ವದೆಹಲಿ: ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಮತ್ತು ಯೋಗ ಗುರು ಬಾಬಾ ರಾಮ್‌ದೇವ್ ನಡುವಿನ ವಾಕ್ಸಮರ ತೀವ್ರ ಸ್ವರೂಪ ಪಡೆದುಕೊಂಡಿದೆ. ಕಂಗನಾ ಅವರ ವೈಯಕ್ತಿಕ ಜೀವನ ಮತ್ತು ಯೌವನದ ಕುರಿತು ಬಾಬಾ ರಾಮ್‌ದೇವ್ ನೀಡಿದ್ದ ಹೇಳಿಕೆಗೆ ಕಂಗನಾ ಅವರು ಕಟುವಾಗಿ ತಿರುಗೇಟು ನೀಡಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿದ ಕಂಗನಾ, “ರಾಮ್‌ದೇವ್ ಅವರು ನನ್ನ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಲು ನನ್ನ ಬೆಡ್‌ರೂಂನಲ್ಲಿ ಬಾವಲಿಯಂತೆ ನೇತಾಡುತ್ತಿದ್ದರೇ? ನನ್ನ ಯೌವನದಲ್ಲಿ ಅವರು ನನ್ನನ್ನು ನೋಡಿದ್ದಾರೆಯೇ? ಅವರು ಏನು ನೋಡಿದರು ಎಂಬುದನ್ನು ಸ್ಪಷ್ಟಪಡಿಸಲಿ” ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ತಮಗೆ ಕ್ಯಾರಕ್ಟರ್ ಸರ್ಟಿಫಿಕೇಟ್ (ಚಾರಿತ್ರ್ಯದ ಪಾಠ) ನೀಡುವ ಅಗತ್ಯ ರಾಮ್‌ದೇವ್‌ಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮ್‌ದೇವ್ ಪೂರ್ಣ ಪ್ರಮಾಣದ ಉದ್ಯಮಿ:
ಸನಾತನ ಧರ್ಮ ಮತ್ತು ಆಯುರ್ವೇದದಿಂದ ಆರಂಭವಾದ ರಾಮ್‌ದೇವ್ ಅವರ ಪಯಣ ಈಗ ಬಂಡವಾಳಶಾಹಿ ಉದ್ಯಮವಾಗಿ ಬದಲಾಗಿದೆ ಎಂದಿರುವ ಕಂಗನಾ, “ಆಯುರ್ವೇದ, ಗಿಡಮೂಲಿಕೆ ಮತ್ತು ಯೋಗದಿಂದ ಆರಂಭಿಸಿ ಈಗ ಒಳ ಉಡುಪುಗಳನ್ನು ಮಾರಾಟ ಮಾಡುವ ಹಂತಕ್ಕೆ ತಲುಪಿದ್ದಾರೆ. ಅವರು ಪೂರ್ಣ ಪ್ರಮಾಣದ ಉದ್ಯಮಿಯಾಗಿದ್ದಾರೆ. ಆದರೆ ಧರ್ಮದ ಮುಖವಾಡ ಹಾಕಿಕೊಂಡು ಮಾತನಾಡಬಾರದು” ಎಂದು ವಾಗ್ದಾಳಿ ನಡೆಸಿದ್ದಾರೆ.
ವಿವಾದಕ್ಕೆ ಹಿನ್ನೆಲೆ: ಇತ್ತೀಚೆಗೆ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಯುವಜನರ ನಡವಳಿಕೆಯನ್ನು ಕಂಗನಾ ‘ಜನರೇಷನ್ ಗಟಾರ್’ (Generation Gutter) ಎಂದು ಕರೆದಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಾಬಾ ರಾಮ್‌ದೇವ್, ಕಂಗನಾ ಅವರ ಅರ್ಹತೆ, ಬಾಲ್ಯ ಹಾಗೂ ಯೌವನದ ನಡವಳಿಕೆಯನ್ನು ಪ್ರಶ್ನಿಸಿ, ಅವರ ಮನಸ್ಸು ದೂಷಿತಗೊಂಡಿದೆ ಎಂದು ಟೀಕಿಸಿದ್ದರು. ಈ ಟೀಕೆಗೆ ಕಂಗನಾ ಈಗ ಖಡಕ್ ಕೌಂಟರ್ ನೀಡಿದ್ದಾರೆ.
- Baba Ramdev
- BJP MP Kangana
- Bollywood news
- Generation Gutter
- Kangana bedroom bat comment
- Kangana Ranaut
- Kangana Ranaut news
- Kangana vs Ramdev feud
- Patanjali
- Sudhir Chaudhary interview
- ಕಂಗನಾ ಕೌಂಟರ್
- ಕಂಗನಾ ರಣಾವತ್
- ಕಂಗನಾ ರಾಮ್‌ದೇವ್ ವಿವಾದ
- ಕಂಗನಾ ಸಂದರ್ಶನ
- ಪತಂಜಲಿ
- ಬಾಬಾ ರಾಮ್‌ದೇವ್
- ಬಾಲಿವುಡ್ ಸುದ್ದಿ
- ಬಾವಲಿ ಕಮೆಂಟ್
- ಬಿಜೆಪಿ ಸಂಸದೆ ಕಂಗನಾ
- ಸನಾತನ ಧರ್ಮ





Leave a comment