ಮುಂಬೈ: ಪ್ರೇಮ ಸಂಬಂಧ ಮುರಿದುಬಿದ್ದ ಬೆನ್ನಲ್ಲೇ ಅಪರೂಪದ ರೀತಿಯಲ್ಲಿ ಮಹಾರಾಷ್ಟ್ರ ಲೋಕಸೇವಾ ಆಯೋಗದ (MPSC) ಡ್ರಗ್ ಇನ್ಸ್ಪೆಕ್ಟರ್ ಹುದ್ದೆಯ ಪರೀಕ್ಷಾ ಅಕ್ರಮ ಬಯಲಿಗೆ ಬಂದಿದೆ. ಲೀಕ್ ಆದ ಪ್ರಶ್ನೆ ಪತ್ರಿಕೆ, 5 ಲಕ್ಷ ರೂಪಾಯಿ ಡೀಲ್ ಹಾಗೂ ಪ್ರೇಮಿಗಳ ಜಗಳ ಈಗ ಹಗರಣವನ್ನು ತನಿಖೆಯ ಹಂತಕ್ಕೆ ತಂದುನಿಲ್ಲಿಸಿದೆ.
ಏನಿದು ಘಟನೆ? ಮಾರ್ಚ್ 22 ರಂದು ನಡೆದ ಎಂಪಿಎಸ್ಸಿ ಡ್ರಗ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ನಂದೂರ್ಬಾರ್ನ ಕೋಚಿಂಗ್ ಸೆಂಟರ್ ಮಾಲೀಕ ಪ್ರವೀಣ್ ಪಾಟೀಲ್ ಎಂಬಾತನಿಗೆ 5 ಲಕ್ಷ ರೂಪಾಯಿ ನೀಡಿ ಅಭ್ಯರ್ಥಿಯೊಬ್ಬಳ ತಂದೆ ಖರೀದಿಸಿದ್ದರು ಎನ್ನಲಾಗಿದೆ. ಈ ಪರೀಕ್ಷಾ ಪತ್ರಿಕೆಯನ್ನು ಅಭ್ಯರ್ಥಿಯು ತನ್ನ ಪ್ರೇಮಿ ಗೌರವ್ ಪಾಟೀಲ್ಗೆ ಹಂಚಿಕೊಂಡಿದ್ದಳು. ಪರೀಕ್ಷೆಯಲ್ಲಿ ಆಕೆ 78 ಪ್ರಶ್ನೆಗಳಿಗೆ ಉತ್ತರಿಸಿ ಅರ್ಹತೆಯನ್ನೂ ಪಡೆದಿದ್ದಳು.
ಬ್ರೇಕಪ್ನಿಂದ ಬಯಲಾಯ್ತು ರಹಸ್ಯ:
ಇಬ್ಬರ ನಡುವೆ ಬ್ರೇಕಪ್ ಆದ ನಂತರ, ಗೌರವ್ ಪಾಟೀಲ್ ಈ ವಿಷಯವನ್ನು ಎಂಪಿಎಸ್ಸಿಗೆ ದೂರು ನೀಡುವ ಮೂಲಕ ರಟ್ಟು ಮಾಡಿದ್ದಾನೆ. ಈ ಆಧಾರದ ಮೇಲೆ ಮುಂಬೈ ಕ್ರೈಮ್ ಬ್ರಾಂಚ್ ತನಿಖೆ ಕೈಗೊಂಡು ಎಂಪಿಎಸ್ಸಿ ಹೆಚ್ಚುವರಿ ಕಾರ್ಯದರ್ಶಿ ಅಭಿಜಿತ್ ಲೆಂಡ್ವೆ ಸೇರಿದಂತೆ ಆರು ಜನರನ್ನು ಬಂಧಿಸಿದೆ.
ಪರೀಕ್ಷೆ ರದ್ದು ಮಾಡಿದ MPSC:
ಹಗರಣ ತೀವ್ರಗೊಳ್ಳುತ್ತಿದ್ದಂತೆ ಎಂಪಿಎಸ್ಸಿ ಸಂಪೂರ್ಣ ನೇಮಕಾತಿ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದು, ಶೀಘ್ರದಲ್ಲೇ ಮರುಪರೀಕ್ಷೆ ನಡೆಸುವುದಾಗಿ ತಿಳಿಸಿದೆ. ಹಳೆಯ ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸುವ ಅಥವಾ ಶುಲ್ಕ ಪಾವತಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
- 5 ಲಕ್ಷ ಪೇಪರ್ ಡೀಲ್
- Gaurav Patil paper leak whistleblowing
- Maharashtra MPSC paper leak scam
- MPSC Drug Inspector recruitment cancelled
- MPSC news
- MPSC paper leak breakup revenge
- MPSC re-exam 2026
- MPSC ಅಕ್ರಮ
- MPSC ಪರೀಕ್ಷೆ ರದ್ದು
- Mumbai Crime Branch MPSC arrest
- Pravin Patil Nandurbar coaching scam
- ಅಭಿಜಿತ್ ಲೆಂಡ್ವೆ ಬಂಧನ
- ಡ್ರಗ್ ಇನ್ಸ್ಪೆಕ್ಟರ್ ಪರೀಕ್ಷಾ ಹಗರಣ
- ಪ್ರೇಮ ವೈಫಲ್ಯ ಪೇಪರ್ ಲೀಕ್
- ಮಹಾರಾಷ್ಟ್ರ MPSC ಪೇಪರ್ ಲೀಕ್
- ಮುಂಬೈ ಕ್ರೈಮ್ ಬ್ರಾಂಚ್.





Leave a comment