Home ದಾವಣಗೆರೆ ನಿಲ್ಲದ ನಟಿಯರ ವಾಗ್ಯುದ್ಧ: “ಹಬ್ಬ ಅಂದರೆ ಬರಿ ಸೌಂದರ್ಯದ ಪ್ರದರ್ಶನವಲ್ಲ”ವೆಂದು ಕಂಗನಾ ಟಾಂಗ್, ಕೃತಿಯೂ ಕೊಟ್ರು ತಿರುಗೇಟು!
ದಾವಣಗೆರೆನವದೆಹಲಿಬೆಂಗಳೂರುಸಿನಿಮಾ

ನಿಲ್ಲದ ನಟಿಯರ ವಾಗ್ಯುದ್ಧ: “ಹಬ್ಬ ಅಂದರೆ ಬರಿ ಸೌಂದರ್ಯದ ಪ್ರದರ್ಶನವಲ್ಲ”ವೆಂದು ಕಂಗನಾ ಟಾಂಗ್, ಕೃತಿಯೂ ಕೊಟ್ರು ತಿರುಗೇಟು!

Share
ಕಂಗನಾ
Share

ನವದೆಹಲಿ: ಖ್ಯಾತ ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರು ನಟಿ ಕೃತಿ ಸನೋನ್ ಅಭಿನಯದ ‘ಜಿವಾ’  ಸಂಸ್ಥೆಯ ರಕ್ಷಾ ಬಂಧನ ಜಾಹೀರಾತಿನ ಕುರಿತು ವ್ಯಕ್ತಪಡಿಸಿದ್ದ ತಮ್ಮ ವಿಮರ್ಶೆಯನ್ನು ಮತ್ತೆ ಸಮರ್ಥಿಸಿಕೊಂಡಿದ್ದಾರೆ. “ಭಾರತೀಯ ಹಬ್ಬಗಳು ಬರಿ ಗ್ಲಾಮರ್ ಅಥವಾ ಸೌಂದರ್ಯದ  ಪ್ರದರ್ಶನವಲ್ಲ, ಅವು ನಮ್ಮ ಸಂಸ್ಕೃತಿ ಮತ್ತು ನಾಗರಿಕತೆಯ ಅಭಿವ್ಯಕ್ತಿಗಳು” ಎಂದು ಕಂಗನಾ ಹೇಳಿದ್ದಾರೆ.

ವಿವಾದದ ಹಿನ್ನೆಲೆ:

‘ಜಿವಾ’ ಜ್ಯುವೆಲ್ಲರಿ ಬ್ರ್ಯಾಂಡ್‌ನ ರಕ್ಷಾ ಬಂಧನ ಜಾಹೀರಾತಿನಲ್ಲಿ ಕೃತಿ ಸನೋನ್ ಧರಿಸಿದ್ದ ಬ್ರಾಲೆಟ್ ಶೈಲಿಯ ಉಡುಪು ಹಾಗೂ ಪೂಜಾ ಥಾಲಿ, ತಿಲಕದಂತಹ ಸಾಂಪ್ರದಾಯಿಕ ಅಂಶಗಳ ಕೊರತೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದನ್ನೇ ಉಲ್ಲೇಖಿಸಿ ಕಂಗನಾ, “ರಾಖಿ ಕಟ್ಟುವಾಗ ಇಂತಹ ಉಡುಪು ಧರಿಸುವ ಅಗತ್ಯವೇನಿತ್ತು?” ಎಂದು ಪ್ರಶ್ನಿಸಿದ್ದರು.

ಕೃತಿ ಸನೋನ್ ಮತ್ತು ರಾಹುಲ್ ಗಾಂಧಿ ಪ್ರತಿಕ್ರಿಯೆ:

ಇದಕ್ಕೆ ಪ್ರತಿಯಾಗಿ ಕೃತಿ ಸನೋನ್, “ಸಂಸ್ಕೃತಿ ಮತ್ತು ಪರಂಪರೆ ಎಂಬುದು ಹೃದಯದಲ್ಲಿರುತ್ತದೆ, ಉಡುಪಿನ ನೆಕ್‌ಲೈನ್‌ನಲ್ಲಲ್ಲ (Neckline)” ಎಂದು ಮರುಪ್ರಶ್ನಿಸಿದ್ದರು. ಇನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡ ಕೃತಿ ಬೆಂಬಲಕ್ಕೆ ನಿಂತು, “ಮಹಿಳೆಯರು ಏನು ಧರಿಸಬೇಕು ಎಂಬುದು ಅವರ ವೈಯಕ್ತಿಕ ಹಕ್ಕು” ಎಂದು ಹೇಳಿದ್ದರು.

ಕಂಗನಾ ರಣಾವತ್ ನೀಡಿರುವ ಖಡಕ್ ಉತ್ತರ:

ಖಾಸಗಿ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಾಹುಲ್ ಗಾಂಧಿ ಹಾಗೂ ಕೃತಿಯ ಹೇಳಿಕೆಗಳಿಗೆ ತಿರುಗೇಟು ನೀಡಿದ ಕಂಗನಾ:

ಸಂಪ್ರದಾಯಕ್ಕೆ ಚೌಕಟ್ಟುಗಳಿವೆ: “ನಮ್ಮ ಧರ್ಮ ಮತ್ತು ಹಬ್ಬಗಳಿಗೆ ತನ್ನದೇ ಆದ ನಿಯಮಗಳು ಮತ್ತು ಪವಿತ್ರ ಚೌಕಟ್ಟುಗಳಿವೆ. ಪೂಜೆ ಮಾಡುವಾಗ ಹೇಗೆ ನಿಯಮಗಳಿವೆಯೋ, ರಕ್ಷಾ ಬಂಧನಕ್ಕೂ ಆ ರೀತಿಯ ಸಾಂಸ್ಕೃತಿಕ ಮೌಲ್ಯಗಳಿವೆ.”

ಬರಿ ಉಡುಪಿನ ಪ್ರಶ್ನೆಯಲ್ಲ: “ಇಲ್ಲಿ ಕೇವಲ ಬ್ರಾಲೆಟ್ ಉಡುಪಿನ ಪ್ರಶ್ನೆಯಷ್ಟೇ ಇಲ್ಲ. ಆ ಜಾಹೀರಾತಿನಲ್ಲಿ ಪೋಷಕರೆಲ್ಲಿದ್ದಾರೆ? ಮನೆ ಎ ಎಲ್ಲಿದೆ? ಪೂಜೆಯ ಹಲ್ವಾ-ಪೂರಿ, ದೇವರಿಗಾಗಿ ಅರ್ಪಿಸುವ ದೀಪ, ಅಕ್ಷತೆ, ಧೂಪ ಏನೂ ಇಲ್ಲ. ಸಾಂಪ್ರದಾಯಿಕ ಅಂಶಗಳನ್ನೇ ಕಡೆಗಣಿಸಲಾಗಿದೆ.”

ಸಂಸ್ಕೃತಿಯ ಗೌರವ: “ಸಿನಿಮಾಗಳಲ್ಲಿ ಏನು ಬೇಕಾದರೂ ಧರಿಸಲಿ, ಯಾರು ಬೇಡ ಎಂದಿದ್ದಾರೆ? ಆದರೆ ಸಾಂಸ್ಕೃತಿಕ ಹಬ್ಬಗಳನ್ನು ಚಿತ್ರಿಸುವಾಗ ಆಚರಣೆಯ Dignity ಯನ್ನು ಉಳಿಸಿಕೊಳ್ಳಬೇಕು.”

ಜಾಹೀರಾತು ಹಿಂಪಡೆದ ಜಿವಾ (GIVA) ಸಂಸ್ಥೆ:

ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಹಾಗೂ ಕಂಗನಾ ಅವರ ಸರಣಿ ಟೀಕೆಗಳ ನಂತರ, ಜಿವಾ ಸಂಸ್ಥೆಯು ಸಾರ್ವಜನಿಕರ ಭಾವನೆಗಳಿಗೆ ಗೌರವ ನೀಡಿ ಈ ರಕ್ಷಾ ಬಂಧನ ಜಾಹೀರಾತನ್ನು ಎಲ್ಲಾ ಮಾಧ್ಯಮಗಳಿಂದ ಅಧಿಕೃತವಾಗಿ ಹಿಂಪಡೆದಿದೆ.

Share

Leave a comment

Leave a Reply

Your email address will not be published. Required fields are marked *

Related Articles