Home ದಾವಣಗೆರೆ ‘ಬ್ರೋ, ವೇಟ್… ಭಾರತ ಮಾತಾ ಕೀ ಜೈ’: ರಾಹುಲ್ ಗಾಂಧಿ ‘ಪೇಟ್ರಿಯಾರ್ಕಿ’ ಹೇಳಿಕೆಗೆ ಕಂಗನಾ ರಣಾವತ್ ಟಾಂಗ್!
ದಾವಣಗೆರೆಬೆಂಗಳೂರುಸಿನಿಮಾ

‘ಬ್ರೋ, ವೇಟ್… ಭಾರತ ಮಾತಾ ಕೀ ಜೈ’: ರಾಹುಲ್ ಗಾಂಧಿ ‘ಪೇಟ್ರಿಯಾರ್ಕಿ’ ಹೇಳಿಕೆಗೆ ಕಂಗನಾ ರಣಾವತ್ ಟಾಂಗ್!

Share
ರಾಹುಲ್ ಗಾಂಧಿ
Share

ನವದೆಹಲಿ: ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್, ಕಾಂಗ್ರೇಸ್ ನಾಯಕ ರಾಹುಲ್ ಗಾಂಧಿ ಅವರ “ಸ್ಮ್ಯಾಶ್ ದಿ ಪೇಟ್ರಿಯಾರ್ಕಿ” (ಪುರುಷ ಪ್ರಧಾನ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಿ) ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡಿದ್ದಾರೆ.

ಬಾಲಿವುಡ್ ನಟಿ ಕೃತಿ ಸನೋನ್ ಅಭಿನಯದ ರಾಖಿ ಹಬ್ಬದ ಒಡವೆ ಜಾಹೀರಾತಿನಲ್ಲಿ ಧರಿಸಿದ್ದ ಉಡುಪಿನ ಕುರಿತು ಸೋಷಿಯಲ್ ಮೀಡಿಯಾದಲ್ಲಿ ವಿವಾದ ಸೃಷ್ಟಿಯಾಗಿತ್ತು. ಈ ವಿಚಾರದಲ್ಲಿ ಕೃತಿ ಸನೋನ್ ಪರ ಬ್ಯಾಟ್ ಬೀಸಿದ್ದ ರಾಹುಲ್ ಗಾಂಧಿ, “ಮಹಿಳೆ ಏನು ಧರಿಸಬೇಕು ಎಂಬುದು ಆಕೆಯ ವೈಯಕ್ತಿಕ ಆಯ್ಕೆ” ಎಂದು ಹೇಳಿ #SmashThePatriarchy ಹ್ಯಾಶ್‌ಟ್ಯಾಗ್ ಬಳಸಿದ್ದರು.

ರಾಹುಲ್ ಗಾಂಧಿ ಹೇಳಿಕೆಯನ್ನು ವ್ಯಂಗ್ಯವಾಡಿದ ಕಂಗನಾ ರಣಾವತ್, ಬಿಜೆಪಿ ಹಂಚಿಕೊಂಡಿದ್ದ ಪೋಸ್ಟ್ ಒಂದನ್ನು ಮರುಹಂಚಿಕೊಂಡು, “ಬ್ರೋ, ವೇಟ್. ಭಾರತ ಮಾತಾ ಕೀ ಜೈ. ಶುರು ಮಾಡೋಣ” ಎಂದು ಬರೆದುಕೊಂಡಿದ್ದಾರೆ.

ಬಿಜೆಪಿ ಹಂಚಿಕೊಂಡಿರುವ ವಿಲಕ್ಷಣ ಕಾರ್ಟೂನ್ ಪೋಸ್ಟ್‌ನಲ್ಲಿ ಕಾಂಗ್ರೇಸ್‌ನ ಮಹಿಳಾ ವಿರೋಧಿ ಇತಿಹಾಸ ಹಾಗೂ ನಿರ್ಧಾರಗಳನ್ನು ಪ್ರಶ್ನಿಸಲಾಗಿದೆ:

ತ್ರಿಪಲ್ ತಲಾಖ್: ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ಕಾಂಗ್ರೆಸ್ ಬೆಂಬಲಿಸಿತ್ತು.

ಮಹಿಳಾ ಮೀಸಲಾತಿ ವಿಧೇಯಕ: ಆರಂಭದಲ್ಲಿ ಕಾಂಗ್ರೆಸ್ ವಿರುದ್ಧವಾಗಿ ಮತ ಚಲಾಯಿಸಿತ್ತು.

ಶಾ ಬಾನೋ ಪ್ರಕರಣ: ಮಹಿಳಾ ಹಕ್ಕುಗಳ ಕಡೆಗಣನೆ.

ಕರ್ನಾಟಕ ಸಂಪುಟ: ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ 33 ಸಚಿವರಿದ್ದರೂ ಒಬ್ಬೇ ಒಬ್ಬ ಮಹಿಳಾ ಸಚಿವರಿಲ್ಲದಿರುವುದು.

ಇದಕ್ಕೂ ಮುನ್ನ ಕೃತಿ ಸನೋನ್ ರಾಖಿ ಜಾಹೀರಾತಿನಲ್ಲಿ ಬಿಕಿನಿ/ಒಳ ಉಡುಪು ಮಾದರಿಯ ಬಟ್ಟೆ ಧರಿಸಿ ಸಹೋದರನಿಗೆ ರಾಖಿ ಕಟ್ಟುವುದು ಸೂಕ್ತವಲ್ಲ ಎಂದು ಕಂಗನಾ ಟೀಕಿಸಿದ್ದರು.:

Share

Leave a comment

Leave a Reply

Your email address will not be published. Required fields are marked *