Home ದಾವಣಗೆರೆ ಮೊದಲ ಸೆಮಿಸ್ಟರ್‌ನಲ್ಲೇ ಎಲ್ಲಾ ವಿಷಯಗಳಲ್ಲೂ ಫೇಲ್: ಇಂದು 800 ಕೋಟಿ ರೂ. ಬಾಹ್ಯಾಕಾಶ ಸಂಸ್ಥೆ ಒಡೆಯ ಆನಂದ್ ಮೇಗಲಿಂಗಂ ಸ್ಫೂರ್ತಿದಾಯಕ ಕಥೆ!
ದಾವಣಗೆರೆನವದೆಹಲಿಬೆಂಗಳೂರು

ಮೊದಲ ಸೆಮಿಸ್ಟರ್‌ನಲ್ಲೇ ಎಲ್ಲಾ ವಿಷಯಗಳಲ್ಲೂ ಫೇಲ್: ಇಂದು 800 ಕೋಟಿ ರೂ. ಬಾಹ್ಯಾಕಾಶ ಸಂಸ್ಥೆ ಒಡೆಯ ಆನಂದ್ ಮೇಗಲಿಂಗಂ ಸ್ಫೂರ್ತಿದಾಯಕ ಕಥೆ!

Share
ವಿಷಯ
Share

ಚೆನ್ನೈ: ಶಾಲಾ ದಿನಗಳಲ್ಲಿ 6 ಕಿಲೋಮೀಟರ್‌ಗಳ ಕಾಲ ಕಾಲ್ನಡಿಗೆಯಲ್ಲೇ ಸಾಗುತ್ತಿದ್ದ ಬಾಲಕ, ಕಾಲೇಜಿನ ಮೊದಲ ಸೆಮಿಸ್ಟರ್‌ನಲ್ಲಿ ಎಲ್ಲಾ ವಿಷಯಗಳಲ್ಲೂ ಫೇಲ್ ಆಗಿದ್ದ ಯುವಕ ಇಂದು ಭಾರತದ ಖಾಸಗಿ ಬಾಹ್ಯಾಕಾಶ ರಂಗದಲ್ಲೇ ಹೊಸ ಚರಿತ್ರೆ ಸೃಷ್ಟಿಸಿದ್ದಾರೆ. ತಮಿಳುನಾಡಿನ ಆನಂದ್ ಮೇಗಲಿಂಗಂ ಅವರ ಈ ಸಾಹಸಗಾಥೆ ಇಂದು ಲಕ್ಷಾಂತರ ಯುವಕರಿಗೆ ದೊಡ್ಡ ಪ್ರೇರಣೆಯಾಗಿದೆ.

ಆನಂದ್ ಅವರ ತಂದೆ ಟ್ರ್ಯಾಕ್ಟರ್ ಚಾಲಕರಾಗಿ ಕುಟುಂಬವನ್ನು ನಡೆಸುತ್ತಿದ್ದರು. ಬಡತನ ಮತ್ತು ಸವಾಲುಗಳ ನಡುವೆಯೇ ಬೆಳೆದ ಆನಂದ್, ಆರಂಭದಲ್ಲಿ ಕಂಪ್ಯೂಟರ್ ಸೈನ್ಸ್ ಕೋರ್ಸ್‌ಗೆ ಸೇರಿ ವಿಫಲರಾಗಿ ಹೊರಬಂದಿದ್ದರು. ಆದರೆ ಕ್ರೀಡಾ ಕೋಟಾದಡಿಯಲ್ಲಿ ಅವರು ಬಾರತ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಅಂಡ್ ಟೆಕ್ನಾಲಜಿಯಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಸೇರಿದರು. ಶ್ರಮವಹಿಸಿ ಓದಿ 9.8 CGPA ನೊಂದಿಗೆ ಗೋಲ್ಡ್ ಮೆಡಲಿಸ್ಟ್ ಆಗಿ ಹೊರಬಂದರು.

ಡಿಸೆಂಬರ್ 2021 ರಲ್ಲಿ ಅವರು ತಮ್ಮ ತಂದೆಯನ್ನೇ ಶೇ 50% ಪಾಲುದಾರರನ್ನಾಗಿ ಮಾಡಿಕೊಂಡು ‘ಸ್ಪೇಸ್ ಝೋನ್ ಇಂಡಿಯಾ’ (Space Zone India) ಎಂಬ ನವೋದ್ಯಮವನ್ನು ಆರಂಭಿಸಿದರು. ಆಗಸ್ಟ್ 24, 2024 ರಂದು ಇವರ ನೇತೃತ್ವದಲ್ಲಿ ‘RHUMI-1’ ಎಂಬ ಭಾರತದ ಮೊದಲ ಮರುಬಳಕೆಯ ಹೈಬ್ರಿಡ್ ರಾಕೆಟ್ ಯಶಸ್ವಿಯಾಗಿ ಉಡಾವಣೆಯಾಯಿತು. ಇಂದು ಇವರ ಕಂಪನಿಯ ಮೌಲ್ಯ 800 ಕೋಟಿ ರೂಪಾಯಿಗಳನ್ನು ತಲುಪಿದೆ.

ಒಂದು ಕಾಲದಲ್ಲಿ ಯುಎಸ್ (US) ವೀಸಾ ತಿರಸ್ಕರಿಸಲ್ಪಟ್ಟಿದ್ದ ಆನಂದ್, ನಂತರ ಅಮೆರಿಕದ ವಿದೇಶಾಂಗ ಇಲಾಖೆಯ ವಿಶೇಷ ಕಾರ್ಯಕ್ರಮದಡಿಯಲ್ಲಿ ಆಯ್ಕೆಯಾಗಿ ನಾಸಾ (NASA) ತರಬೇತಿ ಕೇಂದ್ರಗಳಲ್ಲಿ ವಿಜ್ಞಾನಿಗಳೊಂದಿಗೆ ಕೆಲಸ ಮಾಡುವ ಅವಕಾಶವನ್ನೂ ಪಡೆದುಕೊಂಡರು. ಸದ್ಯ ಸ್ಪೇಸ್ ಝೋನ್ ಇಂಡಿಯಾ ಒಂದೇ ಬಾರಿಗೆ ಎರಡು ರಾಕೆಟ್‌ಗಳನ್ನು ಉಡಾವಣೆ ಮಾಡುವ ‘RHUMI Twin’ ಮಿಷನ್‌ನತ್ತ ಹೆಜ್ಜೆ ಇಡುತ್ತಿದೆ.

Share

Leave a comment

Leave a Reply

Your email address will not be published. Required fields are marked *

Related Articles