Home ದಾವಣಗೆರೆ ‘ಮೊಗ್ಯಾಂಬೋ ಮೋದಿ’ಯಿಂದ ದೇಶದ ಪ್ರಜಾಪ್ರಭುತ್ವ ನಾಶ, ಪ್ರಧಾನಿ, ಅಮಿತ್ ಶಾ ಜೈಲಿಗೆ ಹೋಗುವುದು ನಿಶ್ಚಿತ: ರಾಹುಲ್ ಗಾಂಧಿ ಭವಿಷ್ಯ!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

‘ಮೊಗ್ಯಾಂಬೋ ಮೋದಿ’ಯಿಂದ ದೇಶದ ಪ್ರಜಾಪ್ರಭುತ್ವ ನಾಶ, ಪ್ರಧಾನಿ, ಅಮಿತ್ ಶಾ ಜೈಲಿಗೆ ಹೋಗುವುದು ನಿಶ್ಚಿತ: ರಾಹುಲ್ ಗಾಂಧಿ ಭವಿಷ್ಯ!

Share
ಮೋದಿ
Share

ಚೆನ್ನೈ: ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಪ್ರಧಾನಿ ಮೋದಿ ದೇಶದ ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದ್ದಾರೆ ಮತ್ತು ಯುವಕರ ಭವಿಷ್ಯವನ್ನು ಕಸಿದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಚೆನ್ನೈನಲ್ಲಿ ನಡೆದ ‘ಛಾತ್ರೋಂ ಕೀ ಗೂಂಜ್’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಅಧಿಕಾರದಲ್ಲಿರುವವರನ್ನು ಪ್ರಶ್ನಿಸುವುದು ಪ್ರಜಾಪ್ರಭುತ್ವದ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದರು.

ಪ್ರಧಾನಿ ಮೋದಿಯವರನ್ನು ‘ಮಿಷ್ಟರ್ ಇಂಡಿಯಾ’ ಸಿನಿಮಾದ ಖಳನಾಯಕ ‘ಮೊಗ್ಯಾಂಬೋ’ಗೆ ಹೋಲಿಸಿದ ರಾಹುಲ್ ಗಾಂಧಿ, ದೇಶದ ಸಂವಿಧಾನ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಮೇಲೆ ದಾಳಿ ನಡೆಸುತ್ತಿರುವ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯಾಯಾಂಗದ ಎದುರು ತಲೆಬಾಗಲೇಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. ಅಲ್ಲದೆ ಕೇಂದ್ರ ಸರ್ಕಾರವು ತಮಿಳುನಾಡಿನ ಭಾಷೆ, ಸಂಸ್ಕೃತಿ ಮತ್ತು ಇತಿಹಾಸದ ಮೇಲೆ ನಿರಂತರ ದಾಳಿ ನಡೆಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಪ್ರಜಾಪ್ರಭುತ್ವದ ಮೇಲಿನ ದಾಳಿ: ಚುನಾವಣೆಗಳನ್ನು ಹೈಜಾಕ್ ಮಾಡಲು ಹಾಗೂ ವಿದ್ಯಾರ್ಥಿಗಳ ಧ್ವನಿಯನ್ನು ಅಡಗಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದ್ದು, ಮೋದಿ ಅವರ ಆಡಳಿತದ ದಿನಗಳು ಎಣಿಕೆಯಾಗುತ್ತಿವೆ ಎಂದು ರಾಹುಲ್ ಹೇಳಿದರು.

ತಮಿಳುನಾಡಿಗೆ ಅನುದಾನ ಕಡಿತ: ನೂತನ ಶಿಕ್ಷಣ ನೀತಿಯ (NEP) ನೆಪದಲ್ಲಿ ತಮಿಳುನಾಡಿಗೆ ಬರಬೇಕಿದ್ದ 3,300 ಕೋಟಿ ರೂಪಾಯಿ ಅನುದಾನವನ್ನು ಕೇಂದ್ರ ಸರ್ಕಾರ ತಡೆಹಿಡಿದಿದೆ.

ಹಿಂದಿ ಹೇರಿಕೆ ಮತ್ತು NEET ವಿರೋಧ: ನೀಟ್ (NEET) ಪರೀಕ್ಷೆಯಿಂದಾಗಿ ತಮಿಳು ಮಾಧ್ಯಮದ ವಿದ್ಯಾರ್ಥಿಗಳಿಗೆ ವೈದ್ಯಕೀಯ (MBBS) ಸೀಟುಗಳ ಲಭ್ಯತೆಯಲ್ಲಿ ಶೇ. 87 ರಷ್ಟು ಕುಸಿತವಾಗಿದೆ ಹಾಗೂ ರಾಜ್ಯದ ಮೇಲೆ ಬಲವಂತವಾಗಿ ಹಿಂದಿ ಹೇರಲಾಗುತ್ತಿದೆ.

ವಿವಿಗಳ ಆರ್‌ಎಸ್‌ಎಸ್ ಮಯ: ರಾಜ್ಯದ ಶೇಕಡಾ 70 ರಷ್ಟು ವಿಶ್ವವಿದ್ಯಾಲಯಗಳಲ್ಲಿ ಉಪಕುಲಪತಿಗಳ ಹುದ್ದೆ ಖಾಲಿ ಉಳಿಸಿ, ರಾಜ್ಯಪಾಲರ ಮೂಲಕ ಆರ್‌ಎಸ್‌ಎಸ್ ಬೆಂಬಲಿತರನ್ನು ನೇಮಿಸಲು ಸಂಚು ರೂಪಿಸಲಾಗಿದೆ.

ಕೇಂದ್ರ ಸರ್ಕಾರದ ಈ ರೀತಿಯ ಕ್ರಮಗಳ ವಿರುದ್ಧ ಯುವಕರು ಮತ್ತು ವಿದ್ಯಾರ್ಥಿಗಳು ಭಯಪಡದೆ ನಿರಂತರವಾಗಿ ಪ್ರಶ್ನಿಸಬೇಕು ಹಾಗೂ ತಮ್ಮ ಹಕ್ಕುಗಳಿಗಾಗಿ ಹೋರಾಡಬೇಕು ಎಂದು ರಾಹುಲ್ ಗಾಂಧಿ ಕರೆ ನೀಡಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles