Home ಕ್ರೈಂ ನ್ಯೂಸ್ ಅಕ್ರಮ ಸಂಬಂಧ ಶಂಕೆ: ಪ್ರೇಮಿಯ ಖಾಸಗಿ ಅಂಗಗಳಿಗೆ ಹಿಂಸೆ ನೀಡಿ ಕೊಂದ ಅಕ್ಕ-ತಮ್ಮ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಅಕ್ರಮ ಸಂಬಂಧ ಶಂಕೆ: ಪ್ರೇಮಿಯ ಖಾಸಗಿ ಅಂಗಗಳಿಗೆ ಹಿಂಸೆ ನೀಡಿ ಕೊಂದ ಅಕ್ಕ-ತಮ್ಮ!

Share
ಅಕ್ರಮ ಸಂಬಂಧ
Share

ನಾಗೌರ್ (ರಾಜಸ್ಥಾನ): ಅಕ್ರಮ ಸಂಬಂಧದ ಶಂಕೆಯ ಹಿನ್ನೆಲೆಯಲ್ಲಿ 45 ವರ್ಷದ ಶೇರಾರಾಮ್ ಎಂಬ ವ್ಯಕ್ತಿಯನ್ನು ವಿವಾಹಿತ ಮಹಿಳೆ ಹಾಗೂ ಆಕೆಯ ಸಹೋದರ ಸೇರಿ ಅತ್ಯಂತ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದಂತೆ ಮೋನಿಕಾ (30) ಮತ್ತು ಆಕೆಯ ಸಹೋದರ ಶ್ರವಣ್‌ರಾಮ್ ಮೇಘವಾಲ್ (25) ಎಂಬಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ: ಆಗಸ್ಟ್ 27ರಂದು ಶ್ರವಣ್‌ರಾಮ್, ತನ್ನ ಸಹೋದರಿ ಮೋನಿಕಾ ಹಾಗೂ ಶೇರಾರಾಮ್ ಜಮೀನಿನ ಮನೆಯಲ್ಲಿ ಆಕ್ಷೇಪಾರ್ಹ ಸ್ಥಿತಿಯಲ್ಲಿದ್ದಾಗ ಹಿಡಿದಿದ್ದನು. ಇದರಿಂದ ಆಕ್ರೋಶಗೊಂಡ ಅಕ್ಕ-ತಮ್ಮಂದಿರು ಶೇರಾರಾಮ್‌ನ ಕಾಲುಗಳನ್ನು ಹಗ್ಗದಿಂದ ಕಟ್ಟಿ, ಮರದ ಬಡಿಗೆಯಿಂದ ತೀವ್ರವಾಗಿ ಥಳಿಸಿದ್ದಾರೆ.

ಖಾಸಗಿ ಅಂಗಗಳಿಗೆ ಹಿಂಸೆ: ಹತ್ಯೆಗೂ ಮುನ್ನ ಮೃತನ ಖಾಸಗಿ ಅಂಗಗಳ ಮೇಲೆಯೂ ತೀವ್ರ ಹಿಂಸೆ ನೀಡಲಾಗಿದ್ದು, ತೀವ್ರ ರಕ್ತಸ್ರಾವ ಹಾಗೂ ಗಂಭೀರ ಗಾಯಗಳಿಂದಾಗಿ ಶೇರಾರಾಮ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ದುರ್ನಾತ ಬಂದಾಗ ಬೆಳಕಿಗೆ: ಆಗಸ್ಟ್ 28ರಂದು ಜಮೀನಿನ ಮನೆಯಿಂದ ದುರ್ನಾತ ಬರುತ್ತಿದ್ದಾಗ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೋಣೆಯ ಬಾಗಿಲು ಒಳಗಿನಿಂದ ಮುಚ್ಚಲ್ಪಟ್ಟಿದ್ದು, ಕಿಟಕಿಯ ಮೂಲಕ ಪರಿಶೀಲಿಸಿದಾಗ ಮೃತದೇಹ ಪತ್ತೆಯಾಗಿದೆ.

12 ಗಂಟೆಯಲ್ಲೇ ಬಂಧನ: ಆರಂಭದಲ್ಲಿ ಈ ಪ್ರಕರಣವನ್ನು ‘ಬ್ಲೈಂಡ್ ಮರ್ಡರ್’ ಎಂದು ಪರಿಗಣಿಸಿದ್ದ ಪೊಲೀಸರು, ತಾಂತ್ರಿಕ ವಿಶ್ಲೇಷಣೆ ಹಾಗೂ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಎಫ್‌ಐಆರ್ ದಾಖಲಾದ 12 ಗಂಟೆಗಳ ಒಳಗಾಗಿ ಇಬ್ಬರೂ ಆರೋಪಿಗಳನ್ನು ಸೆರೆಹಿಡಿದಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles