Home ಕ್ರೈಂ ನ್ಯೂಸ್ ಮಾದನಬಾವಿಯಲ್ಲಿ ಕೆಲಸದ ಒತ್ತಡಕ್ಕೆ ಬ್ಯಾಂಕ್ ಉದ್ಯೋಗಿ ಬಲಿ? ವಿಶೇಷ ಚೇತನ ಮಗುವಿನ ತಂದೆ ಕಾಲುವೆಗೆ ಧುಮುಕಿ ಆತ್ಮಹತ್ಯೆ, ಸಾವಿಗೆ ಮುನ್ನ ವಿಡಿಯೋ ಮಾಡಿ ಸಾವಿಗೆ ಶರಣು!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ಮಾದನಬಾವಿಯಲ್ಲಿ ಕೆಲಸದ ಒತ್ತಡಕ್ಕೆ ಬ್ಯಾಂಕ್ ಉದ್ಯೋಗಿ ಬಲಿ? ವಿಶೇಷ ಚೇತನ ಮಗುವಿನ ತಂದೆ ಕಾಲುವೆಗೆ ಧುಮುಕಿ ಆತ್ಮಹತ್ಯೆ, ಸಾವಿಗೆ ಮುನ್ನ ವಿಡಿಯೋ ಮಾಡಿ ಸಾವಿಗೆ ಶರಣು!

Share
ಕೆಲಸ
Share

ಹೊನ್ನಾಳಿ / ದಾವಣಗೆರೆ: ಐಡಿಎಫ್‌ಸಿ (IDFC) ಬ್ಯಾಂಕ್‌ನ ಕೆಲಸದ ತೀವ್ರ ಒತ್ತಡ ಹಾಗೂ ಸಿಬ್ಬಂದಿಯ ಕಿರುಕುಳಕ್ಕೆ ಬೇಸತ್ತು ತಾಲೂಕಿನ ಮಾದನ ಬಾವಿ ಗ್ರಾಮದ ಉದ್ಯೋಗಿಯೊಬ್ಬರು ತುಂಗಾ ಮೇಲ್ದಂಡೆ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ತಾಲೂಕಾದ್ಯಂತ ತೀವ್ರ ಕಳವಳ ಮೂಡಿಸಿದೆ.

ಮಾದನ ಬಾವಿ ಗ್ರಾಮದ ಆರ್.ಡಿ. ಮೋಹನ್ ಕುಮಾರ್ (37) ಆತ್ಮಹತ್ಯೆಗೆ ಶರಣಾದ ದುರದೃಷ್ಟಕರ ಉದ್ಯೋಗಿ. ಇವರಿಗೆ ಪತ್ನಿ, ಒಂದು ಹೆಣ್ಣು ಮಗು ಹಾಗೂ ಅಂಗವೈಕಲ್ಯದಿಂದ ಬಳಲುತ್ತಿರುವ ಗಂಡು ಮಗು ಇದೆ.

ವಿಡಿಯೋದಲ್ಲಿ ಗಂಭೀರ ಆರೋಪ:

ಕಾಲುವೆಗೆ ಹಾರುವ ಮುನ್ನ ಮೋಹನ್ ಕುಮಾರ್ ಅವರು ವಿಡಿಯೋ ಒಂದನ್ನು ದಾಖಲಿಸಿದ್ದು, ತಮ್ಮ ಸಾವಿಗೆ IDFC ಬ್ಯಾಂಕ್‌ನ ಕೆಲಸದ ಒತ್ತಡ ಹಾಗೂ ಬ್ಯಾಂಕ್ ಸಿಬ್ಬಂದಿಯ ಕಿರುಕುಳವೇ ನೇರ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ, ತಮ್ಮ ಕುಟುಂಬ ಮತ್ತು ವಿಶೇಷ ಚೇತನ ಮಗುವಿಗೆ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರು ನ್ಯಾಯ ದೊರಕಿಸಿಕೊಡಬೇಕೆಂದು ಕಣ್ಣೀರಿನ ಮನವಿ ಮಾಡಿದ್ದಾರೆ.

ಶೋಧ ಕಾರ್ಯ ಹಾಗೂ ತನಿಖೆಗೆ ಒತ್ತಾಯ:

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಮತ್ತು ರಕ್ಷಣಾ ಸಿಬ್ಬಂದಿ ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ಮೋಹನ್ ಕುಮಾರ್ ಅವರ ಮೃತದೇಹಕ್ಕಾಗಿ ತೀವ್ರ ಶೋಧ ಕಾರ್ಯ ಮುಂದುವರಿಸಿದ್ದಾರೆ. ಘಟನಾ ಸ್ಥಳಕ್ಕೆ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ಜೊತೆ ದೂರವಾಣಿ ಮೂಲಕ ಚರ್ಚಿಸಿ, ಘಟನೆಯ ಕುರಿತು ಯಾವುದೇ ವಿಳಂಬವಿಲ್ಲದೆ ಸಮಗ್ರ ತನಿಖೆ ನಡೆಸಿ, ಬ್ಯಾಂಕ್ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಿ ನೊಂದ ಕುಟುಂಬಕ್ಕೆ ನ್ಯಾಯ ಒದಗಿಸುವಂತೆ ಒತ್ತಾಯಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *