Home ಕ್ರೈಂ ನ್ಯೂಸ್ ದಾವಣಗೆರೆಯ ಜಗಳೂರಿನಲ್ಲಿ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಮುಗಿಸಿದ ಪತ್ನಿ: ನಾಪತ್ತೆ ನಾಟಕವಾಡಿದ್ದ ಖದೀಮೆ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆಯ ಜಗಳೂರಿನಲ್ಲಿ ಪ್ರಿಯಕರನ ಜೊತೆ ಸೇರಿ ಪತಿಯನ್ನೇ ಮುಗಿಸಿದ ಪತ್ನಿ: ನಾಪತ್ತೆ ನಾಟಕವಾಡಿದ್ದ ಖದೀಮೆ!

Share
ದಾವಣಗೆರೆ
Share

ದಾವಣಗೆರೆ: ಜಗಳೂರು ತಾಲೂಕಿನ ದೊಣೆಹಳ್ಳಿ ಹೊಸೂರು ಗ್ರಾಮದಲ್ಲಿ ಪ್ರಿಯಕರನ ಜೊತೆಗೆ ಸೇರಿ ಪತ್ನಿಯೇ ಪತಿಗೆ ಸುಪಾರಿ ಕೊಟ್ಟು ಕೊಲ್ಲಿಸಿದ ಘಟನೆ ನಡೆದಿದೆ.

37 ವರ್ಷ ಬಸವರಾಜ್ ಹತ್ಯೆಗೀಡಾದ ವ್ಯಕ್ತಿ. ಕಳೆದ ಹದಿನಾರು ವರ್ಷಗಳ ಹಿಂದೆ ಬಸವರಾಜ್ ಮತ್ತು ಸುನೀತಾ ಜೊತೆ ವಿವಾಹವಾಗಿತ್ತು. ಮೊದಮೊದಲು ಚೆನ್ನಾಗಿಯೇ ಸಂಸಾರ ಇತ್ತು. ಆದರೆ ಆನಂತರ ಇಬ್ಬರ ನಡುವೆ ಸಣ್ಣಪುಟ್ಟ ಗಲಾಟೆ ನಡೆಯುತಿತ್ತು. ಈ ಮಧ್ಯೆ ಬೆಣ್ಣೆಹಳ್ಳಿಯ ತಿಪ್ಪೇಸ್ವಾಮಿ ಎಂಬಾತನ ಜೊತೆಗೆ ಸುನೀತಾಗೆ ಪ್ರೇಮಾಂಕುರವಾಗಿದೆ. ಆ ಬಳಿಕ ಅನೈತಿಕ ಸಂಬಂಧಕ್ಕೂ ತಿರುಗಿತ್ತು.

ಇಬ್ಬರ ನಡುವೆ ಲವ್ವಿ ಡವ್ವಿ ಜೋರಾಗಿ ನಡೆಯುತಿತ್ತು. ಈ ವಿಚಾರ ಬಸವರಾಜ್ ಗೆ ಗೊತ್ತಾಗಿದೆ. ಆಗ ಸುನೀತಾ ಮತ್ತು ಬಸವರಾಜ್ ನಡುವೆ ಗಲಾಟೆ ನಡೆದಿದೆ. ಕಳೆದ ಎರಡು ತಿಂಗಳ ಹಿಂದೆ ದಿಢೀರ್ ಆಗಿ ಬಸವರಾಜ್ ಕಾಣೆಯಾಗಿದ್ದರು. ಕಾಣೆಯಾಗಿದ್ದ ಬಸವರಾಜ್ ಅವರನ್ನು ಹುಡುಕಿಕೊಡಿ ಎಂದು ಸುನೀತಾ ಜಗಳೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಆದರೆ ಬಸವರಾಜ್ ಪತ್ತೆಯಾಗಿರಲಿಲಲ್ಲ. ಇದೀಗ ಬಸವರಾಜ್ ಅವರ ಕೊಲೆ ನಡೆದಿದೆ ಎಂದು ಸಹೋದರ ರಂಗನಾಥ ಜಗಳೂರು ಪೊಲೀಸರಿಗೆ ದೂರು ನೀಡಿದ್ದಾರೆ. ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಕಾರಣಕ್ಕೆ ನನ್ನ ಸಹೋದರ ಬಸವರಾಜ್ ಅವರನ್ನು ಆ. 25ರಂದು ದೊಣ್ಣೆಹಳ್ಳಿ ಕ್ರಾಸ್ ಬಳಿ ಸಾಲ ನೀಡುವುದಾಗಿ ಹೇಳಿ ಕರೆದುಕೊಂಡು ಹೋಗಿದ್ದರು. ಚಿತ್ರದುರ್ಗದ ಬಳಿ ಕೊಲೆ ಮಾಡಿರುವ ಅನುಮಾನ ಇದ್ದು, ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles