಾಯ ತೆರಿಗೆ ಮತ್ತು ಜಿಎಸ್‌ಟಿ (GST) ಪಾವತಿಸುತ್ತಿದ್ದರೂ ಯೋಜನೆಯ ಲಾಭ ಪಡೆಯುತ್ತಿರುವವರನ್ನು ಗುರುತಿಸಿ ಪಟ್ಟಿಯಿಂದ ತೆಗೆದುಹಾಕಲು ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.

ಮನೆ ಮನೆಗೆ ಬರಲಿದ್ದಾರೆ ಸಿಬ್ಬಂದಿ:

ಇ-ಆಡಳಿತ ಇಲಾಖೆ ಅಭಿವೃದ್ಧಿಪಡಿಸಿರುವ ಮೊಬೈಲ್ ಆಪ್ ಮೂಲಕ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಲಾಗುತ್ತದೆ. ಫಲಾನುಭವಿಗಳ ಮನೆ ಬಾಗಿಲಿಗೆ ತೆರಳುವ ಸಿಬ್ಬಂದಿ, ಫಾರ್ಮ್ ನೀಡುವ ಜೊತೆಗೆ ಫೋಟೋ ಮತ್ತು ಜಿಪಿಎಸ್ (GPS) ಲೊಕೇಶನ್ ದಾಖಲಿಸಲಿದ್ದಾರೆ. ಒಂದು ವೇಳೆ ಫಲಾನುಭವಿಗಳು ಮನೆಯಲ್ಲಿ ಇಲ್ಲದಿದ್ದರೆ, ಅವರು ಸಮೀಪದ ನ್ಯಾಯಬೆಲೆ ಅಂಗಡಿ (Ration Shop), ಗ್ರಾಮ್ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ತೆರಳಿ ಬಯೋಮೆಟ್ರಿಕ್ ಪರಿಶೀಲನೆ ಪೂರ್ಣಗೊಳಿಸಬಹುದಾಗಿದೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಣೆಯಲ್ಲಿ 20 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನಗೊಳ್ಳುತ್ತಿದ್ದು, ಪ್ರತಿ ತಿಂಗಳು 2,000 ರೂ. ಪಡೆಯುತ್ತಿರುವ 1.24 ಕೋಟಿಗೂ ಹೆಚ್ಚು ಮಹಿಳೆಯರಿಗೆ ಈ ಮರು ಪರಿಶೀಲನೆ ಅನ್ವಯಿಸಲಿದೆ.

Share

Leave a comment

Leave a Reply

Your email address will not be published. Required fields are marked *

Related Articles