ಶಿವಮೊಗ್ಗ/ದಾವಣಗೆರೆ: ಮಧ್ಯ ಕರ್ನಾಟಕದ ಜೀವನಾಡಿ ಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ನೀರಿನ ಮಟ್ಟ ಸ್ಥಿರವಾಗಿದ್ದು, ಆಗಸ್ಟ್ 26ರ ಬೆಳಿಗ್ಗೆ 6 ಗಂಟೆಯ ವರದಿಯಂತೆ ಜಲಾಶಯದಲ್ಲಿ 59.898 ಟಿಎಂಸಿ ನೀರು ಸಂಗ್ರಹವಾಗಿದೆ.
ಇಂದಿನ ಜಲಾಶಯದ ಸ್ಥಿತಿಗತಿ:
ದಿನಾಂಕ: 26-08-2026 (ಬೆಳಿಗ್ಗೆ 6:00 ಗಂಟೆಗೆ)
ಗರಿಷ್ಠ ನೀರು ಸಂಗ್ರಹ ಮಟ್ಟ (FRL): 186 ಅಡಿ 0 ಇಂಚು (ಸಮುದ್ರ ಮಟ್ಟದಿಂದ 2,158.0 ಅಡಿ)
ಒಟ್ಟು ಗರಿಷ್ಠ ಸಂಗ್ರಹ ಸಾಮರ್ಥ್ಯ: 71.535 TMC
ಇಂದಿನ ನೀರಿನ ಮಟ್ಟ: 176 ಅಡಿ 4 ಇಂಚು (ಸಮುದ್ರ ಮಟ್ಟದಿಂದ 2,148.33 ಅಡಿ)
ಇಂದಿನ ನೀರು ಸಂಗ್ರಹ: 59.898 TMC
ಇನ್‌ಫ್ಲೋ (ಒಳಹರಿವು): 5,739 ಕ್ಯೂಸೆಕ್
ಔಟ್‌ಫ್ಲೋ (ಹೊರಹರಿವು): 206 ಕ್ಯೂಸೆಕ್ (ರಿವರ್ ಸ್ಲೂಯಿಸ್: 100 ಕ್ಯೂಸೆಕ್, ಆವಿ ಭವನ/ಎವಾಪರೇಷನ್: 106 ಕ್ಯೂಸೆಕ್)
ಕಾಲುವೆಗಳು: ಆರ್‌ಬಿಸಿ (R.B.C) – 0 ಕ್ಯೂಸೆಕ್, ಎಲ್‌ಬಿಸಿ (L.B.C) – 0 ಕ್ಯೂಸೆಕ್
ಕಳೆದ ವರ್ಷದ ಹೋಲಿಕೆ (ಇದೇ ದಿನಾಂಕಕ್ಕೆ):
ಕಳೆದ ವರ್ಷದ ನೀರಿನ ಮಟ್ಟ: 184 ಅಡಿ 5 ಇಂಚು
ಕಳೆದ ವರ್ಷದ ನೀರು ಸಂಗ್ರಹ: 69.553 TMC
ಕಳೆದ ವರ್ಷದ ಒಳಹರಿವು: 6,511 ಕ್ಯೂಸೆಕ್
ಕಳೆದ ವರ್ಷದ ಹೊರಹರಿವು: 4,115 ಕ್ಯೂಸೆಕ್
ಭದ್ರಾ ಡ್ಯಾಂಗೆ ಇಷ್ಟೊಂದು ಪ್ರಮಾಣದಲ್ಲಿ ನೀರು ಹರಿದು ಬಂದಿರುವುದು ಭದ್ರಾ ಅಚ್ಚುಕಟ್ಟು ಪ್ರದೇಶ ರೈತರ ಸಂತಸಕ್ಕೆ ಕಾರಣವಾಗಿದೆ. ಆದರೆ ಭದ್ರಾ ಎಡದಂಡೆ ಹಾಗೂ ಬಲದಂಡೆ ನಾಲೆಯಲ್ಲಿ ನೀರು ಹರಿಸಬೇಕೆಂಬ ಒತ್ತಾಯ ಜೋರಾಗಿದೆ. ಕೆಲವು ರೈತರು ಮುಂದಿನ ಬೇಸಿಗೆಗೆ ನೀರು ನೀಡಿ ಎಂದರೆ, ಮತ್ತೆ ಕೆಲವರು ಈಗಲೇ ನೀರು ಹರಿಸಿ. 120 ದಿನಗಳ ಕಾಲ ನೀರು ಹರಿಸಿದರೆ ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ರೈತರಿಗೆ ನೀರು ಸಿಗಲಿದೆ. ಇಲ್ಲದಿದ್ದರೆ ರೈತರು ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಅಳಲು ತೋಡಿಕೊಳ್ಳುತ್ತಿದ್ದಾರೆ.





Leave a comment